ಐಟಂ ಹಾಡಿಗೆ ಸೊಂಟ ಕೊಟ್ಟ ಪ್ರಿಯಾಂಕಾ ಚೋಪ್ರಾ

By Rajendra

ಬಾಲಿವುಡ್ ಚಿತ್ರಗಳ ಹೀರೋಯಿನ್ ಪ್ರಿಯಾಂಕಾ ಚೋಪ್ರಾ ಐಟಂ ಹಾಡೊಂದಕ್ಕೆ ಸೊಂಟ ಕೊಟ್ಟಿದ್ದಾರೆ. ಸಂಜಯ್ ಗುಪ್ತಾ ಅವರ ಹೊಸ ಚಿತ್ರ 'ಶೂಟೌಟ್ ಅಟ್ ವಾದಲಾ' ಚಿತ್ರದಲ್ಲಿ ಐಟಂ ಡಾನ್ಸ್ ಮಾಡಲಿದ್ದಾರೆ. ಪ್ರಿಯಾಂಕಾ ಐಟಂ ಹಾಡಿನಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲು.

"ಬಬ್ಲಿ ಬದ್ಮಾಷ್ ಹೈ..." ಎಂಬ ಸಾಹಿತ್ಯದ ಹಾಡಿಗೆ ಪ್ರಿಯಾಂಕಾ ಹೆಜ್ಜೆ ಜೊತೆಗೆ ತಮ್ಮ ಸೊಂಟವನ್ನು ಬಳುಕಿಸಿದ್ದಾರೆ. ಈ ಹಾಡಿನ ಮೂಲಕ ಬಾಲಿವುಡ್ ಗೆ ಮತ್ತೊಬ್ಬ ಐಟಂ ಬೆಡಗಿ ಸಿಕ್ಕಂತಾಗಿದೆ. ಅನು ಮಲಿಕ್ ಸಂಗೀತ ಸಂಯೋಜನೆ ಹಾಡು ಭರ್ಜರಿಯಾಗಿದೆ ಎನ್ನುತ್ತವೆ ಮೂಲಗಳು.

ಈ ಚಿತ್ರದ ಉಳಿದ ಪಾತ್ರವರ್ಗದಲ್ಲಿ ಜಾನ್ ಅಬ್ರಹಾಂ, ಅನಿಲ್ ಕಪೂರ್, ಕಂಗನಾ ರನೌತ್, ಸೋನು ಸೂದ್, ಮನೋಜ್ ಬಾಜ್‌ಪೇಯಿ ಹಾಗೂ ತುಷಾರ್ ಕಪೂರ್ ಇದ್ದಾರೆ. ಈಗಾಗಲೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮುಂಬೈ ಪೊಲೀಸರ ಎನ್‌ಕೌಂಟರ್ ಒಂದರ ಕಥೆಯನ್ನು ಚಿತ್ರ ಒಳಗೊಂಡಿದೆ.

ನವೆಂಬರ್ 1, 1982ರಲ್ಲಿ ಮುಂಬೈನ ವಾದಲಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್ ನಲ್ಲಿ ಗ್ಯಾಂಗ್‌ಸ್ಟರ್ ಮಾನ್ಯ ಸುರ್ವೆ ಪೊಲೀಸರ ಗುಂಡಿಗೆ ಬಲಿಯಾದ. ಇದೇ ಕಥೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಮೇ.1ರಂದು ಚಿತ್ರ ಬಿಡುಗಡೆಯಾಗಲಿದೆ. (ಏಜೆನ್ಸೀಸ್)

More from Filmibeat

English summary
Actress Priyanka Chopra will perform a special retro song in Sanjay Gupta's new film Shootout At Wadala. This will be Piggy Chops' first ever item song in a film. "So Priyanka Chopra it is guys! She will be performing our smashing retro chartbuster - 'Babli badmaash hai', composed by Anu Malik," Sanjay Gupta tweeted.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X