ಹವಾಯಿ ದ್ವೀಪದಲ್ಲಿ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಮದುವೆ.?
ಜನಜಂಗುಳಿಯಿಂದ ತಪ್ಪಿಸಿಕೊಳ್ಳಲು, ಮಾಧ್ಯಮ ಹಾಗೂ ಪತ್ರಕರ್ತರಿಂದ ಕೊಂಚ ದೂರ ಉಳಿಯಲು, ಗಾಸಿಪ್ ಗಳಿಗೆ ಆಹಾರವಾಗದಿರಲು ಭಾರತದ ಸೆಲೆಬ್ರಿಟಿಗಳು ಡೆಸ್ಟಿನೇಶನ್ ವೆಡ್ಡಿಂಗ್ ಪ್ಲಾನ್ ಮಾಡ್ತಿದ್ದಾರೆ.
ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದೂರದ ಇಟಲಿಯಲ್ಲಿ ವಿವಾಹವಾದರು. ಇನ್ನೂ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಮದುವೆ ಕೂಡ ಇಟಲಿಯಲ್ಲಿ ನಡೆಯಲಿದೆ ಎಂಬ ಸುದ್ದಿ ಇದೆ. ಹೀಗಿರುವಾಗಲೇ, ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಕೂಡ ಇದೇ ಪ್ಲಾನ್ ನಲ್ಲಿದ್ದಾರೆ ಎಂಬ ಗುಸು ಗುಸು ಹರಿದಾಡುತ್ತಿದೆ.
ಆಗಸ್ಟ್ 18 ರಂದು ಅಮೇರಿಕ್ ಸಿಂಗರ್ ನಿಕ್ ಜೊನಾಸ್ ಜೊತೆಗಿನ ಪ್ರಿಯಾಂಕಾ ಛೋಪ್ರಾ ಪ್ರೀತಿಗೆ ಅಧಿಕೃತ ಮುದ್ರೆ ಬಿದ್ದಿತ್ತು. ಕೆಲವೇ ದಿನಗಳಲ್ಲಿ ಪ್ರಿಯಾಂಕಾ-ನಿಕ್ ಮದುವೆ ನಡೆಯಲಿದೆ.

ಮದುವೆ ದಿನಾಂಕ ಇನ್ನೂ ಬಹಿರಂಗ ಆಗಿಲ್ಲ. ಆದ್ರೆ, ಮದುವೆ ನಡೆಯುವ ಜಾಗದ ಕುರಿತ ಮಾಹಿತಿ ಸದ್ಯ ಲೀಕ್ ಆಗಿದೆ. ಪ್ರಿಯಾಂಕಾ ಹಾಗೂ ನಿಕ್ ಜೊನಾಸ್ ಹವಾಯಿ ದ್ವೀಪದಲ್ಲಿ ಮದುವೆ ಆಗಲಿದ್ದಾರಂತೆ.
ಹಾಗ್ನೋಡಿದ್ರೆ, ನಿಕ್ ಜೊನಾಸ್ ಗೆ ನೆಚ್ಚಿನ ತಾಣ ಹವಾಯಿ ದ್ವೀಪ. ತಮ್ಮ ಆಲ್ಬಂ ಹಾಡುಗಳನ್ನ ನಿಕ್ ಜೊನಾಸ್ ಅಲ್ಲೇ ಚಿತ್ರೀಕರಿಸಿದ್ದಾರೆ. ಹೀಗಾಗಿ ಅಲ್ಲೇ ಮದುವೆ ಆಗಲು ನಿರ್ಧಾರ ಮಾಡಿದ್ದಾರಂತೆ.
ಯಾರೀ ನಿಕ್ ಜೊನಾಸ್.?
25 ವರ್ಷದ ನಿಕ್ ಜೊನಾಸ್ ಅಮೇರಿಕಾದ ಗಾಯಕ ಹಾಗೂ ನಟ. 'ಕ್ಯಾಂಪ್ ರಾಕ್', 'ಮಿಸ್ಟರ್ ಸನ್ ಶೈನ್', 'ಸ್ಮ್ಯಾಶ್' ಮುಂತಾದ ಟೆಲಿವಿಷನ್ ಫಿಲ್ಮ್ ಗಳಲ್ಲಿ ನಿಕ್ ಜೊನಾಸ್ ಕಾಣಿಸಿಕೊಂಡಿದ್ದಾರೆ. ಗಾಯಕನಾಗಿ ಹಲವಾರು ಆಲ್ಬಂಗಳನ್ನು ನಿಕ್ ಜೊನಾಸ್ ಹೊರತಂದಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾಗಿಂತ ನಿಕ್ ಜೊನಾಸ್ ಹತ್ತು ವರ್ಷ ಕಿರಿಯ.


Click it and Unblock the Notifications










