»   » ಪ್ರಿಯಾಂಕಾ ಚೋಪ್ರಾ ಈ ಸಮಸ್ಯೆಯಿಂದ ಬಳಲುತ್ತಿದ್ದಾಳೆ

ಪ್ರಿಯಾಂಕಾ ಚೋಪ್ರಾ ಈ ಸಮಸ್ಯೆಯಿಂದ ಬಳಲುತ್ತಿದ್ದಾಳೆ

Posted By:
Subscribe to Filmibeat Kannada

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಫಿಟ್ ಅಂಡ್ ಫೈನ್. ಆದ್ರೆ, ಇತ್ತೀಚೆಗೆ ಈ ನಟಿಗೆ ಒಂದು ಸಮಸ್ಯೆಯಾಗಿದೆಯಂತೆ. ಈ ಸಮಸ್ಯೆಯಿಂದ ತನ್ನ ಕೆಲಸಗಳಲ್ಲಿ ಖುಷಿಯಿಂದ ಕಾರ್ಯ ಪ್ರವೃತ್ತಿಯಾಗಲು ಕಷ್ಟವಾಗುತ್ತಿದೆಯಂತೆ.

ಹೌದು, 35 ವರ್ಷದ ಪ್ರಿಯಾಂಕಾ ಚೋಪ್ರಾಗೆ ಅದ್ಯಾಕೋ ಇತ್ತೀಚೆಗೆ ನಿದ್ದೆ ಬರ್ತಿಲ್ವಂತೆ. ಇದಕ್ಕೆ ಕಾರಣ ಹುಡುಕಿಕೊಂಡಿರುವ ಪ್ರಿಯಾಂಕಾ ತಮ್ಮ ಈ ಸಮಸ್ಯೆಗೆ ಕಾರಣವೇನು ಎಂಬುದನ್ನ ತಮ್ಮ ಟ್ವಿಟ್ಟರ್ ನಲ್ಲಿ ಬಿಚ್ಚಿಟ್ಟಿದ್ದಾರೆ.

Priyanka Chopra's late night troubles

''ಅದ್ಯಾಕೋ ಇತ್ತಿಚೆಗೆ ನಿದ್ದೆ ಸರಿಯಾಗಿ ಬರುತ್ತಿಲ್ಲ. ಒಂದೇ ಸಮಯದಲ್ಲಿ ಅನೇಕ ವಿಷ್ಯಗಳು ತಲೆ ಕೊರೆಯುತ್ತಿವೆ. ಹೀಗ್ಯಾಕೆ ಆಗ್ತಿದೆ ಎನ್ನುವುದು ಸರಿಯಾಗಿ ತಿಳಿಯುತ್ತಿಲ್ಲ. ಒತ್ತಡದಿಂದ ಹೀಗಾಗುತ್ತಿರಬಹುದು ಅಥವಾ ತುಂಬಾ ವಿಮಾನ ಪ್ರಯಾಣ ಇದಕ್ಕೆ ಕಾರಣವಾಗಿರಬಹುದು'' ಎಂದು ಪ್ರಿಯಾಂಕಾ ಯೋಚಿಸಿದ್ದಾರೆ.

ಐಶು, ದೀಪಿಕಾ, ಪ್ರಿಯಾಂಕಾ ಜೊತೆಗಿನ ಸ್ಪರ್ಧೆ ಬಗ್ಗೆ ಆಮಿ ಜಾಕ್ಸನ್ ಹೇಳಿದ್ದೇನು?

ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ವಿಮಾನದಲ್ಲಿ ಹೆಚ್ಚು ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ, ಲಂಡನ್ ನಿಂದ ಮುಂಬೈಗೆ ಆಗಾಗ ಹೋಗಿ ಬರುತ್ತಿದ್ದಾರೆ. ಈ ಒತ್ತಡದಿಂದ ಹೀಗಾಗಿರಬಹುದು ಎನ್ನುವುದು ಪಿಗ್ಗಿಯ ಲೆಕ್ಕಾಚಾರ.

English summary
Priyanka Chopra reveals why she is having trouble sleeping at night. It seems like Bollywood actress Priyanka Chopra is not having a good night sleep.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada