twitter
    For Quick Alerts
    ALLOW NOTIFICATIONS  
    For Daily Alerts

    ಹಿಜಬ್ ವಿರೋಧಿ ಪ್ರತಿಭಟನೆಗೆ ಪ್ರಿಯಾಂಕಾ ಚೋಪ್ರಾ ಬೆಂಬಲ

    |

    ರಾಜಕೀಯ ಪರಿಸ್ಥಿತಿಗಳೇನೇ ಇದ್ದರೂ ತಮ್ಮ ಅಭಿಪ್ರಾಯಗಳನ್ನು ಗಟ್ಟಿಯಾಗಿ ಹೇಳುತ್ತಾ ಬಂದಿರುವ ನಟಿಯರಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಒಬ್ಬರು.

    ಈ ಹಿಂದೆ ದೇಶದಲ್ಲಿ ನಡೆದ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದ ನಟಿ ಪ್ರಿಯಾಂಕಾ ಇದೀಗ ಇರಾನಿನಲ್ಲಿ ನಡೆಯುತ್ತಿರುವ ಹಿಜಬ್ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

    ವಿಶ್ವಸಂಸ್ಥೆಯ ಗ್ಲೋಬಲ್ ಗುಡ್‌ವಿಲ್ ರಾಯಭಾರಿಯೂ ಆಗಿರುವ ಪ್ರಿಯಾಂಕಾ ಚೋಪ್ರಾ, ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ''ಇರಾನ್‌ನಲ್ಲಿ ಮತ್ತು ಪ್ರಪಂಚದಾದ್ಯಂತ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ, ಹಿಜಬ್‌ಗಳನ್ನು ಸುಡುವ ಮೂಲಕ ಧ್ವನಿ ಎತ್ತುತ್ತಿದ್ದಾರೆ. ತಪ್ಪಾಗಿ ಹಿಜಬ್ ಅನ್ನು ಧರಿಸಿದ್ದರೆಂಬ ಕಾರಣಕ್ಕೆ ಇರಾನಿನ ನೈತಿಕ ಪೊಲೀಸರು ಕ್ರೂರವಾಗಿ ಕೊಂದ ಮಾಹ್ಸಾ ಅಮಿನಿಗಾಗಿ ಅನೇಕ ರೀತಿಯ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ.

    ಜೀವ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದೀರಿ: ಪ್ರಿಯಾಂಕಾ

    ಜೀವ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದೀರಿ: ಪ್ರಿಯಾಂಕಾ

    ಯಗ ಯುಗಗಳಿಂದಲೂ ಬಲವಂತವಾಗಿ ಧಮನಿಸಲಾಗಿದ್ದ ಧ್ವನಿಯು ಈಗ ಜ್ವಾಲಾಮುಖಿಯಂತೆ ಸಿಡಿಯುತ್ತಿವೆ. ನಿಮ್ಮ ಧೈರ್ಯ ಮತ್ತು ಹೋರಾಟ ಕಂಡು ನಾನು ವಿಸ್ಮಯಗೊಂಡಿದ್ದೇನೆ. ನಿಮ್ಮ ಜೀವವನ್ನು ಪಣಕ್ಕಿಟ್ಟು, ಪ್ರಭುತ್ವಗೆ ಸವಾಲು ಹಾಕುವುದು ಮತ್ತು ನಿಮ್ಮ ಹಕ್ಕುಗಳಿಗಾಗಿ ಹೋರಾಡುವುದು ಸುಲಭದ ಕಾರ್ಯವಲ್ಲ. ಆದರೆ, ನೀವು ಧೈರ್ಯಶಾಲಿ ಮಹಿಳೆಯರು, ನಿಮ್ಮ ಜೀವ ಪಣಕ್ಕಿಟ್ಟು ನೀವು ಹೋರಾಟ ಮಾಡುತ್ತಿದ್ದೀರಿ'' ಎಂದಿದ್ದಾರೆ.

    'ಹೋರಾಟದ ಉದ್ದೇಶ ತಿಳಿದುಕೊಳ್ಳಬೇಕು'

    'ಹೋರಾಟದ ಉದ್ದೇಶ ತಿಳಿದುಕೊಳ್ಳಬೇಕು'

    ಈ ಮಹಿಳೆಯರ ಹೋರಾಟ ಸಫಲವಾಗಬೇಕೆಂದರೆ ಮೊದಲು ನಾವು ಅವರ ಹೋರಾಟದ ಉದ್ದೇಶ ತಿಳಿದುಕೊಳ್ಳಬೇಕು. ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು, ನಂತರ ನಾವೂ ಅವರೊಟ್ಟಿಗೆ ಸೇರಿಕೊಳ್ಳಬೇಕು. ಯಾರು ಬೇರೆಯವರ ಮೇಲೆ ಪ್ರಭಾವ ಬೀರಬಲ್ಲರೊ ಅವರನ್ನೆಲ್ಲ ನಮ್ಮೊಟ್ಟಿಗೆ ಸೇರಿಸಿಕೊಳ್ಳಬೇಕು, ಇನ್ನಷ್ಟು ಜನರನ್ನು ನಮ್ಮೊಟ್ಟಿಗೆ ಸೇರಿಸಿಕೊಂಡು ಹೋರಾಟಕ್ಕೆ ಬೆಂಬಲಿಸಬೇಕು, ಸಂಖ್ಯೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ.

    ಅಭಿಯಾನಕ್ಕೆ ನೀವೂ ಧ್ವನಿ ಸೇರಿಸಿ

    ಅಭಿಯಾನಕ್ಕೆ ನೀವೂ ಧ್ವನಿ ಸೇರಿಸಿ

    ಈ ಕಠಿಣ ಸಾಮಾಜಿಕ ಅಭಿಯಾನಕ್ಕೆ ನೀವೂ ನಿಮ್ಮ ಧ್ವನಿ ಸೇರಿಸಿ. ಸದಾ ಮಾಹಿತಿಪೂರ್ಣವಾಗಿರಿ, ದನಿ ಎತ್ತುತ್ತಿರಿ, ಈ ದನಿಗಳನ್ನು ಮತ್ತೆಂದೂ ದಮನಿಸದಂತೆ ಮಾಡಿರಿ. ಜಿನ್, ಜಿಯಾನ್, ಆಜಾದಿ, ಮಹಿಳೆ, ಜೀವನ ಸ್ವಾತಂತ್ರ್ಯದ ಪರವಾಗಿದ್ದೀನಿ ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ. ನಟಿಯ ಪೋಸ್ಟ್‌ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಸಹ.

    ಹೋರಾಟಕ್ಕೆ ಕಾರಣವಾದ ಯುವತಿ ಮಾಹ್ಸಾ ಅಮಿನಿ

    ಹೋರಾಟಕ್ಕೆ ಕಾರಣವಾದ ಯುವತಿ ಮಾಹ್ಸಾ ಅಮಿನಿ

    ಇರಾನಿನಲ್ಲಿ ಹಿಜಬ್ ವಿರುದ್ಧ ಹಾಗೂ ಮಹಿಳಾ ಹಕ್ಕುಗಳ ವಿರುದ್ಧ ದೊಡ್ಡ ಹೋರಾಟ ನಡೆಯುತ್ತಿದೆ. ಮಹಿಳೆಯರು ಸಾರ್ವಜನಿಕವಾಗಿ ಹಿಜಬ್‌ಗಳನ್ನು ಸುಡುತ್ತಿದ್ದಾರೆ. ತಮ್ಮ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದಾರೆ. ಈ ಹೋರಾಟ ವಿಶ್ವದ ಗಮನ ಸೆಳೆದಿದೆ. ಹೋರಾಟಕ್ಕೆ ಮೂಲ ಕಾರಣ ಮಾಹ್ಸಾ ಅಮಿನಿ ಎಂಬ 22 ವರ್ಷದ ಯುವತಿ. ಮಾಹ್ಸಾ ಅಮಿನಿ ಎಂಬ ಯುವತಿ, ಸರಿಯಾಗಿ ಹಿಜಬ್ ಧರಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಇರಾನಿನ ನೈತಿಕ ಪೊಲೀಸರು ಬಂಧಿಸಿ ಆಕೆಗೆ ಚಿತ್ರಹಿಂಸೆ ನೀಡಿದ್ದರು. ಆಕೆ ಸೆಪ್ಟೆಂಬರ್ 16 ರಂದು ನಿಧನ ಹೊಂದಿದರು. ಆಕೆಯ ನಿಧನ ಇರಾನಿನಾದ್ಯಂತ ಮಹಿಳೆಯರಲ್ಲಿ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದ್ದು ಮಹಿಳೆಯರು ಪ್ರತಿಭಟನೆಗಿಳಿದಿದ್ದಾರೆ.

    English summary
    Actress Priyanka Chopra supports Irani women anti Hijab protest. She request people to rise their voice.
    Friday, October 7, 2022, 19:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X