ಚಿಕ್ಕವಯಸ್ಸಿನಿಂದಲೂ ಅಸ್ತಮಾದಿಂದ ಬಳಲುತ್ತಿರುವ ಪ್ರಿಯಾಂಕಾ ಛೋಪ್ರಾ

ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅಸ್ತಮಾದಿಂದ ಬಳಲುತ್ತಿದ್ದಾರೆ. ಚಿಕ್ಕವಯಸ್ಸಿನಿಂದಲೂ ಪ್ರಿಯಾಂಕಾ ಛೋಪ್ರಾಗೆ ಅಸ್ತಮಾ ಇರುವುದು ಇದೀಗ ಸೋಷಿಯಲ್ ಮೀಡಿಯಾ ಮೂಲಕ ಬೆಳಕಿಗೆ ಬಂದಿದೆ.

''ಐದು ವರ್ಷದಿಂದಲೂ ನಾನು ಅಸ್ತಮಾದಿಂದ ನರಳುತ್ತಿದ್ದೇನೆ. ನನ್ನ ತಾಯಿ ಡಾಕ್ಟರ್. ಅವರ ಸಲಹೆ ಮೇರೆಗೆ ನಾನು ಇನ್ ಹೇಲರ್ ಬಳಸಲು ಆರಂಭಿಸಿದೆ. ಇನ್ ಹೇಲರ್ ನಿಂದ ಯಾವುದೇ ತೊಂದರೆ ಆಗಿಲ್ಲ. ಅದರ ಬಳಕೆಯಿಂದ ಉಸಿರಾಡಲು ಸಹಕಾರಿ ಆಗುತ್ತದೆ'' ಎಂದು ವಿಡಿಯೋವೊಂದರಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ, ನಟಿ ಪ್ರಿಯಾಂಕಾ ಛೋಪ್ರಾ ಸಿಪ್ಲಾ ಕಂಪನಿಯ ಇನ್ ಹೇಲರ್ ಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಹೀಗಾಗಿ, ಇನ್ ಹೇಲರ್ ನಿಂದ ತಮಗಾದ ಅನುಕೂಲವನ್ನ ಮುಚ್ಚುಮರೆ ಇಲ್ಲದೆ ಪ್ರಿಯಾಂಕಾ ಛೋಪ್ರಾ ಮಾತನಾಡಿದ್ದಾರೆ.

Priyanka Chopra reveals that she is Asthmatic

ಈ ಕುರಿತು ಟ್ವಿಟ್ಟರ್ ನಲ್ಲಿ ''ನನಗೆ ಅಸ್ತಮಾ ಇರುವುದು ನನಗೆ ಗೊತ್ತಿರುವವರಿಗೆಲ್ಲಾ ಗೊತ್ತು. ಇದರಲ್ಲಿ ಮುಚ್ಚಿಡುವಂಥದ್ದು ಏನಿದೆ.? ಅಸ್ತಮಾ ನನ್ನನ್ನ ಕಂಟ್ರೋಲ್ ಮಾಡುವ ಮುನ್ನ, ನಾನು ಅದನ್ನ ಕಂಟ್ರೋಲ್ ಮಾಡಬೇಕಿತ್ತು. ಇನ್ ಹೇಲರ್ ಇರುವ ಕಾರಣ, ನಾನು ಸಾಧನೆ ಮಾಡಲು ಅಸ್ತಮಾ ಅಡ್ಡಿಯಾಗಿಲ್ಲ'' ಎಂದು ಪ್ರಿಯಾಂಕಾ ಛೋಪ್ರಾ ಬರೆದುಕೊಂಡಿದ್ದಾರೆ.

ಸದ್ಯ ಭಾವಿ ಪತಿ ನಿಕ್ ಜೊನಾಸ್ ಜೊತೆಗೆ ಪ್ರಿಯಾಂಕಾ ಛೋಪ್ರಾ ಹಾಲಿಡೇ ಮೂಡ್ ನಲ್ಲಿದ್ದಾರೆ. ನಿಕ್ ಜೊನಾಸ್-ಪ್ರಿಯಾಂಕಾ ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

More from Filmibeat

English summary
Bollywood Actress Priyanka Chopra reveals that she is Asthmatic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X