'ವಾರಾಣಾಸಿ' ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು.. ಪ್ರಿಯಾಂಕಾ ಮುಂದೆ ದೀಪಿಕಾ, ಆಲಿಯಾ ಸಂಭಾವನೆ ಲೆಕ್ಕಕ್ಕೆ ಇಲ್ಲ
ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಸಿನಿಮಾ ರಾಜಮೌಳಿಯ 'ವಾರಾಣಾಸಿ'. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾದ ಫಸ್ಟ್ ಝಲಕ್ ಕಿಕ್ ಕೊಡುವುದಕ್ಕೆ ಶುರು ಮಾಡಿದೆ. ಮಹೇಶ್ ಬಾಬು ರೋಲ್, ಪ್ರಿಯಾಂಕಾ ಚೋಪ್ರಾ ದೇಸಿ ಲುಕ್ ಸಿನಿಮಾ ಪ್ರೇಮಿಗಳ ನಿದ್ದೆ ಕೆಡಿಸಿದೆ. ಅದರಲ್ಲೂ ಸೀರೆಯುಟ್ಟು ದೇಸಿ ನಾರಿಯಾಗಿದ ಆಕ್ಷನ್ ಮೂಡ್‌ನಲ್ಲಿರುವ ಪ್ರಿಯಾಂಕಾಗೆ ಕ್ಲೀನ್ ಬೌಲ್ಡ್ ಆದರವೇ ಹೆಚ್ಚು.
ಹಾಲಿವುಡ್ ಲೆವೆಲ್‌ನಲ್ಲಿರುವ ಪ್ರಿಯಾಂಕಾ ಚೋಪ್ರಾರನ್ನು ಮತ್ತೆ ಇಂಡಿಯನ್ ಸಿನಿಮಾಗೆ ರಾಜಮೌಳಿ ಕರೆದುಕೊಂಡು ಬಂದಿದ್ದಾರೆ. ಜಕ್ಕಣ್ಣನ ಸಿನಿಮಾವನ್ನು ಒಪ್ಪಿ ಮತ್ತೆ ಹಿಂತಿರುಗಿದ್ದಕ್ಕೆ ಕಾರಣಗಳು ಹಲವು ಇದೆ. ಅದರಲ್ಲಿ ಸಂಭಾವನೆ ಕೂಡ ಒಂದು. ಸದ್ಯ ಸಿನಿಮಾ ಲೋಕದಲ್ಲಿ ಇದೀಗ ಪ್ರಿಯಾಂಕಾ ಚೋಪ್ರಾ ಸಂಭಾವನೆ ಭಾರೀ ಸದ್ದು ಮಾಡುತ್ತಿದೆ.

ರಾಜಮೌಳಿಯ 'ವಾರಾಣಾಸಿ' ಸಿನಿಮಾದ ಮೂಲಕ ಪ್ರಿಯಾಂಕಾ ಚೋಪ್ರಾ ಭಾರತದ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಹಣ ಪಡೆಯುವ ನಟಿ ಎನಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿರುವ ದೀಪಿಕಾ ಪಡುಕೋಣೆ ಹಾಗೂ ಆಲಿಯಾ ಭಟ್ ಇಬ್ಬರನ್ನೂ ಪ್ರಿಯಾಂಕಾ ಚೋಪ್ರಾ ಹಿಂದಿಕ್ಕಿದ್ದಾರೆಂಬ ಸುದ್ದಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಪ್ರಿಯಾಂಕಾ ಚೋಪ್ರಾ ಈ ಸಿನಿಮಾಗೆ ಪಡೆದ ಸಂಭಾವನೆ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ವಾರಾಣಾಸಿ'ಗೆ ದುಬಾರಿ ಸಂಭಾವನೆ
ಬಾಲಿವುಡ್‌ನಲ್ಲಿ ನಟಿಯರ ಸಂಭಾವನೆಯ ವಿಷಯ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್ ಬೇಡಿಕೆಯ ನಟಿಯಾಗಿದ್ದು, ಇವರಿಬ್ಬರು ದುಬಾರಿ ಸಂಭಾವನೆ ಪಡೆಯುವ ನಟಿಯರ ಸ್ಥಾನದಲ್ಲಿದ್ದರು. ಆದರೆ ಹಾಲಿವುಡ್‌ನಲ್ಲಿ ಯಶಸ್ಸು ಕಂಡ ಬಳಿಕ ಪ್ರಿಯಾಂಕಾ ಚೋಪ್ರಾ ಲೆವೆಲ್ ಬದಲಾಗಿದೆ. ಬಹುತೇಕ ಬಾಲಿವುಡ್‌ನಿಂದ ದೂರವಿದ್ದ ಪಿಗ್ಗಿ ಮತ್ತೆ ಭಾರತೀಯ ಚಿತ್ರರಂಗಕ್ಕೆ ಮರಳಿದ್ದು, ದೀಪಿಕಾ ಹಾಗೂ ಆಲಿಯಾಗಿಂತ ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ. 'ವಾರಣಾಸಿ'ಗೆ ಪ್ರಿಯಾಂಕಾ ಚೋಪ್ರಾ ಎಷ್ಟು ಸಂಭಾವನೆ ಕೇಳಿದ್ದಾರೆ ಗೊತ್ತೇ? ಆ ಮೊತ್ತವನ್ನು ಕೇಳಿದರೆ ನಿಮಗೆ ಶಾಕ್ ಆಗೋದು ಖಚಿತ.
ದೇಶಿ ಹುಡುಗಿಯ ದಾಖಲೆಯ ಮೊತ್ತ
ಬಾಲಿವುಡ್‌ನಿಂದ ಹಾಲಿವುಡ್‌ಗೆ ಹೋಗಿ ಅಲ್ಲಿ ದೊಡ್ಡ ಹೆಸರು ಮಾಡಿರುವ ಪ್ರಿಯಾಂಕಾ ಚೋಪ್ರಾ ಹಲವು ವರ್ಷಗಳ ಬಳಿಕ ಭಾರತೀಯ ಸಿನಿಮಾಗೆ ಮರಳುತ್ತಿದ್ದಾರೆ. ಅದೂ ಭಾರತದ ದುಬಾರಿ ನಿರ್ದೇಶಕ ರಾಜಮೌಳಿ ಸಿನಿಮಾ ಮೂಲಕ ರಿ-ಎಂಟ್ರಿ ಕೊಟ್ಟಿದ್ದಾರೆ. ಅವರ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ಪಡೆದಿಕೊಂಡಿರುವ ಸಂಭಾವನೆ ಬರೋಬ್ಬರಿ 30 ಕೋಟಿ ರೂಪಾಯಿಗಳು ಎಂದು ವರದಿಯಾಗಿವೆ. ಭಾರತದ ನಟಿಯೊಬ್ಬರು ಸಿನಿಮಾ ಒಂದಕ್ಕೆ ಪಡೆಯುತ್ತಿರುವ ಅತಿ ದೊಡ್ಡ ಮೊತ್ತ ಇದಾಗಿದೆ. ಈ ದಾಖಲೆ ಮೊತ್ತ ಪಡೆಯುವ ಮೂಲಕವೇ ಪ್ರಿಯಾಂಕಾ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಪಟ್ಟವನ್ನು ಪಡೆದುಕೊಂಡಿದ್ದಾರೆ.

ದೀಪಿಕಾ ಮತ್ತು ಆಲಿಯಾ ಸಂಭಾವನೆ ಎಷ್ಟು?
ಇದಕ್ಕೆ ಮೊದಲು ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಅವರು ಅತ್ಯಧಿಕ ಸಂಭಾವನೆ ಪಡೆಯುತ್ತಿದ್ದರು. ದೀಪಿಕಾ ಪಡುಕೋಣೆ ಒಂದು ಸಿನಿಮಾಗೆ ಸುಮಾರು 20 ರಿಂದ 25 ಕೋಟಿ ರೂ. ಪಡೆಯುತ್ತಿದ್ದರೆ, ಆಲಿಯಾ ಭಟ್ ಸಂಭಾವನೆ ಕೂಡ ಹೆಚ್ಚು ಕಡಿಮೆ ಇದೇ ಮೊತ್ತದ ಆಸುಪಾಸಿನಲ್ಲಿ ಇರುತ್ತಿತ್ತು. ಈಗ ಪ್ರಿಯಾಂಕಾ ಚೋಪ್ರಾ ಇವರಿಬ್ಬರನ್ನೂ ಹಿಂದಿಕ್ಕಿ 30 ಕೋಟಿ ರೂ. ಪಡೆಯುವ ಮೂಲಕ ದುಬಾರಿ ನಟಿ ಎನಿಸಿಕೊಂಡಿದ್ದಾರೆ. ಇದು ಸಿನಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಮಹೇಶ್ ಬಾಬು-ರಾಜಮೌಳಿ ನಿರ್ಧಾರ
ಇದೇ ಸಿನಿಮಾಕ್ಕೆ ನಾಯಕ ನಟರಾಗಿ ಸೂಪರ್‌ಸ್ಟಾರ್ ಮಹೇಶ್ ಬಾಬು ನಟಿಸುತ್ತಿದ್ದಾರೆ. ಎಸ್.ಎಸ್. ರಾಜಮೌಳಿ ಈ ಬಾರಿ ಗ್ಲೋಬಲ್ ಲೆವೆಲ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ ಪ್ರಿಯಾಂಕಾ ಸೇರಿದಂತೆ ಮಹೇಶ್ ಬಾಬು, ರಾಜಮೌಳಿ ದಾಖಲೆ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ ಎನ್ನಲಾಗಿದೆ. ದೊಡ್ಡ ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರು ಮೆಗಾ ಹಿಟ್ ಆಗುತ್ತೆ ಎನ್ನುವ ಖುಷಿಯಲ್ಲಿದ್ದಾರೆ. ಒಟ್ಟಿನಲ್ಲಿ ವಾರಾಣಾಸಿ ಶೂಟಿಂಗ್ ನಡೆಯುತ್ತಿದ್ದು, ಆರಂಭದ ದಿನಗಳಲ್ಲೇ ಹಲವು ದಾಖಲೆಗಳನ್ನು ಸೃಷ್ಟಿಸಿದೆ.


Click it and Unblock the Notifications











