ಮದುವೆ ಬಗ್ಗೆ ಕೇಳಿದ್ದಕ್ಕೆ ನಟಿ ಪ್ರಿಯಾಂಕಾ ಛೋಪ್ರಾ ಹೇಳಿದ್ದು 'ಹೀಗೆ'.!
ಹಾಲಿವುಡ್ ನಲ್ಲಿಯೂ ಮಿನುಗುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಬಗ್ಗೆ ದಿನಕ್ಕೊಂದು ಸುದ್ದಿ ಆಗುತ್ತಿದೆ. ಬಾಕ್ಸ್ ಆಫೀಸ್ ಟೈಗರ್ ಸಲ್ಮಾನ್ ಖಾನ್ ಅಭಿನಯದ 'ಭಾರತ್' ಸಿನಿಮಾದಿಂದ ಹೊರಬಂದ್ಮೇಲೆ, ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಮದುವೆ ಬಗ್ಗೆಯೇ ಎಲ್ಲರೂ ಮಾತನಾಡುತ್ತಿದ್ದಾರೆ.
ಈಗಾಗಲೇ ಪ್ರಿಯಾಂಕಾ-ನಿಕ್ ಎಂಗೇಜ್ ಆಗಿದ್ದಾರೆ ಎಂಬ ವರದಿಯೂ ಆಗಿದೆ. ಕಳೆದ ಜುಲೈ 18 ರಂದು ಪ್ರಿಯಾಂಕಾ ತಮ್ಮ ಜನ್ಮದಿನ ಆಚರಿಸಿದ ಸಂದರ್ಭದಲ್ಲಿ ನಿಕ್ ಪ್ರಪೋಸ್ ಮಾಡಿ, ಕೈ ಬೆರಳಿಗೆ ಉಂಗುರ ತೊಡಿಸಿರುವ ಗುಲ್ಲು ಎಲ್ಲೆಡೆ ಹಬ್ಬಿದೆ.
ಅಷ್ಟೇ ಅಲ್ಲ, ಇನ್ನೆರಡು ತಿಂಗಳಲ್ಲಿ ಪ್ರಿಯಾಂಕಾ-ನಿಕ್ ಮದುವೆ ನಡೆಯಲಿದೆ ಅಂತ ಹೇಳುವವರೂ ಇದ್ದಾರೆ. ಇಷ್ಟೆಲ್ಲಾ ಆದರೂ, ನಿಕ್ ಜೊತೆಗಿನ ತಮ್ಮ ರಿಲೇಶನ್ ಶಿಪ್ ಬಗ್ಗೆ ಪ್ರಿಯಾಂಕಾ ಛೋಪ್ರಾ ಬಾಯ್ಬಿಟ್ಟಿಲ್ಲ. ನಿಕ್ ಜೊನಾಸ್ ಕೂಡ ತಮ್ಮ ಪ್ರೀತಿಯನ್ನ ಖಚಿತ ಪಡಿಸಿಲ್ಲ.
ಹೀಗಿರುವಾಗಲೇ, 'ಪಿ.ಟಿ.ಐ'ಗೆ ನಟಿ ಪ್ರಿಯಾಂಕಾ ಛೋಪ್ರಾ ಒಂದು ಹೇಳಿಕೆ ಕೊಟ್ಟಿದ್ದಾರೆ. ಮದುವೆ ಬಗ್ಗೆ ಪ್ರಶ್ನೆ ಮಾಡುತ್ತಿರುವವರಿಗೆ ಪ್ರಿಯಾಂಕಾ ಹೇಳಿದ್ದು ಹೀಗೆ....

ಪ್ರೈವಸಿ ಪ್ಲೀಸ್..
''ನನ್ನ ವೈಯುಕ್ತಿಕ ಬದುಕು ನನಗೆ ಮಾತ್ರ ಮೀಸಲು. ನಾನೊಬ್ಬಳು ಹುಡುಗಿಯಾಗಿ ನನ್ನ ವೈಯುಕ್ತಿಕ ವಿಚಾರಗಳನ್ನು ನನ್ನಲ್ಲಿಯೇ ಇಟ್ಟುಕೊಳ್ಳುವ ಹಕ್ಕು ನನಗಿದೆ'' ಎಂದಿದ್ದಾರೆ ನಟಿ ಪ್ರಿಯಾಂಕಾ ಛೋಪ್ರಾ.

ಯಾರಿಗೆ ಯಾಕೆ ವಿವರಣೆ ಕೊಡಬೇಕು.?
''ನನ್ನ ಕುಟುಂಬ ಹಾಗೂ ಸ್ನೇಹಿತರ ಬಗ್ಗೆ ಯಾರಿಗೂ ವಿವರಣೆ ನೀಡುವ ಅವಶ್ಯಕತೆ ನನಗಿಲ್ಲ. ಪದೇ ಪದೇ ಈ ಬಗ್ಗೆ ಸುದ್ದಿ ಆಗುತ್ತಿರುವುದನ್ನು ನೋಡಿ ನನಗೆ ನಗು ಬರುತ್ತದೆ. ಕೆಲವೊಮ್ಮೆ ಕೋಪ ಬರುತ್ತದೆ. ಎಷ್ಟೇ ಆಗಲಿ, ಇಂದಿನ ಸುದ್ದಿ ನಾಳೆಗೆ ಹಳಸು'' ಅಂತ ಹೇಳ್ತಾರೆ ಪ್ರಿಯಾಂಕಾ ಛೋಪ್ರಾ

ನಿಕ್ ಕಾನ್ಸರ್ಟ್ ನಲ್ಲಿ ಪ್ರಿಯಾಂಕಾ
ಇತ್ತೀಚೆಗಷ್ಟೇ ನಟಿ ಪ್ರಿಯಾಂಕಾ ಛೋಪ್ರಾ ಸಿಂಗಾಪುರ್ ಗೆ ಹಾರಿದ್ದರು. ಅಷ್ಟಕ್ಕೂ, ಪ್ರಿಯಾಂಕಾ ಅಲ್ಲಿಗೆ ಹೋಗಿದ್ದು ನಿಕ್ ಜೊನಾಸ್ ಕಾನ್ಸರ್ಟ್ ನಲ್ಲಿ ಭಾಗಿಯಾಗಲು. ಕಾನ್ಸರ್ಟ್ ನಲ್ಲಿ ನಿಕ್ ಗೆ ಚಿಯರ್ ಮಾಡಿದ ಪ್ರಿಯಾಂಕಾ ಇದೀಗ ಭಾರತಕ್ಕೆ ಮರಳಿದ್ದಾರೆ.

ಯಾರೀ ನಿಕ್ ಜೊನಾಸ್.?
25 ವರ್ಷದ ನಿಕ್ ಜೊನಾಸ್ ಅಮೇರಿಕಾದ ಗಾಯಕ ಹಾಗೂ ನಟ. 'ಕ್ಯಾಂಪ್ ರಾಕ್', 'ಮಿಸ್ಟರ್ ಸನ್ ಶೈನ್', 'ಸ್ಮ್ಯಾಶ್' ಮುಂತಾದ ಟೆಲಿವಿಷನ್ ಫಿಲ್ಮ್ ಗಳಲ್ಲಿ ನಿಕ್ ಜೋನಾಸ್ ಕಾಣಿಸಿಕೊಂಡಿದ್ದಾರೆ. ಗಾಯಕನಾಗಿ ಹಲವಾರು ಆಲ್ಬಂಗಳನ್ನು ನಿಕ್ ಜೋನಾಸ್ ಹೊರತಂದಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ನಡುವೆ ಹತ್ತು ವರ್ಷಗಳ ಅಂತರವಿದೆ.


Click it and Unblock the Notifications











