For Quick Alerts
  ALLOW NOTIFICATIONS  
  For Daily Alerts

  ಈ ನಟನ ಜೊತೆ ಪ್ರಿಯಾಂಕಾ ಚೋಪ್ರಾ ಮದುವೆ ಮಾಡಲು ಅವರ ಕುಟುಂಬ ಪ್ಲಾನ್ ಮಾಡಿತ್ತು

  |

  ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಸದ್ಯ ಪತಿ, ಅಮೆರಿಕದ ಗಾಯಕ ನಿಕ್ ಜೋನಸ್ ಜೊತೆ ಸಂತೋಷದ ಜೀವನ ನಡೆಸುತ್ತಿದ್ದಾರೆ. 2018ರಲ್ಲಿ ಸಪ್ತಪದಿ ತುಳಿದ ಪ್ರಿಯಾಂಕಾ ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಬಾಲಿವುಡ್ ನಿಂದ ಹಾಲಿವುಡ್ ಗೆ ಶಿಫ್ಟ್ ಆಗಿರುವ ಪ್ರಿಯಾಂಕಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಪ್ರಿಯಾಂಕಾ ಸದ್ಯ ಕೊರೊನಾದಿಂದ ತತ್ತರಿಸಿರುವ ಭಾರತದ ನರೆವಿಗೆ ನಿಂತಿದ್ದು, ತನ್ನ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕೊರೊನಾದಿಂದ ಉಂಟಾಗಿರುವ ಭೀಕರ ಪರಿಸ್ಥಿತಿಯ ಸಮಯದಲ್ಲಿ ಪ್ರಿಯಾಂಕಾ ತನ್ನ ದೇಶದ ಜನರನ್ನು ಕಾಪಾಲು ಪರದಾಡುತ್ತಿದ್ದಾರೆ.

  ವಯಸ್ಸಾದಂತೆ ನನ್ನ ದೇಹವೂ ಬದಲಾಗಿದೆ; ಪ್ರಿಯಾಂಕಾ ಚೋಪ್ರಾವಯಸ್ಸಾದಂತೆ ನನ್ನ ದೇಹವೂ ಬದಲಾಗಿದೆ; ಪ್ರಿಯಾಂಕಾ ಚೋಪ್ರಾ

  ಈ ನಡುವೆ ಪ್ರಿಯಾಂಕಾ ದೇಹದ ಬದಲಾವಣೆ ಬಗ್ಗೆ ಇತ್ತೀಚಿಗೆ ನೀಡಿದ್ದ ಸಂದರ್ಶನದ ಸುದ್ದಿಯಾಗಿದ್ದರು. ಇದೀಗ ಪ್ರಿಯಾಂಕಾ ಬಗ್ಗೆ ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಸದ್ದು ಮಾಡುತ್ತಿದೆ. ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಪ್ರೀತಿಸಿ ಮದುವೆಯಾಗುವ ಮೊದಲು ಅವರ ಕುಟುಂಬ ದೇಸಿ ಹುಡುಗನನ್ನೇ ಮದುವೆಯಾಗಬೇಕೆಂದು ಬಯಸಿತ್ತಂತೆ, ಅಲ್ಲದೆ ಒಬ್ಬ ಹುಡುಗನನ್ನು ಹೊಡುಕಿದ್ದರಂತೆ. ಮುಂದೆ ಓದಿ...

  ಟಿವಿ ನಟನ ಜೊತೆ ಪ್ರಿಯಾಂಕಾ ಮದುವೆಗೆ ಪ್ಲಾನ್

  ಟಿವಿ ನಟನ ಜೊತೆ ಪ್ರಿಯಾಂಕಾ ಮದುವೆಗೆ ಪ್ಲಾನ್

  ಪ್ರಿಯಾಂಕಾ ಚೋಪ್ರಾ ಭಾರತೀಯ ಹುಡುಗನ್ನೇ ಮದುವೆ ಆಗಬೇಕು ಎನ್ನುವುದು ಅವರ ಕುಟುಂಬದ ಬಯಕೆಯಾಗಿತ್ತು. ಹಾಗಾಗಿ ಪ್ರಿಯಾಂಕಾಗೆ ಮ್ಯಾಚ್ ಆಗುವ ಹಾಗೆ ಹುಡುಗನನ್ನು ಹುಡುಕಿದ್ದರು. ಈ ಬಗ್ಗೆ ಪ್ರಿಯಾಂಕಾ 2017ರ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಕಿರುತೆರೆ ಲೋಕದ ಪ್ರಸಿದ್ಧ ನಟ ಮತ್ತು ಮಾಡೆಲ್ ಮೋಹಿತ್ ರೈನಾ ಜೊತೆ ಪ್ರಿಯಾಂಕಾ ಕುಟುಂಬ ಮಾತುಕತೆ ನಡೆಸಿದ್ದರಂತೆ.

  ಮೋಹಿತ್ ರೈನಾರನ್ನು ಇಷ್ಟಪಟ್ಟಿದ್ದ ಪ್ರಿಯಾಂಕಾ ಕುಟುಂಬ

  ಮೋಹಿತ್ ರೈನಾರನ್ನು ಇಷ್ಟಪಟ್ಟಿದ್ದ ಪ್ರಿಯಾಂಕಾ ಕುಟುಂಬ

  ಪ್ರಿಯಾಂಕಾ ಚಿಕ್ಕಮ್ಮ, ಮೋಹಿತ್ ರೈನಾ ನೋಡಿ ತುಂಬಾ ಇಷ್ಟಪಟ್ಟು ಪ್ರಿಯಾಂಕಾ ಜೊತೆ ಮದುವೆ ಮಾಡಿಸುವ ನಿರ್ಧಾರ ಮಾಡಿದ್ದರು. ಸಿನಿಮಾ, ಧಾರಾವಾಹಿ ಮತ್ತು ವೆಬ್ ಸೀರಿಸ್ ಗಳಲ್ಲಿ ನಟಿಸಿರುವ ಮೋಹಿತ್ ರೈನಾಗೆ ಪ್ರಿಯಾಂಕಾ ಕುಟುಂಬ ಫಿದಾ ಆಗಿತ್ತು. ಆತ ಉತ್ತಮ ನಟ, ಪ್ರಾಮಾಣಿಕ ವ್ಯಕ್ತಿ ಎಂದು ಪ್ರಿಯಾಂಕಾ ಮದುವೆಯನ್ನು ಮೋಹಿತ್ ಜೊತೆ ಮಾಡಲು ಕುಟುಂಬ ನಿರ್ಧರಿಸಿತ್ತು.

  ಮೋಹಿತ್ ಪ್ರತಿಕ್ರಿಯೆ

  ಮೋಹಿತ್ ಪ್ರತಿಕ್ರಿಯೆ

  ಈ ಬಗ್ಗೆ ಪ್ರಿಯಾಂಕಾ ಚಿಕ್ಕಮ್ಮ, ಮೋಹಿತ್ ರೈನಾ ಜೊತೆಯೂ ಮಾತುಕತೆ ನಡೆಸಿದ್ದರು. ಆದರೆ ಮೋಹಿತ್, ತಾನು ಟಿವಿ ನಟ ಪ್ರಿಯಾಂಕಾ ಸೂಪರ್ ಸ್ಟಾರ್ ಹಾಗಾಗಿ ಇದು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಅಷ್ಟರಲ್ಲೇ ಆಗಲೇ ಪ್ರಿಯಾಂಕಾ ಕೂಡ ನಿಕ್ ಜೋನಸ್ ಜೊತೆ ಪ್ರೀತಿಯಲ್ಲಿದ್ದರು. ಹಾಗಾಗಿ ಇತ್ತ ಪ್ರಿಯಾಂಕಾ ಕೂಡ ಈ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ.

  'ಬೆಂಗಳೂರಿನಲ್ಲಿ ಬೆಡ್ ಸಿಕ್ಕಿಲ್ಲ': ಇಬ್ಬರು ಸಂಬಂಧಿಕರನ್ನು ಕಳೆದುಕೊಂಡ ಮೀರಾ ಚೋಪ್ರಾ'ಬೆಂಗಳೂರಿನಲ್ಲಿ ಬೆಡ್ ಸಿಕ್ಕಿಲ್ಲ': ಇಬ್ಬರು ಸಂಬಂಧಿಕರನ್ನು ಕಳೆದುಕೊಂಡ ಮೀರಾ ಚೋಪ್ರಾ

  ರಾಧೆ ಸಿನಿಮಾವನ್ನು ಪ್ರಭುದೇವ ಹಾಳು ಮಾಡಿದ್ದಾರೆ ಅಂದ್ರು ನಟಿ ಶ್ರೀರೆಡ್ಡಿ | Filmibeat Kannada
  ಅಮೆರಿಕದಲ್ಲಿ ನೆಲೆಸಿರುವ ಪ್ರಿಯಾಂಕಾ

  ಅಮೆರಿಕದಲ್ಲಿ ನೆಲೆಸಿರುವ ಪ್ರಿಯಾಂಕಾ

  ನಿಕ್ ಜೊತೆಗಿನ ಪ್ರೀತಿ ವಿಚಾರವನ್ನು ಮನೆಯವರಿಗೆ ತಿಳಿಸಿ 2018ರಲ್ಲಿ ಪ್ರಿಯಾಂಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸದ್ಯ ಬಾಲಿವುಡ್ ನಿಂದ ಅಂತರ ಕಾಯ್ದುಕೊಂಡಿರುವ ಪ್ರಿಯಾಂಕಾ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ವೈಟ್ ಟೈಗರ್ ಮೂಲಕ ಭಾರತೀಯ ಅಭಿಮಾನಿಗಳ ಮುಂದೆ ಬಂದಿದ್ದ ಪ್ರಿಯಾಂಕಾ ಮುಂದಿನ ವರ್ಷ ಬಾಲಿವುಡ್ ಸಿನಿಮಾ ಮಾಡುವುದಾಗಿಯೂ ಪ್ರಿಯಾಂಕಾ ಹೇಳಿದ್ದಾರೆ.

  English summary
  Actress Priyanka Chopra's family wanted to her marry with TV Actor Mohit Raina.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X