2 ತಿಂಗಳ ಬಳಿಕ ಮನೆಯಿಂದ ಹೊರಬಂದ ನಟಿ ಪ್ರಿಯಾಂಕಾ ಹೇಳಿದ್ದೇನು?
ಕಿಲ್ಲರ್ ಕೊರೊನಾ ವೈರಸ್ ಹಾವಳಿಯಿಂದ ಇಡೀ ವಿಶ್ವವೆ ತತ್ತರಿಸಿ ಹೋಗಿದೆ. ಜನರು ಮನೆಯಿಂದ ಹೊರ ಬರದೆ ತಿಂಗಳಮೇಲಾಗಿದೆ. ಸೆಲೆಬ್ರಿಟಿಗಳು ಮನೆಯಲ್ಲಿಯೇ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡುತ್ತ ಮಾತುಕಥೆ ನಡೆಸುತ್ತಿರುತ್ತಾರೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಪತಿ ಜೊತೆ ಲಾಸ್ ಎಂಜಲೀಸ್ ನಲ್ಲಿ ವಾಸಿಸುತ್ತಿದ್ದಾರೆ. ಸುಮಾರು ಎರಡು ತಿಂಗಳಿಂದ ಮನೆಯಲ್ಲಿಯೆ ಇದ್ದ ಪ್ರಿಯಾಂಕಾ ಮೊದಲ ಬಾರಿಗೆ ಮನೆಯಿಂದ ಹೊರಬಂದಿದ್ದಾರೆ.
ಪತಿ ನಿಕ್ ಜೋನಸ್ ಜೊತೆ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿದ್ದ ಪ್ರಿಯಾಂಕಾ ಇತ್ತೀಚಿಗೆ ಮನೆಯಿಂದ ಹೊರ ಬಂದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 2 ತಿಂಗಳ ನಂತರ ಮನೆಯಿಂದ ಹೊರ ಬಂದಿರುವ ಪ್ರಿಯಾಂಕಾ ಸಖತ್ ಥ್ರಿಲ್ ಆಗಿದ್ದಾರೆ.

ಹಳದಿ ಟೀ ಶರ್ಟ್ ಧರಿಸಿರುವ ಪ್ರಿಯಾಂಕಾ, ಮಾಸ್ಕ್ ಹಾಕಿ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. "ಕಣ್ಣುಗಳು ಎಂದಿಗೂ ಶಾಂತವಾಗುವುದಿಲ್ಲ. 2 ತಿಂಗಳ ನಂತರ ಮೊದಲ ಬಾರಿಗೆ ಮನೆಯಿಂದ ಹೊರ ಬಂದಿದ್ದೇನೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











