ಪ್ರಿಯಾಂಕಾ ಮತ್ತು ನಿಕ್ ನಿಶ್ಚಿತಾರ್ಥದ ಮೊಟ್ಟ ಮೊದಲ ಫೋಟೋ

By Bharath Kumar

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್ ಸಿಂಗರ್ ನಿಕ್ ಜೋನಾಸ್ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಇಂದು ಮುಂಬೈನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ನಡೆಯಲಿದೆ ಎನ್ನಲಾಗಿತ್ತು.

ಈ ವಿಶೇಷ ಕಾರ್ಯಕ್ರಮ ಆರಂಭವಾಗಿದ್ದು, ನವ ಜೋಡಿಗಳ ಮೊದಲ ಫೋಟೋ ಈಗ ಬಹಿರಂಗವಾಗಿದೆ. ಇದೊಂದು ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಅಧಿಕೃತವಾಗಿ ತಿಳಿಸದೇ, ಕೇವಲ ಕುಟುಂಬಸ್ಥರು ಮತ್ತು ಸ್ನೇಹಿತರ ಮಧ್ಯೆ ಉಂಗುರ ಬದಲಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಸದ್ಯಕ್ಕೆ ಸಾಂಪ್ರದಾಯಿಕ ಕಾರ್ಯಕ್ರಮ ಆರಂಭವಾಗಿದ್ದು, ಉಂಗುರ ಬದಲಿಸಿಕೊಳ್ಳುವ ಶಾಸ್ತ್ರ ಸಂಜೆ ನಡೆಯಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಪ್ರಿಯಾಂಕಾ ಮತ್ತು ನಿಕ್ ಇಬ್ಬರು ಟ್ರಡಿಷ್ನಲ್ ಲುಕ್ ನಲ್ಲಿ ಕಂಗೊಳಿಸಿರುವ ಫೋಟೋ ಲೀಕ್ ಆಗಿದೆ. ಮುಂದೆ ಓದಿ....

ಶಾಸ್ತ್ರೋಕ್ತ ಕಾರ್ಯಕ್ರಮದಲ್ಲಿ ಪಿಗ್ಗಿ-ನಿಕ್

ಶಾಸ್ತ್ರೋಕ್ತ ಕಾರ್ಯಕ್ರಮದಲ್ಲಿ ಪಿಗ್ಗಿ-ನಿಕ್

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಇಬ್ಬರು ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಬಹಿರಂಗವಾಗಿದೆ. ನಿಕ್ ಜೋನಾಸ್ ಬಿಳಿ ಬಣ್ಣದ ಕುರ್ತಾ ತೊಟ್ಟಿದ್ದು, ಪ್ರಿಯಾಂಕಾ ಹಳದಿ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಇಬ್ಬರು ಒಟ್ಟಿಗೆ ಕೂತು ಶಾಸ್ತ್ರಗಳನ್ನ ಪೂರೈಸುತ್ತಿದ್ದಾರೆ.

ಫಸ್ಟ್ ಲುಕ್ ಫೋಸ್

ಫಸ್ಟ್ ಲುಕ್ ಫೋಸ್

ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೂ ಮುಂಚೆ ಪ್ರಿಯಾಂಕಾ ಮತ್ತು ನಿಕ್ ಇಬ್ಬರು ಫೋಟೋಗೆ ಫೋಸ್ ಕೊಟ್ಟಿದ್ದಾರೆ. ತುಂಬಾ ಆತ್ಮೀಯವಾಗಿ ತಬ್ಬಿಕೊಂಡಿರುವ ಇಬ್ಬರು ಸಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆಯುತ್ತಿದ್ದಾರೆ.

ಪರಿಣಿತಿ ಚೋಪ್ರಾ ಭಾಗಿ

ಪರಿಣಿತಿ ಚೋಪ್ರಾ ಭಾಗಿ

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಆಹ್ವಾನ ನೀಡಿರುವ ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಭಾಗಿಯಾಗಿದ್ದು, ಅವರು ಕೂಡ ಹಳದಿ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಸಂಜೆ ಪಾರ್ಟಿ ಆಯೋಜನೆ

ಸಂಜೆ ಪಾರ್ಟಿ ಆಯೋಜನೆ

ಅಂದ್ಹಾಗೆ, ಆಗಸ್ಟ್ 18 ಕೇವಲ ಪ್ರಿಯಾಂಕಾ ಮತ್ತು ನಿಕ್ ನಿಶ್ಚಿತಾರ್ಥ ಕಾರ್ಯಕ್ರಮ ಮಾತ್ರವಲ್ಲ, ಇಂದು ಪ್ರಿಯಾಂಕಾ ಅವರ ಬರ್ತಡೇ ಕೂಡ ಇದೆ. ಹೀಗಾಗಿ, ಬಾಲಿವುಡ್ ತಾರೆಯರು ಹಾಗೂ ಕುಟುಂಬಸ್ಥರಿಗೆ ಸಂಜೆ ಡಿನ್ನರ್ಡನ್ನಿರ್ ಪಾರ್ಟಿ ಆಯೋಜನೆ ಮಾಡಲಾಗಿದೆ. ಆ ವೇಳ ಪರಸ್ಪರ ಉಂಗುರ ಬದಲಿಸಿಕೊಳ್ಳುವ ಪ್ಲಾನ್ ಮಾಡಲಾಗಿದೆಯಂತೆ.

More from Filmibeat

English summary
Priyanka Chopra, Nick Jonas first pic from their engagement ceremony. While Priyanka chose a yellow suit, fiancee Nick was seen in a kurta-pyjama at their roka ceremony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X