ವೈರಲ್ ವಿಡಿಯೋ: ನಿಕ್ ಜೊನಾಸ್ ಗೆ ಪಬ್ಲಿಕ್ ನಲ್ಲಿ ಮುತ್ತಿಟ್ಟ ಪ್ರಿಯಾಂಕಾ
ಅಮೆರಿಕನ್ ಸಿಂಗರ್ ನಿಕ್ ಜೊನಾಸ್ ಜೊತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಗೊತ್ತಿರುವ ವಿಚಾರವೇ. ಕಳೆದ ತಿಂಗಳಷ್ಟೇ ನಿಕ್ ಜೊತೆ ಪಿಗ್ಗಿ ಸಂಪ್ರದಾಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇದೀಗ, ನಿಕ್ ಜೊನಾಸ್ ಮತ್ತು ಪ್ರಿಯಾಂಕಾ ಅವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಭಾವಿ ಪತಿಗೆ ಪಬ್ಲಿಕ್ ಆಗಿ ಕಿಸ್ ಮಾಡಿದ್ದಾರೆ.
ಅಂದ್ಹಾಗೆ, ಇದು ಸಾರ್ವಜನಿಕವಾಗಿ ಪ್ರಿಯಾಂಕಾ ಮತ್ತು ನಿಕ್ ಅವರ ಮೊದಲ ಕಿಸ್ ಎಂದು ಕೆರಯಲ್ಪಡುತ್ತಿದೆ. ಅಷ್ಟಕ್ಕೂ, ಪ್ರಿಯಾಂಕಾ ಮತ್ತು ನಿಕ್ ಅವರು ಈ ವಿಡಿಯೋ ಎಲ್ಲಿನದು.? ಯಾವ ಸಂದರ್ಭದಲ್ಲಿ ಪಿಗ್ಗಿ ಭಾವಿ ಪತಿಗೆ ಕಿಸ್ ಮಾಡಿದ್ರು ಎಂದು ತಿಳಿಯಲು ಮುಂದೆ ಓದಿ.....

ಪಬ್ಲಿಕ್ ನಲ್ಲೇ ಕಿಸ್ ಮಾಡಿದ ಪ್ರಿಯಾಂಕಾ
ಪ್ರಿಯಾಂಕಾ ಮತ್ತು ನಿಕ್ ಜೊನಾಸ್ ಅವರ ಮೊದಲ ಸಾರ್ವಜನಿಕ ಕಿಸ್ ಎಂದು ಬಿಂಬಿತವಾಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಆದ್ರೆ, ಇದುವರೆಗೂ ಇವರಿಬ್ಬರು ರೋಮ್ಯಾಂಟಿಕ್ ಆಗಿ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಕಾರ್ಯಕ್ರಮವೊಂದರಲ್ಲಿ ಪಿಗ್ಗಿ-ನಿಕ್ ಜೋಡಿ ಗಮನ ಸೆಳೆದಿದೆ.
ಮೊದಲ ಬರ್ತಡೇ ಆಚರಣೆ
ಅಂದ್ಹಾಗೆ, ಈ ವಿಡಿಯೋ ವೈರಲ್ ಆಗಿರುವುದು ನಿಕ್ ಜೊನಾಸ್ ಅವರ ಬರ್ತಡೇ ಕಾರ್ಯಕ್ರಮದಲ್ಲಿ. ಇತ್ತೀಚಿಗಷ್ಟೆ ನಿಕ್ ಜೊನಾಸ್ ಅವರ ಹುಟ್ಟುಹಬ್ಬವನ್ನ ಕ್ಯಾಲಿಫೊರ್ನಿಯದ ಏಂಜಲ್ ಸ್ಟೇಡಿಯಂನಲ್ಲಿ ಆಚರಿಸಲಾಗಿದೆ. ಈ ವೇಳೆ ಪ್ರಿಯಾಂಕಾ ನಾಚಿಕೆಯಿಂದಲೇ ನಿಕ್ ಗೆ ಮುತ್ತಿಟ್ಟಿದ್ದಾರೆ. ಸ್ಟೇಡಿಯಂನಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಇದ್ದರು.

ಮುಂಬೈನಲ್ಲಿ ನಿಶ್ಚಿತಾರ್ಥ
ಆಗಸ್ಟ್ 18 ರಂದು ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಭಾರತೀಯ ಸಂಸ್ಕೃತಿ-ಸಂಪ್ರದಾಯದಂತೆ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಮುಂಬೈನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು.

ಮದುವೆ ಯಾವಾಗ.?
ಅಂದ್ಹಾಗೆ, ಪ್ರಿಯಾಂಕಾ ಮತ್ತು ನಿಕ್ ಅವರು ಮದುವೆ ದಿನಾಂಕ ಇನ್ನೂ ಬಹಿರಂಗ ಆಗಿಲ್ಲ. ಆದ್ರೆ, ಮದುವೆ ನಡೆಯುವ ಜಾಗದ ಕುರಿತ ಮಾಹಿತಿ ಸದ್ಯ ಲೀಕ್ ಆಗಿದೆ. ಪ್ರಿಯಾಂಕಾ ಹಾಗೂ ನಿಕ್ ಜೊನಾಸ್ ಹವಾಯಿ ದ್ವೀಪದಲ್ಲಿ ಮದುವೆ ಆಗಲಿದ್ದಾರಂತೆ.


Click it and Unblock the Notifications











