ಪ್ರಿಯಾಂಕಾಗೆ ಸ್ತನದ ಗಾತ್ರ ಹೆಚ್ಚಿಸಿಕೊಳ್ಳಬೇಕು ಎಂದಿದ್ದರಂತೆ ನಿರ್ದೇಶಕರು: ಆತ್ಮಚರಿತ್ರೆಯಲ್ಲಿ ಶಾಕಿಂಗ್ ಘಟನೆ ರಿವೀಲ್

ಇಂದು ಬಾಲಿವುಡ್ ನಿಂದ ಹಾಲಿವುಡ್ ವರೆಗೂ ಸದ್ದು ಮಾಡುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಆರಂಭ ದಿನಗಳಲ್ಲಿ ಎದುರಿಸಿದ ಕೆಲವು ಅಹಿತಕರ ಘಟನೆಗಳ ಬಗ್ಗೆ ಆಟೋಬಯೋಗ್ರಫಿಯಲ್ಲಿ ಬಹಿರಂಗ ಪಡಿಸಿದ್ದಾರೆ. ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿ ನೆಲೆಸಿದ್ದಾರೆ.

ಇತ್ತೀಚಿಗಷ್ಟೆ ಪ್ರಿಯಾಂಕಾ ನಟನೆಯ ಟೈಗರ್ ಸಿನಿಮಾ ರಿಲೀಸ್ ಆಗಿದೆ. ಸದ್ಯ ಇಂಗ್ಲೀಷ್ ವೆಬ್ ಸೀರಿಸ್ ಗಳಲ್ಲಿ ಪ್ರಿಯಾಂಕಾ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಿಯಾಂಕಾ ಆತ್ಮಚರಿತ್ರೆ 'ಅನ್ ಫಿನಿಶಿಡ್' ಬಿಡುಗಡೆ ಮಾಡಲು ಕಾತರದಿಂದ ಕಾಯುತ್ತಿದ್ದಾರೆ. ಪ್ರಿಯಾಂಕಾ ಆಟೋಬಯೋಗ್ರಫಿ ಬಿಡುಗಡೆಗೂ ಮೊದಲೇ ಕೆಲವು ಭಾಗಗಳು ಬಹಿರಂಗವಾಗಿದ್ದು, ವೈರಲ್ ಆಗುತ್ತಿದೆ.

2002ರಲ್ಲಿ ವಿಶ್ವ ಸುಂದರಿ ಪಟ್ಟ ಗೆದ್ದಿದ್ದ ಪ್ರಿಯಾಂಕಾ

2002ರಲ್ಲಿ ವಿಶ್ವ ಸುಂದರಿ ಪಟ್ಟ ಗೆದ್ದಿದ್ದ ಪ್ರಿಯಾಂಕಾ

ಪ್ರಿಯಾಂಕಾ ಆತ್ಮಚರಿತ್ರೆಯಲ್ಲಿ ಬಣ್ಣದ ಲೋಕದ ಆರಂಭದ ದಿನಗಳಲ್ಲಿ ಎದುರಿಸಿದ ಕೆಟ್ಟ ಘಟನೆಗಳ ಬಗ್ಗೆ ಬರೆದುಕೊಂಡಿದ್ದಾರೆ. 2002ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದ ಪ್ರಿಯಾಂಕಾ ಆ ಸಮಯದಲ್ಲಿ ಸಿನಿಮಾರಂಗದಲ್ಲಿ ಮಿಂಚಲು ಕನಸು ಕಾಣುತ್ತಿದ್ದರು.

ಅಹಿತಕರ ಘಟನೆ ಬಿಚ್ಚಿಟ್ಟ ಪ್ರಿಯಾಂಕಾ

ಅಹಿತಕರ ಘಟನೆ ಬಿಚ್ಚಿಟ್ಟ ಪ್ರಿಯಾಂಕಾ

ವಿಶ್ವ ಸುಂದರಿ ಪಟ್ಟ ಗೆದ್ದಿದ್ದಾರೆ ಅಂದಮೇಲೆ ಸಿನಿಮಾ ಲೋಕದಲ್ಲಿ ಬೇಡಿಕೆ ಹೆಚ್ಚಾಗಿರುವುದು ಸಹಜ. ಪ್ರಿಯಾಂಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ಅನೇಕ ನಿರ್ಮಾಪಕರು ಕಾಯುತ್ತಿರುತ್ತಾರೆ. ಈ ಸಮಯದಲ್ಲಿ ಪ್ರಿಯಾಂಕಾ ನಿರ್ದೇಶಕರೊಬ್ಬರ ಜೊತೆ ಸಿನಿಮಾ ಮಾತುಕತೆ ನಡೆಸುತ್ತಾರೆ. ಆ ನಿರ್ದೇಶಕರು ಪ್ರಿಯಾಂಕಾ ಬಳಿ ಸ್ತನದ ಗಾತ್ರವನ್ನು ಹೆಚ್ಚಿಸಿಕೊಳ್ಳುವಂತೆ ಹೇಳಿದ್ದ ಬಗ್ಗೆ ಆತ್ಮಚರಿತ್ರೆಯಲ್ಲಿ ಬಹಿರಂಗ ಪಡಿಸಿಡಿಸಿದ್ದಾರೆ.

ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದ್ದ ನಿರ್ದೇಶಕರು

ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದ್ದ ನಿರ್ದೇಶಕರು

ಈ ಬಗ್ಗೆ ಬರೆದುಕೊಂಡಿರುವ ಪ್ರಿಯಾಂಕಾ, 'ಕೆಲವು ನಿಮಿಷಗಳ ಮಾತುಕತೆ ಬಳಿಕ ನಿರ್ದೇಶಕರು ಎದ್ದು ನಿಲ್ಲುವಂತೆ ಹೇಳಿದರು. ಬಳಿಕ ಒಂದು ಸುತ್ತ ತಿರುಗುವಂತೆ ಹೇಳಿದರು. ನಾನು ಹಾಗೆ ಮಾಡಿದೆ. ಅವರು ನನ್ನನ್ನು ತುಂಬಾ ಸಮಯ ಹಾಗೆ ನೋಡಿದರು. ಬಳಿಕ ನನಗೆ ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು. ಅಲ್ಲದೆ ದೇಹದ ಬೇರೆ ಬೇರೆ ಅಂಗಾಂಗಗಳ ಗಾತ್ರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸೂಚಿಸಿದರು'

ವೈದ್ಯರನ್ನು ಸೂಚಿಸಿದ್ದ ನಿರ್ದೇಶಕ

ವೈದ್ಯರನ್ನು ಸೂಚಿಸಿದ್ದ ನಿರ್ದೇಶಕ

'ಲಾಸ್ ಏಂಜಲೀಸ್ ನಲ್ಲಿ ಒಬ್ಬರು ವೈದ್ಯರಿದ್ದಾರೆ. ಅವರ ಬಳಿ ನಾನು ಮಾತನಾಡುತ್ತೇನೆ. ಸರ್ಜರಿಗೆ ಎಲ್ಲಾ ವ್ಯವಸ್ಥೆ ಮಾಡಿಸುತ್ತೇನೆ ಎಂದರು, ಇದಕ್ಕೆ ನನ್ನ ವ್ಯವಸ್ಥಾಪಕರು ಸಹ ಧ್ವನಿ ಗೂಡಿಸಿದರು' ಎಂದು ನಿರ್ದೇಶಕರ ಬಗ್ಗೆ ಪ್ರಿಯಾಂಕಾ ಆತ್ಮಚರಿತ್ರೆಯಲ್ಲಿ ಬಿಚ್ಚಿಟ್ಟಿದ್ದಾರೆ.

Recommended Video

ಕಬ್ಜ ಚಿತ್ರತಂಡ ಸೇರಿಕೊಂಡ ಕನ್ನಡದ ಯುವ ನಟ | Filmibeat Kannada
ಈ ಘಟನೆ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಪ್ರಿಯಾಂಕಾ

ಈ ಘಟನೆ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಪ್ರಿಯಾಂಕಾ

ಈ ಘಟನೆ ಪ್ರಿಯಾಂಕಾ ತನ್ನ ವ್ಯವಸ್ಥಾಪಕರಿಂದ ಬೇರ್ಪಟ್ಟಿರುವುದಾಗಿ ಹೇಳಿದ್ದಾರೆ. ಈ ಘಟನೆ ಪ್ರಿಯಾಂಕಾ ಅವರನ್ನು ಮಾನಸಿಕವಾಗಿ ತುಂಬಾ ಕುಗ್ಗಿಸಿದೆಯಂತೆ. ಬಳಿಕ ಧೈರ್ಯತಂದುಕೊಂಡ ಪ್ರಿಯಾಂಕಾ ಬಾಲಿವುಡ್ ನಲ್ಲಿ ಮಿಂಚಲು ಪ್ರಾರಂಭ ಮಾಡುತ್ತಾರೆ. ಸದ್ಯ ಭಾರತದ ಟಾಪ್ ನಟಿಯರಸಾಲಿನಲ್ಲಿ ಇರುವ ಪ್ರಿಯಾಂಕಾ ಹಾಲಿವುಡ್ ನಲ್ಲೂ ಹವಾ ಸೃಷ್ಟಿಸಿದ್ದಾರೆ.

More from Filmibeat

English summary
Bollywood Actress Priyanka Chopra reveals Unpleasant Experience in Autobiography Unfinished.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X