ತನುಶ್ರೀ ದತ್ತಾ ಪರವಾಗಿ ದನಿಯೆತ್ತಿದ್ದ ಬಾಲಿವುಡ್ ತಾರೆಯರಿವರು..

ಲೈಂಗಿಕ ಕಿರುಕುಳದ ಬಗ್ಗೆ ಈಗಾಗಲೇ ಹಲವು ನಟಿಯರು ದನಿಯೆತ್ತಿದ್ದಾರೆ. ಕೆಲವು ನಟಿಯರು ನಟರ ಹೆಸರನ್ನು ಬಹಿರಂಗ ಪಡಿಸದೇ, ನಡೆದ ಘಟನೆಯನ್ನ ವಿವರಿಸಿದರೆ... ಇತ್ತ ''ನಾನಾ ಪಾಟೇಕರ್ ರಿಂದಲೇ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ'' ಎಂದು ರಾಜಾರೋಷವಾಗಿ ಹೇಳಿ ನಟಿ ತನುಶ್ರೀ ದತ್ತಾ ಬ್ರೇಕಿಂಗ್ ನ್ಯೂಸ್ ಮಾಡಿದ್ದಾರೆ.

ಸಡನ್ನಾಗಿ ಬಾಲಿವುಡ್ ನಿಂದ ದೂರ ಸರಿದು, ವಿದೇಶಕ್ಕೆ ಹಾರಿದ್ದ ತನುಶ್ರೀ ದತ್ತಾ ಇತ್ತೀಚೆಗಷ್ಟೇ ಭಾರತಕ್ಕೆ ವಾಪಸ್ ಆದರು. ಮುಂಬೈಗೆ ಮರಳಿದ ಮೇಲೆ ಸಂದರ್ಶನವೊಂದರಲ್ಲಿ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಬಾಂಬ್ ಸಿಡಿಸಿದರು.

''ಮಹಿಳೆಯರಿಗೆ ನಾನಾ ಪಾಟೇಕರ್ ಗೌರವ ಕೊಡಲ್ಲ. ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ದೌರ್ಜನ್ಯ ಎಸಗಿದ್ದಾರೆ'' ಅಂತ ತನುಶ್ರೀ ದತ್ತಾ ಬಹಿರಂಗ ಪಡಿಸಿದರು.

ಇದನ್ನೆಲ್ಲ ನೋಡಿ, ತನುಶ್ರೀ ದತ್ತಾ ಸಪೋರ್ಟ್ ಗೆ ಫರ್ಹಾನ್ ಅಖ್ತರ್, ಪ್ರಿಯಾಂಕಾ ಛೋಪ್ರಾ, ಟ್ವಿಂಕಲ್ ಖನ್ನಾ, ಸೋನಂ ಕಪೂರ್, ರಿಚಾ ಚಡ್ಡಾ, ಸ್ವರಾ ಭಾಸ್ಕರ್ ಧಾವಿಸಿದ್ದಾರೆ. ತನುಶ್ರೀ ದತ್ತಾ ಪರವಾಗಿ ಇವರೆಲ್ಲರೂ ಮಾಡಿರುವ ಟ್ವೀಟ್ ಗಳನ್ನ ನೀವೇ ನೋಡಿಕೊಂಡು ಬನ್ನಿ...

ಫರ್ಹಾನ್ ಅಖ್ತರ್ ಮಾಡಿದ ಟ್ವೀಟ್ ಏನು.?

''ಇಂದು ಚರ್ಚೆ ಆಗುತ್ತಿರುವ ಘಟನೆಗೆ ಅಂದು Janice Sequeira ಸಾಕ್ಷಿ ಆಗಿದ್ದರು. ಹತ್ತು ವರ್ಷಗಳ ಹಿಂದೆ ವೃತ್ತಿ ಬಗ್ಗೆ ಗಮನ ಹರಿಸಬೇಕಿದ್ದಾಗಲೇ, ತನುಶ್ರೀ ದತ್ತಾ ಸುಮ್ಮನೆ ಇರಲಿಲ್ಲ. ಇವತ್ತು ಕೂಡ ಆಕೆಯ ಪರಿಸ್ಥಿತಿ ಬದಲಾಗಿಲ್ಲ. ಆಕೆಯ ಧೈರ್ಯವನ್ನ ಮೆಚ್ಚಬೇಕು. ಉದ್ದೇಶವನ್ನ ಪ್ರಶ್ನಿಸಬಾರದು'' ಎಂದು ಫಾರ್ಹನ್ ಅಖ್ತರ್ ಟ್ವೀಟ್ ಮಾಡಿದ್ದಾರೆ.

ತನುಶ್ರೀಗೆ ಸಪೋರ್ಟ್ ಮಾಡಿದ ಪ್ರಿಯಾಂಕಾ

ಫರ್ಹಾನ್ ಅಖ್ತರ್ ಮಾಡಿದ ಟ್ವೀಟ್ ಗೆ ಸಮ್ಮತಿ ಸೂಚಿಸುತ್ತಾ, ''ಜಗತ್ತು ಇಂಥವರನ್ನು ನಂಬಬೇಕು'' ಎಂದು ನಟಿ ಪ್ರಿಯಾಂಕಾ ಛೋಪ್ರಾ ಟ್ವೀಟ್ ಮಾಡಿದ್ದಾರೆ.

ನೋವಾಗುತ್ತದೆ

''ತನುಶ್ರೀ ದತ್ತಾ ಹಾಗೆ ಒಂಟಿಯಾಗಿ ನಿಂತು, ಪ್ರಶ್ನೆಗಳನ್ನು ಎದುರಿಸುವುದಕ್ಕೆ ನೋವಾಗುತ್ತದೆ. ಇಂತಹ ಪಬ್ಲಿಸಿಟಿಯನ್ನ ಯಾವ ಹೆಣ್ಣು ಕೂಡ ಬಯಸುವುದಿಲ್ಲ. ಸೆಟ್ ನಲ್ಲಿ ಆಕೆಗೆ ಕಿರುಕುಳ ಆಗಿದೆ'' ಎಂದು ರಿಚಾ ಚಡ್ಡಾ ಟ್ವೀಟ್ ಮಾಡಿದ್ದಾರೆ.

ಟ್ವಿಂಕಲ್ ಮಾಡಿರುವ ಟ್ವೀಟ್ ಏನು.?

''ತನುಶ್ರೀ ದತ್ತಾ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವ ಮುನ್ನ Janice Sequeira ವಿವರಿಸಿರುವ ಘಟನೆಯನ್ನ ಪೂರ್ತಿ ಓದಿರಿ.. ವೃತ್ತಿ ವಾತಾವರಣದಲ್ಲಿ ಕಿರುಕುಳ ಇಲ್ಲದೇ ಇರುವುದು ಮೂಲಭೂತ ಹಕ್ಕು'' ಎಂದು ಟ್ವಿಂಕಲ್ ಖನ್ನಾ ಟ್ವೀಟಿಸಿದ್ದಾರೆ.

ಸ್ವರಾ ಭಾಸ್ಕರ್ ಏನಂತಾರೆ.?

ಇನ್ನೂ ತನುಶ್ರೀ ದತ್ತಾ ಆಡಿರುವ ಮಾತುಗಳಲ್ಲಿ ನನಗೆ ನಂಬಿಕೆ ಇದೆ ಎಂದು ನಟಿ ಸ್ವರಾ ಭಾಸ್ಕರ್ ಕೂಡ ಟ್ವೀಟ್ ಮಾಡಿದ್ದಾರೆ.

More from Filmibeat

English summary
Priyanka Chopra, Richa Chadha, Twinkle speak out for Tanushree. Take a look at the tweets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X