ಈ ಹಾಲಿವುಡ್ ನಾಯಕಿಯ 'ಆ ಭಾಗ'ವನ್ನು ನೋಡಲು ಬಯಸಿದ್ದ ಬಾಲಿವುಡ್ ನಿರ್ದೇಶಕ, ಮುಂದೇನಾಯ್ತು ?
ಚಿತ್ರರಂಗದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಕೇವಲ ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ. ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಕಥೆ ಒಂದೇ. ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವು ನಾಯಕಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಪಾತ್ರದ ಹೆಸರಿನಲ್ಲಿ ತಮ್ಮನ್ನು ಮಂಚಕ್ಕೆ ಕರೆದ ವ್ಯಕ್ತಿಗಳ ಜನ್ಮವನ್ನೂ ಜಾಲಾಡಿದ್ದಾರೆ. ಉದಾಹರಣೆಗೆ ಪ್ರಿಯಾಂಕ ಚೋಪ್ರಾ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಪ್ರಿಯಾಂಕ ಚೋಪ್ರಾ ಇವತ್ತು ಕೇವಲ ಬಾಲಿವುಡ್ ಸ್ಟಾರ್ ಮಾತ್ರವಲ್ಲ. ಹಾಲಿವುಡ್ ನಾಯಕಿ. ತನ್ನ ಸಮಕಾಲೀನರು ಬಾಲಿವುಡ್‌ನಲ್ಲಿ ನೆಲೆಯೂರಲು ನಾನಾ ರೀತಿಯ ಸರ್ಕಸ್ ಮಾಡುತ್ತಿದ್ದ ಸಮಯದಲ್ಲಿಯೇ ಪ್ರಿಯಾಂಕ ಚೋಪ್ರಾ ಹಾಲಿವುಡ್‌ನಲ್ಲಿ ತಮ್ಮ ಹೆಸರಿನ ಧ್ವಜವನ್ನು ಹಾರಿಸಿದ್ದರು.

ಇಂಥಾ ಪ್ರಿಯಾಂಕ ಚೋಪ್ರಾ ಈಗ ವರ್ಷಗಳ ನಂತರ ಭಾರತದ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ರಾಜ್ ಮೌಳಿ ನಿರ್ದೇಶನದ ಮಹೇಶ್ ಬಾಬು ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹಿಂದೆಂದೂ ಭಾರತದ ನಾಯಕಿಯರು ಪಡೆಯದ ಸಂಭಾವನೆಯನ್ನು ಈ ಚಿತ್ರಕ್ಕೆ ಪಡೆದಿದ್ದಾರೆ, ಇದರ ನಡುವೆ ತಮ್ಮ ಕಹಿ ಅನುಭವವನ್ನು ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಹೌದು, ಹೆಣ್ಣು ಮಕ್ಕಳಿಗೆ ಎಂದೇ ಫೋರ್ಬ್ಸ್ ಸಂಸ್ಥೆ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕ ಚೋಪ್ರಾ ತಮ್ಮ ಬದುಕಿನ ಪುಟಗಳನ್ನು ತಿರುವಿ ಹಾಕಿದ್ದಾರೆ. ಅಸಾಧ್ಯವಾದದ್ದು ಯಾವುದು ಇಲ್ಲ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಚಿತ್ರರಂಗದಲ್ಲಿ ತಮಗಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಕೂಡ ಪ್ರಿಯಾಂಕ ಚೋಪ್ರಾ ಮಾತನಾಡಿದ್ದಾರೆ.
ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿರುವ ಪ್ರಿಯಾಂಕ ಚೋಪ್ರಾ ನನಗೆ ಆಗಿನ್ನೂ ಹತ್ತೊಂಬತ್ತರ ಹರೆಯ. ಅವಕಾಶಕ್ಕಾಗಿ ಅಲೆದಾಡುತ್ತಿದ್ದ ದಿನಗಳವು. ಆ ಸಮಯದಲ್ಲಿ ಚಿತ್ರವೊಂದಕ್ಕೆ ನಾನು ಆಯ್ಕೆಯಾಗಿದ್ದೆ, ಈ ಹಿನ್ನೆಲೆಯಲ್ಲಿ ನಾನು ಆ ಚಿತ್ರದ ನಿರ್ದೇಶಕರ ಬಳಿ ನನ್ನ ಕಾಸ್ಟೂಮ್ ಕುರಿತು ಚರ್ಚೆ ಮಾಡಲು ಹೋಗಿದ್ದೇ ಆಗ ಆ ನಿರ್ದೇಶಕ ತನ್ನ ಫೋನ್ ತೆಗೆದುಕೊಂಡು ಕಾಸ್ಟೂಮ್ ಡಿಸೈನರ್‌ಗೆ ಕರೆ ಮಾಡಿದ ಆ ನಂತರ ನಾಯಕಿಯರ ಪ್ಯಾಂಟಿಯನ್ನೇ ನೋಡಲು ಅನೇಕ ಜನ ಚಿತ್ರಮಂದಿರಕ್ಕೆ ಬರುತ್ತಾರೆ, ಹೀಗಾಗಿ ಈಕೆಯ ಪ್ಯಾಂಟಿ ತುಂಬಾ ಚಿಕ್ಕದಾಗಿರಬೇಕು, ಮೊದಲ ಸೀಟ್‌ನಲ್ಲಿ ಕುಳಿತವರ ಕಣ್ಣಿಗೆ ಪ್ಯಾಂಟಿ ರಾಚಬೇಕು ಎಂದು ಹೇಳಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ಬೇಕು ಬೇಕೆಂದೇ ಈ ವಿಚಾರವನ್ನು ನನ್ನೆದುರು ನಾಲ್ಕು ಬಾರಿ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಹೇಳಿದ್ದಾರೆ.
ನಿರ್ದೇಶಕರ ಈ ಮಾತನ್ನು ಕೇಳಿ ನನಗೆ ಆ ಕ್ಷಣಕ್ಕೆ ಗಾಬರಿ ಮತ್ತು ಆತಂಕವಾಯ್ತು ಈ ಕಾರಣಕ್ಕೆ ನೇರವಾಗಿ ಮನೆಗೆ ಬಂದ ನಾನು ನನ್ನ ತಾಯಿಯ ಮುಂದೆ ಈ ಅನುಭವ ಹಂಚಿಕೊಂಡೆ ಅವರು ಕೂಡಲೇ ಚಿತ್ರದಿಂದ ಹೊರ ಬರುವಂತೆ ಹೇಳಿದರು ಎಂದಿರುವ ಪ್ರಿಯಾಂಕ ಚೋಪ್ರಾ ಆ ನಂತರ ಆ ನಿರ್ದೇಶಕನ ಮುಖವನ್ನು ಕೂಡ ನಾನು ನೋಡಲಿಲ್ಲ ಎಂದು ಹೇಳಿದ್ದಾರೆ.
ಹೀಗೆ ಶೋಷಣೆಗೆ ಒಳಗಾದ ಪ್ರಿಯಾಂಕ ಚೋಪ್ರಾ ಸದ್ಯ ರಾಜಮೌಳಿ ಮತ್ತು ಮಹೇಶ್ ಬಾಬು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಿಯಾಂಕ ಚೋಪ್ರಾ 30 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ. ಯಾಕೆಂದರೆ ಪ್ರಿಯಾಂಕ ಈಗ ಬಾಲಿವುಡ್ ತಾರೆ ಅಲ್ಲ ಬದಲಿಗೆ ಹಾಲಿವುಡ್ ನಟಿ. ಹೀಗಾಗಿ ಡಿಮ್ಯಾಂಡ್ ಹೆಚ್ಚಿದೆ. ಇನ್ನು ಈ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಮಾತ್ರವಲ್ಲ ಹಾಲಿವುಡ್ ನಟ ಕ್ರಿಸ್ ಹೆಮ್ಸ್ವರ್ತ್ ಕೂಡ ಈ ಚಿತ್ರದಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಮೋಹನ್ ಲಾಲ್, ನಯನತಾರ, ಚಿಯಾನ್ ವಿಕ್ರಂ, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ದೇಶ-ವಿದೇಶದ ಅನೇಕರು ಈ ಮಹತ್ವಕಾಂಕ್ಷೆಯ ಚಿತ್ರಕ್ಕೆ ಕೈ ಜೋಡಿಸುತ್ತಿದ್ಧಾರೆ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಆದರೆ ಚಿತ್ರದ ಬಗ್ಗೆ ಯಾವ ಗುಟ್ಟನ್ನು ರಾಜಮೌಳಿ ಬಿಟ್ಟು ಕೊಟ್ಟಿಲ್ಲ.


Click it and Unblock the Notifications











