»   » ಪ್ರಿಯಾಂಕಾ ಚೋಪ್ರಾ ಅವರ ನ್ಯೂಯಾರ್ಕ್ ಮನೆ ಹೇಗಿದೆ ನೋಡಿ?

ಪ್ರಿಯಾಂಕಾ ಚೋಪ್ರಾ ಅವರ ನ್ಯೂಯಾರ್ಕ್ ಮನೆ ಹೇಗಿದೆ ನೋಡಿ?

Posted By:
Subscribe to Filmibeat Kannada

'ಕ್ವಾಂಟಿಕೋ' ಸುಂದರಿ ಪ್ರಿಯಾಂಕಾ ಚೋಪ್ರಾ ಸದ್ಯ ಬಾಲಿವುಡ್ ಗಿಂತ ಹೆಚ್ಚು ಹಾಲಿವುಡ್ ನಲ್ಲೇ ಬಿಜಿ ಇದ್ದಾರೆ. ಹೀಗಾಗಿ, ವಿದೇಶದಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಸದ್ಯ, ಹಾಲಿವುಡ್ ನ ಟಿವಿ ಕಾರ್ಯಕ್ರಮದ ಮೂರನೇ ಆವೃತ್ತಿಯ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಪಿಗ್ಗಿ ನ್ಯೂಯಾರ್ಕ್ ನಲ್ಲಿದ್ದಾರೆ.

ಈ ಮಧ್ಯೆ ನ್ಯೂಯಾರ್ಕ್ ನಲ್ಲಿ ತಾವು ಖರೀದಿಸಿರುವ ಹೊಸ ಮನೆಯ ಚಿತ್ರಗಳನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇಷ್ಟು ದಿನ ಹೋಟೆಲ್ ಹಾಗೂ ಸ್ಟುಡಿಯೋಗಳಲ್ಲಿ ನೆಲೆಸಿದ್ದ ಪ್ರಿಯಾಂಕಾ ಈಗ ಅಪಾರ್ಟ್ ಮೆಂಟ್ ವೊಂದರಲ್ಲಿ ನಾಲ್ಕು ಬೆಡ್ ರೂಂಗಳ ಪ್ಲ್ಯಾಟ್ ಕೊಂಡುಕೊಂಡಿದ್ದಾರೆ.

Priyanka Chopra New Home In New York

ಪಿಟಿ ಉ‍ಷಾ ಜೀವನಚರಿತ್ರೆಯ ಚಿತ್ರದಲ್ಲಿ ನಟಿಸಲಿದ್ದಾರೆ ಪ್ರಿಯಾಂಕಾ ಚೋಪ್ರಾ!

ತಮ್ಮ ಹೊಸ ಮನೆಯ ಒಳಗಿನ ಭಾವಚಿತ್ರಗಳನ್ನ ಹಂಚಿಕೊಂಡಿದ್ದು, ಪ್ರಿಯಾಂಕಾ ಪ್ಲ್ಯಾಟ್ ನಿಂದ ಇಡೀ ನಗರವೇ ರೋಚಕವಾಗಿ ಕಾಣಿಸುತ್ತಿದೆ.

Priyanka Chopra New Home In New York

ಪ್ರಿಯಾಂಕಾ ಅಭಿನಯದ 3ನೇ ಹಾಲಿವುಡ್ ಸಿನಿಮಾ ಶುರು!

ಸದ್ಯ, ಆಡಮ್ ಡಿವೈನ್ ಜೊತೆ 'Isn't it romantic' ಚಿತ್ರದಲ್ಲಿ ಪ್ರಿಯಾಂಕಾ ಅಭಿನಯಿಸುತ್ತಿದ್ದಾರೆ. ಇದರ ಹಿಂದೆಯೇ 'ಎ ಕಿಡ್ ಲೈಕ್ ಜ್ಯಾಕ್' (A Kid Like Jake) ಚಿತ್ರದಲ್ಲೂ ಬಣ್ಣ ಹಚ್ಚಲಿದ್ದಾರೆ. ಹೀಗೆ, ಬ್ಯಾಕ್ ಟು ಬ್ಯಾಕ್ ಹಾಲಿವುಡ್ ಸಿನಿಮಾಗಳ ಮಧ್ಯೆ ಹಿಂದಿಗಳಲ್ಲೂ ಅಭಿನಯಿಸಬೇಕಿದೆ.

Priyanka Chopra New Home In New York
English summary
Bollywood Actress Priyanka Chopra shared some inside pictures of her New York house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X