ಅಸ್ಸಾಂ ಪ್ರವಾಸೋದ್ಯಮ ಕ್ಯಾಲೆಂಡರ್ ನಲ್ಲಿ ಪ್ರಿಯಾಂಕಾ ಎದೆಸೀಳು: ಕೋಪಗೊಂಡ ಕಾಂಗ್ರೆಸ್ ಶಾಸಕರು

By Harshitha

'ಸಿಕ್ಕಿಂ ರಾಜ್ಯ ಬಂಡುಕೋರರ ಸಮಸ್ಯೆ ಎದುರಿಸುತ್ತಿದೆ' ಅಂತ್ಹೇಳಿ ಕಳೆದ ವರ್ಷವಷ್ಟೇ ಪ್ರಿಯಾಂಕಾ ಛೋಪ್ರಾ ವಿವಾದಕ್ಕೆ ಗುರಿಯಾಗಿದ್ದರು. ವ್ಯಾಪಕ ಖಂಡನೆ ವ್ಯಕ್ತವಾದ್ಮೇಲೆ ಸಿಕ್ಕಿಂ ಸರ್ಕಾರ ಹಾಗೂ ಜನರಲ್ಲಿ ಕ್ಷಮೆ ಕೇಳಿದ್ದ ಪ್ರಿಯಾಂಕಾ ಛೋಪ್ರಾ ಇದೀಗ ಮತ್ತೆ ಕಾಂಟ್ರವರ್ಸಿಯ ಕೇಂದ್ರಬಿಂದು ಆಗಿದ್ದಾರೆ.

ಎರಡು ವರ್ಷಗಳ ಅವಧಿಗೆ ಪ್ರಿಯಾಂಕಾ ಛೋಪ್ರಾ ಅಸ್ಸಾಂ ಪ್ರವಾಸೋದ್ಯಮದ ರಾಯಭಾರಿ ಆಗಿರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಅಸ್ಸಾಂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಇತ್ತೀಚೆಗಷ್ಟೇ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿತ್ತು. ಕ್ಯಾಲೆಂಡರ್ ನಲ್ಲಿ ಪ್ರಿಯಾಂಕಾ ಛೋಪ್ರಾ ಎದೆ ಸೀಳು ಕಾಣುತ್ತಿರುವುದರಿಂದ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ಯಾಲೆಂಡರ್ ನಲ್ಲಿ ಪ್ರಿಯಾಂಕಾ ಛೋಪ್ರಾ ಫ್ರಾಕ್ ಧರಿಸಿದ್ದಾರೆ. ಫ್ರಾಕ್ ಧರಿಸುವುದು ಅಸ್ಸಾಂ ಸಂಸ್ಕೃತಿ ಅಲ್ಲ. ಎದೆ ಸೀಳು ಕೂಡ ಕಾಣುತ್ತಿದೆ. ಇದು ಅಸ್ಸಾಂ ಸಂಸ್ಕೃತಿಗೆ ಧಕ್ಕೆ ತಂದಿದೆ ಎಂದು ಕಾಂಗ್ರೆಸ್ ಶಾಸಕರು ಆಕ್ರೋಶಗೊಂಡಿದ್ದಾರೆ. ಹೀಗಾಗಿ 'ರಾಯಭಾರಿ' ಸ್ಥಾನದಿಂದ ಪ್ರಿಯಾಂಕಾ ಅವರನ್ನ ತೆಗೆಯುವಂತೆ ಆಗ್ರಹಿಸಿದ್ದಾರೆ.

Priyanka Chopra photo in Assam Tourism calendar sparks controversy

''ಅಸ್ಸಾಂ ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮೋಟ್ ಮಾಡಲು ಕ್ಯಾಲೆಂಡರ್ ಬಿಡುಗಡೆ ಮಾಡಲಾಯ್ತು. ಕ್ಯಾಲೆಂಡರ್ ನಲ್ಲಿ ಪ್ರಿಯಾಂಕಾ ಛೋಪ್ರಾ ಬದಲು ಪ್ರಿಯಾಂಕಾ ಗಾಂಧಿ ಇರಬೇಕಿತ್ತಾ.? ಪ್ರಿಯಾಂಕಾ ಛೋಪ್ರಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಪ್ರಿಯಾಂಕಾ ಛೋಪ್ರಾ ರವರಿಂದ ಅಸ್ಸಾಂ ಸಂಸ್ಕೃತಿಗೆ ಧಕ್ಕೆ ಆಗಿಲ್ಲ'' ಎಂದು ಅಸ್ಸಾಂ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಸ್ಪಷ್ಟ ಪಡಿಸಿದೆ.

More from Filmibeat

English summary
Priyanka Chopra's 'revealing' picture in Assam Tourism calendar sparks controversy. Congress MLA's demanded the removal of Priyanka as the brand ambassador.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X