ಮಗುವಿನ ಆರೈಕೆಯಲ್ಲಿ ಪ್ರಿಯಾಂಕಾ ಚೋಪ್ರಾ: ಚಿತ್ರರಂಗಕ್ಕೆ ಪಿಗ್ಗಿ ಗುಡ್‌ ಬೈ?

ನಟಿ ಪ್ರಿಯಾಂಕಾ ಚೋಪ್ರಾ ಅವರು ಸದ್ಯ ತಮ್ಮ ಮಗುವಿನ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಸ್ ಇಬ್ಬರೂ ಕೂಡ ಈಗ ತಂದೆ, ತಾಯಿ ಆಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ನಟಿ ಪ್ರಿಯಾಂಕಾ ದಂಪತಿ ಮಗುವನ್ನು ಪಡೆದುಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮಗುವನ್ನು ಪಡೆದಿರುವುದು, ಚಿತ್ರ ತಂಡಗಳಿಗೀಗ ತಲೆ ನೋವು ತಂದಿದೆ. ಯಾಕೆಂದರೆ ಪ್ರಿಯಾಂಕಾ ಸದ್ಯಕ್ಕೆ ಸಿನಿಮಾ ರಂಗದಿಂದ ದೂರ ಉಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದರಿಂದ ಪ್ರಿಯಾಂಕಾ ಸಹಿ ಮಾಡಿರುವ ಚಿತ್ರ ತಂಡಗಳು ತಲೆಕೆಡಿಸಿಕೊಂಡಿವೆ.

ಬಾಲಿವುಡ್‌ ಚಿತ್ರರಂಗವನ್ನು ದಶಕಗಳ ಕಾಲ ಆಳಿದ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ಗೆ ಹಾರಿದ್ದಾರೆ. ಪ್ರಿಯಾಂಕಾ ಹಾಲಿವುಡ್‌ಗೆ ಹೋದ ಬಳಿಕ ಬಾಲಿವುಡ್‌ ಸಿನಿಮಾಗಳನ್ನು ಮಾಡುವುದು ಕಡಿಮೆ ಮಾಡಿದ್ದಾರೆ. ಆದರೆ ಆಗಾಗ ಒಂದೊಂದು ಬಾಲಿವುಡ್‌ ಚಿತ್ರಗಳಲ್ಲಿ ನಟಿ ಪ್ರಿಯಾಂಕಾ ಕಾಣಿಸಿಕೊಳ್ಳುತ್ತಾರೆ.

'ಜೀ ಲೇ ಝರಾ' ಚಿತ್ರದಿಂದ ಹೊರ ಬರ್ತಾರಾ ಪ್ರಿಯಾಂಕಾ ಚೋಪ್ರಾ?

'ಜೀ ಲೇ ಝರಾ' ಚಿತ್ರದಿಂದ ಹೊರ ಬರ್ತಾರಾ ಪ್ರಿಯಾಂಕಾ ಚೋಪ್ರಾ?

ನಟಿ ಪ್ರಿಯಾಂಕಾ ಚೋಪ್ರಾ ಕೊನೆಯದಾಗಿ ಸಹಿ ಮಾಡಿರುವ ಬಾಲಿವುಡ್‌ ಚಿತ್ರ ಅಂದರೆ ಅದು 'ಜೀ ಲೇ ಝರಾ'. ಈ ಚಿತ್ರದಲ್ಲಿ ನಟಿಸುವುದಾಗಿ ನಟಿ ಪ್ರಿಯಾಂಕಾ ಚೋಪ್ರಾ ಸಹಿ ಹಾಕಿದ್ದಾರಂತೆ. ಈ ವಿಚಾರವನ್ನು ಹಲವು ದಿನಗಳ ಹಿಂದೆಯೇ ಚಿತ್ರ ತಂಡ ಅಧಿಕೃತವಾಗಿ ಪ್ರಕಟ ಮಾಡಿತ್ತು. ಆದರೆ ಈಗ ನಟಿ ಪ್ರಿಯಾಂಕಾ ಚಿತ್ರದಲ್ಲಿ ಅಭಿನಯಿಸುವುದು ಬಹುತೇಕ ಅನುಮಾನ. ಹಾಗಾಗಿ ಸಿನಿಮಾ ತಂಡ ಪ್ರಿಯಾಂಕಾ ಚೋಪ್ರಾ ಜಾಗಕ್ಕೆ ಮತ್ತೊಬ್ಬ ನಟಿಯನ್ನು ಹುಡುಕಲು ಮುಂದಾಗಿದೆಯಂತೆ ಚಿತ್ರತಂಡ.

ಚಿತ್ರರಂಗದಿಂದಲೇ ದೂರ ಉಳಿಯುತ್ತಾರಾ ಪ್ರಿಯಾಂಕಾ?

ಚಿತ್ರರಂಗದಿಂದಲೇ ದೂರ ಉಳಿಯುತ್ತಾರಾ ಪ್ರಿಯಾಂಕಾ?

ಅಷ್ಟಕ್ಕೂ ಪ್ರಿಯಾಂಕಾ ಅವರ ಬಗ್ಗೆ ಹೀಗೊಂದು ಸುದ್ದಿ ಕೂಡ ಹಬ್ಬಿದೆ. ಪ್ರಿಯಾಂಕಾ ಚೋಪ್ರಾ ಅವರು ಕೇವಲ ಒಂದು ಸಿನಿಮಾದಿಂದ ಮಾತ್ರ ಹೊರ ಬರುವುದಿಲ್ಲ. ಬದಲಿಗೆ ಸದ್ಯಕ್ಕೆ ಸಿನಿಮಾ ರಂಗಕ್ಕೆ ಗುಡ್‌ ಬೈ ಹೇಳಲಿದ್ದಾರಂತೆ. ಪ್ರಿಯಾಂಕಾ ಅವರು ಸದ್ಯ ಮಗುವಿನ ಆರೈಕೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾರಂತೆ. ಹಾಗಾಗಿ ಕೆಲ ವರ್ಷಗಳು ಸಿನಿಮಾ ರಂಗದಿಂದಲೇ ದೂರ ಉಳಿಯುವ ನಿರ್ಧಾರ ಮಾಡಿ ಬಿಟ್ಟಿದ್ದಾರೆ ಎನ್ನಲಾಗಿದೆ. ಸಿನಿಮಾಗಳನ್ನು ಒಪ್ಪಿ ಕೊಂಡರೆ ಮಗುವಿನ ಆರೈಕೆಯಲ್ಲಿ ತೊಂದರೆಯಾಗುತ್ತದೆ, ಅಲ್ಲದೇ ಬೇರೆ ಯಾರನ್ನು ಮಗುವನ್ನು ನೋಡಿಕೊಳ್ಳಲು ನೇಮಕ ಮಾಡಲು ಪ್ರಿಯಾಂಕಾ ಅವರಿಗೆ ಇಷ್ಟ ಇಲ್ಲ ಅಂತೆ. ಹಾಗಾಗಿ ಸ್ವತಃ ಅವರೇ ಮಗುವನ್ನು ನೋಡಿಕೊಳ್ಳಲು ಮುಂದಾಗಿದ್ದಾರಂತೆ.

6 ತಿಂಗಳಿಗೆ ಹುಟ್ಟಿದ ಪ್ರಿಯಾಂಕಾ-ನಿಕ್ ಮಗು!

6 ತಿಂಗಳಿಗೆ ಹುಟ್ಟಿದ ಪ್ರಿಯಾಂಕಾ-ನಿಕ್ ಮಗು!

ನಟಿ ಪ್ರಿಯಾಂಕಾ ಮತ್ತು ನಿಕ್ ಜೋನಸ್ ತಾವು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಈ ವಿಚಾರ ಹೊರ ಬರುತ್ತಲೇ, ಪ್ರಿಯಾಂಕಾ ಮತ್ತು ನಿಕ್‌ಗೆ ಶುಭಾಶಯಗಳು ಹರಿದು ಬಂದವು. ಆದರೆ ಮಗುವಿನ ಬಗ್ಗೆ ಕೂಡ ಒಂದಷ್ಟು ವಿಷಯಗಳು ಕೂಡ ಹರಿದಾಡಿವೆ. ಪ್ರಿಯಾಂಕಾ ಮತ್ತು ನಿಕ್ ಅವರ ಹೆಣ್ಣು ಮಗು ಆರು ತಿಂಗಳಿಗೆ ಜನಿಸಿದೆ ಎನ್ನುವ ಸುದ್ದಿ ಹಬ್ಬಿದೆ. ಹಾಗಾಗಿ ಮಗುವಿಗೆ ಹೆಚ್ಚಿನ ಆರೈಕೆಯ ಅವಶ್ಯಕತೆ ಇದೆ ಎನ್ನಲಾಗುತ್ತಿದೆ.

ಆಲಿಯಾ ಭಟ್, ಕತ್ರಿನ ಜೊತೆಗೆ ಅಭಿನಯಿಸಬೇಕಿದ್ದ ಪ್ರಿಯಾಂಕಾ!

ಆಲಿಯಾ ಭಟ್, ಕತ್ರಿನ ಜೊತೆಗೆ ಅಭಿನಯಿಸಬೇಕಿದ್ದ ಪ್ರಿಯಾಂಕಾ!

'ಜೀ ಲೇ ಝರಾ' ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್‌ ಜೊತೆಗೆ ಅಭಿನಯಿಸಬೇಕಿತ್ತು. ಬಾಲಿವುಡ್‌ನ ಈ ಮೂವರು ನಟಿಯರು ಒಂದೇ ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಆದರೆ ಅದು ಸಾಕಾರಗೊಳ್ಳುವ ಹಾಗೆ ಕಾಣುತ್ತಿಲ್ಲ. ಯಾಕೆಂದರೆ ನಟಿ ಪ್ರಿಯಾಂಕಾ ಅವರು ಸದ್ಯಕ್ಕೆ ಸಿನಿಮಾ ರಂಗದಿಂದ ಬ್ರೇಕ್ ತೆಗೆಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸದ್ಯದಲ್ಲಿಯೇ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದೆ.

More from Filmibeat

English summary
Priyanka Chopra Likely To Say Good Bay To Bollywood, Hollywood Films Because Of Her Baby,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X