ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಪತ್ನಿ ನಿಕ್ ಜೋನಸ್ ಜೊತೆ ಯುಎಸ್ ನಲ್ಲಿ ನೆಲೆಸಿದ್ದಾರೆ. ಇತ್ತೀಚಿಗಷ್ಟೆ ಕರ್ವ ಚೌತ್ ಆಚರಣೆ ಮಾಡಿ ಸುದ್ದಿಯಲ್ಲಿದ್ದ ಪ್ರಿಯಾಂಕಾ ಈಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಪ್ರಿಯಾಂಕಾ ಚೋಪ್ರಾ ಮದುವೆ ನಂತರ 'ಸ್ಕೈ ಈಸ್ ಪಿಂಕ್' ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇತ್ತೀಚಿಗಷ್ಟೆ ರಿಲೀಸ್ ಆದ ಈ ಸಿನಿಮಾ ಹೇಳಿಕೊಳ್ಳುವಷ್ಟು ಹೆಸರು ಮಾಡಿಲ್ಲ. ಆ ನಂತರ ಪ್ರಿಯಾಂಕಾ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಆದರೀಗ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಜೊತೆ ಸೇರಿಕೊಂಡಿದ್ದಾರೆ.

Priyanka Chopra Produced Directed By Sanjay Leela Bhansali

ಅಂದ್ಹಾಗೆ ಪ್ರಿಯಾಂಕಾ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎಂದು ಅಂದ್ಕೋಬೇಡಿ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಕ್ಕೆ ಪ್ರಿಯಾಂಕಾ ಬಂಡವಾಳ ಹೂಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಿಯಾಂಕಾ ಕೋ ಪ್ರೊಡ್ಯೂಸರ್ ಆಗಿ ಕೆಲಸಮಾಡುವ ಯೋಜನೆ ಮಾಡಿದ್ದರಂತೆ. ಆದರೆ ಇದು ವರ್ಕೌಟ್ ಆಗದ ಕಾರಣ ಒಬ್ಬರೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈಗಾಗಲೆ ಸಂಜಯ್ ಲೀಲಾ ಬನ್ಸಾಲಿ ಜೊತೆ ಮಾತುಕತೆ ನಡೆಸಿದ್ದಾರಂತೆ.

ಪ್ರಿಯಾಂಕಾ ಮತ್ತು ಸಂಜಯ್ ಲೀಲಾ ಬನ್ಸಾಲಿ ನಡುವೆ ಉತ್ತಮ ಬಾಂಧವ್ಯವಿದೆ. 2015ರಲ್ಲಿ ರಿಲೀಸ್ ಆದ ಸೂಪರ್ ಹಿಟ್ 'ಬಾಜೀರಾವ್ ಮಸ್ತಾನಿ' ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. 'ಬಾಜೀರಾವ್ ಮಸ್ತಾನಿ' ಚಿತ್ರದಲ್ಲಿ ಪ್ರಿಯಾಂಕಾ ಕಾಶಿ ಭಾಯ್ ಪಾತ್ರದಲ್ಲಿ ಮಿಂಚಿದ್ದರು. ಈಗ ಬನ್ಸಾಲಿ ಜೊತೆ ನಿರ್ಮಾಪಕರಾಗಿ ಕೆಲಸ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Bollywood actress Priyanka Chopra produced directed by Sanjay Leela Bhansali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X