For Quick Alerts
  ALLOW NOTIFICATIONS  
  For Daily Alerts

  ಇನ್‌ಸ್ಟಾಗ್ರಾಂನ ಒಂದು ಪೋಸ್ಟ್‌ಗೆ ಪ್ರಿಯಾಂಕಾ, ವಿರಾಟ್‌ ಕೊಹ್ಲಿಗೆ ಸಿಗುವ ಹಣವೆಷ್ಟು?

  |

  ಬಹುತೇಕ ನಟ-ನಟಿಯರು ಇಂದು ಸಾಮಾಜಿಕ ಜಾಲತಾಣ ಬಳಸುತ್ತಿದ್ದಾರೆ. ತಮ್ಮ ಸಿನಿಮಾಗಳಿಂದ ಮೊದಲುಗೊಂಡು ಖಾಸಗಿ ವಿಷಯಗಳು, ಸಾಮಾಜಿಕ ಅಭಿಪ್ರಾಯಗಳು ಎಲ್ಲವನ್ನೂ ಸಾಮಾಜಿಕ ಜಾಲತಾಣ ಮೂಲಕ ದಾಖಲಿಸುತ್ತಿದ್ದಾರೆ.

  ಸೆಲೆಬ್ರಿಟಿಗಳು ಕೇವಲ ಸಂವಹನಕ್ಕಾಗಿ ಸಾಮಾಜಿಕ ಜಾಲತಾಣ ಬಳಸುತ್ತಾರೆ ಎಂದುಕೊಳ್ಳಬೇಡಿ. ಇದು ಅವರಿಗೆ ಆದಾಯದ ಮೂಲವೂ ಸಹ. ಎಷ್ಟೋ ಮಂದಿ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲೆಂದೇ ಕೋಟ್ಯಂತರ ರೂಪಾಯಿ ಹಣ ಪಡೆದುಕೊಳ್ಳುತ್ತಾರೆ.

  ಭಾರತದ ಹಲವಾರು ಸೆಲೆಬ್ರಿಟಿಗಳು ಸಹ ಹೀಗೆ 'ಪೇಯ್ಡ್ ಪೋಸ್ಟ್‌'ಗಳನ್ನು ಹಾಕುತ್ತಲೇ ಇರುತ್ತಾರೆ. ಆಯಾ ಸೆಲೆಬ್ರಿಟಿಗಳ ಅಭಿಮಾನಿ ವರ್ಗ, ಸಾಮಾಜಿಕ ಜಾಲತಾಣದಲ್ಲಿರುವ ಫಾಲೋವರ್‌ಗಳ ಸಂಖ್ಯೆ, ಪೋಸ್ಟ್ ರೀಚ್ ಆಗುವ ವ್ಯಾಪ್ತಿ ಹೀಗೆ ಹಲವು ಅಂಶಗಳನ್ನು ಲೆಕ್ಕ ಹಾಕಿ ಒಂದು ಪೋಸ್ಟ್‌ಗೆ ಇಷ್ಟು ಎಂದು ಬೆಲೆ ನಿಗದಿ ಮಾಡಲಾಗಿರುತ್ತದೆ. ವಿಶ್ವದಲ್ಲಿ ಪ್ರೊಮೋಷನಲ್ ಪೋಸ್ಟ್‌ಗಳಿಂದ ಅತಿ ಹೆಚ್ಚು ಹಣ ಪಡೆಯುವ 100 ಸೆಲೆಬ್ರಿಟಿಗಳ ಪಟ್ಟಿಯನ್ನು ಪ್ರತಿವರ್ಷವೂ ಬಿಡುಗಡೆ ಮಾಡಲಾಗುತ್ತದೆ.

  27ನೇ ಸ್ಥಾನದಲ್ಲಿರುವ ಪ್ರಿಯಾಂಕಾ ಚೋಪ್ರಾ

  27ನೇ ಸ್ಥಾನದಲ್ಲಿರುವ ಪ್ರಿಯಾಂಕಾ ಚೋಪ್ರಾ

  ಇದೀಗ ಹಾಲಿವುಡ್‌ನಲ್ಲಿ ಮಿಂಚುತ್ತಿರುವ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾ ಪೋಸ್ಟ್‌ಗಾಗಿ ಅತಿ ಹೆಚ್ಚು ಹಣ ಪಡೆಯುವ ಭಾರತೀಯ ನಟಿ ಎನಿಸಿಕೊಂಡಿದ್ದಾರೆ. ಪೋಸ್ಟ್‌ಗಾಗಿ ಹೆಚ್ಚು ಹಣ ಪಡೆಯುವ ವಿಶ್ವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪ್ರಿಯಾಂಕಾಗೆ 27ನೇ ಸ್ಥಾನವಿದೆ.

  ಒಂದು ಪೋಸ್ಟ್ ಹಾಕಲು ಎಷ್ಟು ಹಣ?

  ಒಂದು ಪೋಸ್ಟ್ ಹಾಕಲು ಎಷ್ಟು ಹಣ?

  ನಟಿ ಪ್ರಿಯಾಂಕಾ ಚೋಪ್ರಾಗೆ ಇನ್‌ಸ್ಟಾಗ್ರಾಂನಲ್ಲಿ ಒಂದು ಪ್ರಚಾರದ ಪೋಸ್ಟ್‌ ಹಾಕಲು ಬರೋಬ್ಬರಿ 3 ಕೋಟಿ ರುಪಾಯಿ ಹಣ ಸಿಗುತ್ತದೆ. ಕಳೆದ ವರ್ಷ ಪ್ರಿಯಾಂಕಾ ಚೋಪ್ರಾ 19 ನೇ ಸ್ಥಾನದಲ್ಲಿದ್ದರು ಆದರೆ ಈ ಬಾರಿ ಅವರ ಸ್ಥಾನ ಕುಸಿದಿದೆ. ಕಳೆದ ವರ್ಷ ಪ್ರಿಯಾಂಕಾ ಮಾಡುವ ಒಂದು ಪ್ರೊಮೋಷನಲ್ ಪೋಸ್ಟ್‌ಗೆ 2 ಕೋಟಿ ಸಿಗುತ್ತಿತ್ತು.

  ವಿರಾಟ್ ಕೊಹ್ಲಿಗೆ ಅತಿ ಹೆಚ್ಚು ಹಣ ದೊರೆಯುತ್ತದೆ

  ವಿರಾಟ್ ಕೊಹ್ಲಿಗೆ ಅತಿ ಹೆಚ್ಚು ಹಣ ದೊರೆಯುತ್ತದೆ

  ಪ್ರಿಯಾಂಕಾ ಹೊರತುಪಡಿಸಿದರೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮತ್ತೊಬ್ಬ ಭಾರತೀಯ ಸೆಲೆಬ್ರಿಟಿ ವಿರಾಟ್ ಕೊಹ್ಲಿ. ಕ್ರಿಕೆಟಿಗ ವಿರಾಟ್ ಕೊಹ್ಲಿ ಸಾಕಷ್ಟು ಪ್ರೊಮೋಷನಲ್ ಪೋಸ್ಟ್‌ಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇವರಿಗೆ ಒಂದು ಪೋಸ್ಟ್‌ಗೆ ಬರೋಬ್ಬರಿ 5 ಕೋಟಿ ರುಪಾಯಿ ಹಣ ದೊರಕುತ್ತದೆ. ಭಾರತದಲ್ಲಿ ಪ್ರೊಮೋಷನ್ ಪೋಸ್ಟ್‌ಗೆ ಅತಿ ಹೆಚ್ಚು ಹಣ ಪಡೆವ ಸೆಲೆಬ್ರಿಟಿ ವಿರಾಟ್ ಕೊಹ್ಲಿ.

  Recommended Video

  ಅಪಘಾತ ಎಲ್ಲಿ ? ಯಾವಾಗ ? ಹೇಗಾಯ್ತು? | Filmibeat Kannada
  ಮೊದಲ ಸ್ಥಾನದಲ್ಲಿದ್ದಾರೆ ರೊನಾಲ್ಡೊ

  ಮೊದಲ ಸ್ಥಾನದಲ್ಲಿದ್ದಾರೆ ರೊನಾಲ್ಡೊ

  ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ. 29 ಕೋಟಿಗೂ ಹೆಚ್ಚು ಮಂದಿ ಫಾಲೋವರ್ಸ್‌ ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ ಒಂದು ಪ್ರಚಾರಾತ್ಮಕ ಪೋಸ್ಟ್ ಹಾಕಿದರೆ ಬರೋಬ್ಬರಿ 11 ಕೋಟಿ ರು ಸಂಭಾವನೆ ದೊರೆಯುತ್ತದೆ.

  English summary
  Actress Priyanka Chopra makes 3 crore for her every promotional post on Instagram. Virat Kohli earns 5 crore for post.
  Friday, July 2, 2021, 17:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X