ವಿರಾಟ್ ಕೊಹ್ಲಿ-ಅನುಷ್ಕಾ ಚಿತ್ರ ನೋಡಿ ಪ್ರಿಯಾಂಕಾ ಚೋಪ್ರಾ ಕಣ್ಣೀರು!
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಭಾರತದ ಜನಪ್ರಿಯ ಜೋಡಿ. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿ ಸದ್ಯಕ್ಕೆ ಎಲ್ಲರ ಹಾಟ್ ಫೇವರೇಟ್.
ವಿರಾಟ್-ಅನುಷ್ಕಾ ನಡುವಿನ ಪ್ರೀತಿ-ಕಾಳಜಿ ಬಗ್ಗೆ ಸಾಕ್ಷಿಯಾಗಿ ಆಗಾಗ್ಗೆ ಕೆಲವು ಚಿತ್ರಗಳು, ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ.
ಪ್ರಸ್ತುತ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಬ್ಬರೂ ದುಬೈ ನಲ್ಲಿದ್ದಾರೆ. ನವೆಂಬರ್ 05 ರಂದು ವಿರಾಟ್ ಕೊಹ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಹುಟ್ಟುಹಬ್ಬಕ್ಕೆ ಪತ್ನಿ ಅನುಷ್ಕಾ ವಿರಾಟ್ ಸಿಹಿ ಮುತ್ತು ಕೊಟ್ಟಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ನೋಡಿ ನಟಿ ಪ್ರಿಯಾಂಕಾ ಚೋಪ್ರಾ ಕಣ್ಣೀರು ಸುರಿಸಿದ್ದಾರೆ!

ಕಣ್ಣೀರು ಸುರಿಸಿದ ಪ್ರಿಯಾಂಕಾ!
ವಿರಾಟ್ ಜೊತೆಗಿನ ಕೆಲವು ಚಿತ್ರಗಳನ್ನು ಅನುಷ್ಕಾ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಯೆಯಾಗಿ ಕಣ್ಣೀರು ಸುರಿಸುತ್ತಿರುವ ಇಮೋಜಿಯನ್ನು ಪ್ರಿಯಾಂಕಾ ಚೋಪ್ರಾ ಕಮೆಂಟ್ ಮಾಡಿದ್ದಾರೆ. ಇದರ ಜೊತೆಗೆ ಹೃದಯದ ಇಮೋಜಿ ಸಹ ಇದೆ.

ಮುಂದಿನ ಸರದಿ ಪ್ರಿಯಾಂಕಾ-ನಿಕ್ ಜೋಡಿಯದ್ದಾ?
ವಿರಾಟ್-ಅನುಷ್ಕಾ ಮದುವೆಯಾದ ಬರೋಬ್ಬರಿ ಒಂದು ವರ್ಷದ ನಂತರ ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಮದುವೆಯಾದರು. ಈಗ ವಿರಾಟ್-ಅನುಷ್ಕಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ಸರದಿ ಪ್ರಿಯಾಂಕಾ-ನಿಕ್ ಜೋಡಿಯದ್ದಾ ಎಂದು ಪ್ರಶ್ನೆ ಮಾಡಿದ್ದಾರೆ ನೆಟ್ಟಿಗರು.

ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಚಿತ್ರಕ್ಕೆ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ರಾಕುಲ್ ಪ್ರೀತ್ ಸಿಂಗ್, ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಇನ್ನೂ ಇತರರು ಕಮೆಂಟ್ ಸಹ ಮಾಡಿದ್ದಾರೆ.

ದುಬೈನಲ್ಲಿರುವ ವಿರಾಟ್-ಅನುಷ್ಕಾ
ವಿರಾಟ್ ಕೊಹ್ಲಿ ದುಬೈ ನಲ್ಲಿ ಐಪಿಎಲ್ ಆಡುತ್ತಿದ್ದಾರೆ. ಅನುಷ್ಕಾ ಶರ್ಮಾ ಸಹ ಅಲ್ಲಿಯೇ ಇದ್ದಾರೆ. ಇಂದು (ನವೆಂಬರ್ 6) ಕೊಹ್ಲಿ ನಾಯಕತ್ವದ ಆರ್‌ಸಿಬಿಗೆ ಪ್ರಮುಖ ಮ್ಯಾಚ್ ಇದ್ದು, ಗೆಲ್ಲೇಲೇಬೇಕಾದ ಒತ್ತಡದಲ್ಲಿದೆ ತಂಡ.


Click it and Unblock the Notifications











