For Quick Alerts
  ALLOW NOTIFICATIONS  
  For Daily Alerts

  ಮುಂಬೈನ ಆಸ್ತಿ ಮಾರಿದ ಪ್ರಿಯಾಂಕಾ ಚೋಪ್ರಾ: ಪಡೆದ ಲಾಭವೆಷ್ಟು?

  |

  ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಅನ್ನು ವಿವಾಹವಾದ ನಂತರ ನ್ಯೂಯಾರ್ಕ್‌ನಲ್ಲಿನೇ ನೆಲೆಸಿದ್ದಾರೆ. ಭಾರತಕ್ಕೆ ಅವರೀಗ ಅಪರೂಪದ ಅತಿಥಿ ಅಷ್ಟೆ.

  ತಮಿಳು ಸಿನಿಮಾದಿಂದ ನಟನೆ ಆರಂಭಿಸಿದ ಪ್ರಿಯಾಂಕಾ ಬಾಲಿವುಡ್‌ನ ಟಾಪ್ ನಟಿಯಾಗಿ ಗುರುತಿಸಿಕೊಂಡು ಈಗ ಹಾಲಿವುಡ್‌ನಲ್ಲೂ ಮೋಡಿ ಮಾಡುತ್ತಿದ್ದಾರೆ.

  ನಟಿ ಪ್ರಿಯಾಂಕಾ ಚೋಪ್ರಾ ಕೇವಲ ನಟನೆಗಾಗಿ ಮಾತ್ರ ಅಲ್ಲ ತಮ್ಮ ಬುದ್ಧಿವಂತೆಯ ಬಂಡವಾಳ ಹೂಡಿಕೆಗೂ ಖ್ಯಾತರು. ರಿಯಲ್ ಎಸ್ಟೇಟ್‌ನಲ್ಲಿ ಹಣ ತೊಡಗಿಸುವುದು ಪ್ರಿಯಾಂಕಾದ ಮೆಚ್ಚಿನ ಹೂಡಿಕೆ ಕ್ರಮ. ಮಹಾರಾಷ್ಟ್ರ, ಪಂಜಾಬ್, ದೆಹಲಿಗಳಲ್ಲಿ ಸಾಕಷ್ಟು ದುಬಾರಿ ಪ್ರಾಪರ್ಟಿಗಳು ಪ್ರಿಯಾಂಕಾ ಹೆಸರಲ್ಲಿವೆ. ನ್ಯೂಯಾರ್ಕ್‌ನಲ್ಲಿಯೂ ಆಸ್ತಿ ಹೊಂದಿದ್ದಾರೆ ಪ್ರಿಯಾಂಕಾ.

  ಭಾರತಕ್ಕೆ ಬರುವುದು ಬಹು ಅಪರೂಪವಾದ ಕಾರಣ ಮುಂಬೈನ ಎರಡು ಮನೆಗಳನ್ನು ಪ್ರಿಯಾಂಕಾ ಚೋಪ್ರಾ ಮಾರಿದ್ದಾರೆ. ಅದೂ ಭಾರಿ ದೊಡ್ಡ ಮೊತ್ತಕ್ಕೆ.

  ಐಶಾರಾಮಿ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿದ್ದಾರೆ

  ಐಶಾರಾಮಿ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿದ್ದಾರೆ

  ಅಂಧೇರಿ ವೆಸ್ಟ್‌ನ ರಾಜ್ ವರ್ಸೋವಾ ಅಪಾರ್ಟ್‌ಮೆಂಟ್ಸ್‌ನಲ್ಲಿ ಎರಡು ಐಶಾರಾಮಿ ಫ್ಲ್ಯಾಟ್‌ಗಳನ್ನು ನಟಿ ಪ್ರಿಯಾಂಕಾ ಚೋಪ್ರಾ ಹೊಂದಿದ್ದರು. ಕೆಲವಾರು ವರ್ಷಗಳ ಹಿಂದೆ ಖರೀದಿಸಿದ್ದ ಫ್ಲ್ಯಾಟ್‌ಗಳನ್ನು ಬರೋಬ್ಬರಿ ಏಳು ಕೋಟಿ ರುಪಾಯಿಗೆ ಮಾರಾಟ ಮಾಡಿದ್ದಾರೆ ಪ್ರಿಯಾಂಕಾ.

  ತಿಂಗಳ ಬಾಡಿಗೆಗೆ ಸಹ ನೀಡಿದ್ದಾರೆ

  ತಿಂಗಳ ಬಾಡಿಗೆಗೆ ಸಹ ನೀಡಿದ್ದಾರೆ

  ಅದೇ ಅಪಾರ್ಟ್‌ನಲ್ಲಿನ ಆಫೀಸ್ ಏರಿಯಾವನ್ನು 2.11 ಲಕ್ಷ ತಿಂಗಳ ಬಾಡಿಗೆಗೆ ಸಹ ನೀಡಿದ್ದಾರೆ. ಈ ಬಗ್ಗೆ ಮನಿಕಂಟ್ರೋಲ್ ವರದಿ ಮಾಡಿದ್ದು, ಸ್ಟ್ಯಾಂಪ್ ಡ್ಯೂಟಿ ಹಾಗೂ ಇತರೆ ದಾಖಲೆಗಳ ಸಮೇತ ಅದು ವರದಿಯನ್ನು ಮುಂದಿಟ್ಟಿದೆ.

  ಮಾಧುರಿ ದೀಕ್ಷಿತ್ ಸಹ ಮಾರಾಟ ಮಾಡಿದರು

  ಮಾಧುರಿ ದೀಕ್ಷಿತ್ ಸಹ ಮಾರಾಟ ಮಾಡಿದರು

  ಇಲ್ಲಿ ಮಾರಾಟದಿಂದ ಬಂದ ಹಣವನ್ನು ನ್ಯೂಯಾರ್ಕ್‌ನಲ್ಲಿ ರಿಯಲ್‌ ಎಸ್ಟೇಟ್‌ ಮೇಲೆ ತೊಡಗಿಸುವ ಲೆಕ್ಕಾಚಾರದಲ್ಲಿ ಪ್ರಿಯಾಂಕಾ ಇದ್ದಾರೆ ಎನ್ನಲಾಗಿದೆ. ಅಂಧೇರಿ ವೆಸ್ಟ್‌ನ ಅದೇ ಅಪಾರ್ಟ್‌ಮೆಂಟ್‌ನಲ್ಲಿ ನಟಿ ಮಾಧುರಿ ದೀಕ್ಷಿತ್‌ರದ್ದು ಸಹ ಎರಡು ಅಪಾರ್ಟ್‌ಮೆಂಟ್ ಇದ್ದು ಅವನ್ನು 2017 ರಲ್ಲಿಯೇ ಅವರು ಎಂಟು ಕೋಟಿ ಹಣಕ್ಕೆ ಮಾರಿಬಿಟ್ಟಿದ್ದಾರೆ.

  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ
  ಶ್ರೀಮಂತ ನಟಿಯರಲ್ಲಿ ಒಬ್ಬರು ಪ್ರಿಯಾಂಕಾ

  ಶ್ರೀಮಂತ ನಟಿಯರಲ್ಲಿ ಒಬ್ಬರು ಪ್ರಿಯಾಂಕಾ

  ಪ್ರಿಯಾಂಕಾ ಚೋಪ್ರಾ ಭಾರತದ ಅತ್ಯಂತ ಶ್ರೀಮಂತ ನಟಿಯರಲ್ಲಿ ಒಬ್ಬರು. ಹಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾ ಅವಕಾಶಗಳನ್ನು ಹೊಂದಿರುವ ಪ್ರಿಯಾಂಕಾ, ಜಾಹೀರಾತು, ಪುಸ್ತಕ ಪ್ರಕಟಣೆ, ರಿಯಲ್ ಎಸ್ಟೇಟ್ ಇನ್ನಿತರೆಗಳಿಂದಲೂ ದೊಡ್ಡ ಮೊತ್ತದ ಹಣ ಗಳಿಸುತ್ತಾರೆ. ಆಕೆಯ ಒಟ್ಟು ಆಸ್ತಿ ಮೌಲ್ಯ 225 ಕೋಟಿಗೂ ಹೆಚ್ಚು!

  English summary
  Actress Priyanka Chopra sold her two flats located in Andheri West Mumbai for 7 crore rs. She rented out a office in Andheri West for 2.11 lakh rs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X