For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ತಾಯಿಯ ಟ್ವೀಟ್‌ಗೆ ಕೆಂಡವಾದ ದೀಪಿಕಾ ಅಭಿಮಾನಿಗಳು

  |

  ಸಿನಿಮಾ ರಂಗದಲ್ಲಿ ವೃತ್ತಿ ಮಾತ್ಸರ್ಯ ಇತರ ರಂಗಗಳಿಗಿಂತಲೂ ತುಸು ಹೆಚ್ಚು. ಅದರಲ್ಲಿಯೂ ನಟಿಯರ ನಡುವೆಯಂತೂ ಮಾತ್ಸಾರ್ಯ ಹೆಚ್ಚಿಗೇ ಇರುತ್ತದೆ. ಇದು ಹೊಸದಲ್ಲ ಬಹಳ ಹಿಂದಿನಿಂದಲೂ ಸಿನಿಮಾ ರಂಗದಲ್ಲಿ ಜಡೆ ಜಗಳದ ಸುದ್ದಿಗಳು ಸಾಮಾನ್ಯ.

  ಬಾಲಿವುಡ್‌ನಲ್ಲಿಯಂತೂ ನಟಿಯರ ನಡುವಿನ ದ್ವೇಷ, ಬೂದಿ ಮುಚ್ಚಿದ ಕೆಂಡ. ಈಗಿನ ನಟಿಯರಲ್ಲೂ ಇದು ಕಡಿಮೆ ಏನಿಲ್ಲ. ಪ್ರಿಯಾಂಕಾ ಚೋಪ್ರಾ-ದೀಪಿಕಾ ಪಡುಕೋಣೆ. ಅನುಷ್ಕಾ ಶರ್ಮಾ-ದೀಪಿಕಾ, ಕರೀನಾ-ಪ್ರಿಯಾಂಕಾ ಹೀಗೆ ಹಲವು ನಟಿಯರು ಪರಸ್ಪರ ಬೆಕ್ಕಿನ ಜಗಳದಲ್ಲಿ ನಿರತರಾಗಿದ್ದಾರೆ.

  ಪ್ರಿಯಾಂಕಾ ಚೋಪ್ರಾ ಹಾಗೂ ದೀಪಿಕಾ ನಡುವಿನ 'ಕ್ಯಾಟ್‌ ಫೈಟ್‌' ಬಗ್ಗೆ ಈ ಹಿಂದೆಯೂ ಹಲವಾರು ಬಾರಿ ವರದಿಗಳಾಗಿವೆ. ಅದರಲ್ಲಿಯೂ 'ಬಾಜಿರಾವ್ ಮಸ್ತಾನಿ' ಸಿನಿಮಾದ ಸಮಯದಲ್ಲಿಯಂತೂ ಇಬ್ಬರ ಮುಸುಕಿನ ಜಗಳ ಬಾಲಿವುಡ್‌ ಪತ್ರಿಕೆಗಳ ಹಾಟ್ ಫೇವರೇಟ್ ಆಗಿತ್ತು. ಪ್ರಿಯಾಂಕಾ, ಹಾಲಿವುಡ್‌ಗೆ ಹಾರಿದ ನಂತರ ಇಬ್ಬರ ತೆರೆ ಮರೆಯ ಜಗಳ ನಿಂತಿತ್ತು. ಆದರೆ ಈಗ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಪ್ರಿಯಾಂಕಾ-ದೀಪಿಕಾ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ದ್ವೇಷವನ್ನು ಕೆದಕಿದ್ದಾರೆ.

  ಮ್ಯಾಗಜೀನ್‌ಗೆ ಫೋಸ್‌ ನೀಡಿರುವ ಪ್ರಿಯಾಂಕಾ

  ಮ್ಯಾಗಜೀನ್‌ಗೆ ಫೋಸ್‌ ನೀಡಿರುವ ಪ್ರಿಯಾಂಕಾ

  ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಅಂತರಾಷ್ಟ್ರೀಯ ಮ್ಯಾಗಜೀನ್ ಒಂದರ ಕವರ್‌ ಫೋಟೊಗೆ ಫೋಸು ನೀಡಿದ್ದಾರೆ. ಈ ಸುದ್ದಿಯನ್ನು ಜೂಮ್ ಟಿವಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು, ದೀಪಿಕಾ ಪಡುಕೋಣೆ ಸಹ ಇದೇ ಮಾದರಿಯ ಉಡುಪನ್ನು ಕೆಲ ವರ್ಷಗಳ ಹಿಂದೆ ಧರಿಸಿದ್ದರು ಎಂದಿದೆ ಜೂಮ್ ಟಿವಿ. ಇದು ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಸಿಟ್ಟಿಗೆ ಕಾರಣವಾಗಿದೆ.

  ಕಣ್ಣಿಲ್ಲದವರು ಮಾತ್ರ ಹಾಗೆ ಹೇಳಲು ಸಾಧ್ಯ: ಮಧು ಚೋಪ್ರಾ

  ಕಣ್ಣಿಲ್ಲದವರು ಮಾತ್ರ ಹಾಗೆ ಹೇಳಲು ಸಾಧ್ಯ: ಮಧು ಚೋಪ್ರಾ

  ಕೋಪಗೊಂಡ ಪ್ರಿಯಾಂಕಾ ಚೋಪ್ರಾ ತಾಯಿ, 'ಇಬ್ಬರೂ ಒಂದೇ ರೀತಿಯ ಉಡುಪು ಧರಿಸಿದ್ದಾರೆ ಎಂದು ಕುರುಡರಷ್ಟೆ ಹೇಳಲು ಸಾಧ್ಯ. 'ಹೌಟೆ ಕೌಚರ್' ಮಾದರಿಯ ಉಡುಪನ್ನು ಪ್ರಿಯಾಂಕಾ ಚೆನ್ನಾಗಿ ಧರಿಸಿತ್ತಾಳೆ' ಎಂದಿದ್ದಾರೆ. ಪರೋಕ್ಷವಾಗಿ ದೀಪಿಕಾಗಿಂತಲೂ ಹೌಟೆ ಕೌಚರ್ ಉಡುಪು ಪ್ರಿಯಾಂಕಾಗೆ ಚೆನ್ನಾಗಿ ಒಪ್ಪುತ್ತದೆ ಎಂದಿದ್ದಾರೆ ಮಧು ಚೋಪ್ರಾ.

  ಸಿಟ್ಟಿಗೆದ್ದ ದೀಪಿಕಾ ಪಡುಕೋಣೆ ಅಭಿಮಾನಿಗಳು

  ಸಿಟ್ಟಿಗೆದ್ದ ದೀಪಿಕಾ ಪಡುಕೋಣೆ ಅಭಿಮಾನಿಗಳು

  ಮಧು ಚೋಪ್ರಾ ಟ್ವೀಟ್‌ಗೆ ದೀಪಿಕಾ ಪಡೊಕೋಣೆ ಅಭಿಮಾನಿಗಳು ಸಿಡಿಮಿಡಿಗೊಂಡಿದ್ದು, ಪ್ರಿಯಾಂಕಾಗಿಂತಲೂ ದೀಪಿಕಾ ಒಳ್ಳೆಯ ನಟಿ, ಪ್ರಿಯಾಂಕಾಗಿಂತಲೂ ದೀಪಿಕಾಗೆ ಹೆಚ್ಚಿನ ಫ್ಯಾಷನ್ ಸೆನ್ಸ್ ಇದೆ ಎಂದು ಕಮೆಂಟ್ ಮಾಡಿದ್ದಾರೆ. ದೀಪಿಕಾ ಸ್ಟೈಲ್‌ಗಳನ್ನು ಪ್ರಿಯಾಂಕಾ ಕಾಪಿ ಮಾಡಿದ್ದಾರೆ ಎಂದು ಸಾಕ್ಷಿಯಾಗಿ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಅಭಿಮಾನಿಗಳು.

  ಸೀಲ್ ಡೌನ್ ಆಗಿರೋ ಏರಿಯಾದಲ್ಲಿ Harshaka ಮತ್ತು Bhuvan ಮಾಡಿದ್ದೇನು ನೋಡಿ | Filmibeat Kannada
  ಸತ್ಯ ಹೇಳಲು ಮುಜುಗರವೇಕೆ: ಮಧು ಚೋಪ್ರಾ

  ಸತ್ಯ ಹೇಳಲು ಮುಜುಗರವೇಕೆ: ಮಧು ಚೋಪ್ರಾ

  ಮಧು ಚೋಪ್ರಾ ಟ್ವೀಟ್‌ಗೆ ಕಮೆಂಟ್ ಮಾಡಿರುವ ಒಬ್ಬರು, 'ನೀವು ಹೀಗೆ ಮಾತನಾಡುವುದು ಮುಜುಗರ ತರುತ್ತದೆ' ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಧು ಚೋಪ್ರಾ, 'ಸತ್ಯ ಹೇಳುವುದಕ್ಕೆ ಯಾವ ಮುಜುಗರವೂ ಆಗಬೇಕಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

  English summary
  Priyanka Chopra mother tweeted about Deepika Padukone style. Deepika's fans get offended.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X