ಗೆಳತಿಯರ ಜೊತೆ ಸಿನಿಮಾಕ್ಕೆ ಸೈ ಎಂದ ಪ್ರಿಯಾಂಕಾ! ಚಿತ್ರೀಕರಣ ಯಾವಾಗ?

ನಿಕ್ ಜೋನಸ್‌ ಜೊತೆ ವಿವಾಹವಾಗಿ ನ್ಯೂಯಾರ್ಕ್‌ನಲ್ಲಿ ಸೆಟಲ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ, ಬಾಲಿವುಡ್‌ನಿಂದಲೂ ದೂರ ಉಳಿದು ಹಾಲಿವುಡ್‌ನಲ್ಲಿ ತೊಡಗಿಕೊಂಡಿದ್ದಾರೆ.

ಒಂದರ ಹಿಂದೊಂದು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ, ಬಾಲಿವುಡ್‌ ಅನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಅವರ ಅಭಿಮಾನಿಗಳು ಬೇಸರಪಟ್ಟುಕೊಂಡಿದ್ದರು. ಇದರ ಬೆನ್ನಲ್ಲೆ ಇತ್ತೀಚೆಗೆ ಮುಂಬೈಗೆ ಬಂದಿದ್ದ ನಟಿ ಪ್ರಿಯಾಂಕಾ. ತಾವು ಭಾರತ ಹಾಗೂ ಬಾಲಿವುಡ್‌ ಅನ್ನು ಮರೆತಿಲ್ಲ ಎಂದಿದ್ದಾರೆ.

ಮುಂಬೈನಲ್ಲಿ ತಮ್ಮ ಮೆಚ್ಚಿನ ಪ್ರದೇಶಗಳನ್ನು ಸುತ್ತು ಹಾಕಿರುವ ನಟಿ ಪ್ರಿಯಾಂಕಾ ಚೋಪ್ರಾ, ತಮ್ಮ ಹಳೆಯ ಮನೆಗೂ ಭೇಟಿ ನೀಡಿದ್ದಾರೆ. ಇದರ ಜೊತೆಗೆ ತಮ್ಮ ಬಹುನಿರೀಕ್ಷಿತ ಬಾಲಿವುಡ್ ಸಿನಿಮಾದ ಬಗ್ಗೆಯೂ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದಾರೆ.

Priyanka Chopra Talks About Movie With Alia Bhatt And Katrina Kaif

ಬಾಲಿವುಡ್‌ನ ಮೂವರು ಖ್ಯಾತ ನಟಿಯರಾದ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಹಾಗೂ ಕತ್ರಿನಾ ಕೈಫ್ ಅವರುಗಳು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ಹೊಸ ಸುದ್ದಿಯೇನಲ್ಲ. 'ಜೀ ಲೇ ಝರಾ' ಎಂಬ ಹೆಸರಿನ ಈ ಸಿನಿಮಾದ ಬಗ್ಗೆ 2019 ರಿಂದಲೂ ಸುದ್ದಿಗಳು ಕೇಳಿ ಬರುತ್ತಿವೆ. ಆದರೆ ಸಿನಿಮಾದ ಚಿತ್ರೀರಕಣ ಪ್ರಾರಂಭವಾಗಿರಲಿಲ್ಲ.

ಇದೀಗ ಪ್ರಿಯಾಂಕಾ ಚೋಪ್ರಾ 'ಜೀ ಲೇ ಝರಾ' ಸಿನಿಮಾದ ಬಗ್ಗೆ ಅಧಿಕೃತವಾಗಿ ಮಾತನಾಡಿದ್ದು, ಆಲಿಯಾ ಭಟ್, ಕತ್ರಿನಾ ಕೈಫ್ ಹಾಗೂ ತಮ್ಮ ಸಿನಿಮಾ ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭ ಆಗಲಿದೆ ಎಂದಿದ್ದಾರೆ. 'ಗೆಳೆಯರೊಟ್ಟಿಗೆ ಸೇರಿ ಕೆಲಸ ಮಾಡಿದಾಗ ಅದು ನಿಜವಾಗಿಯೂ ಕೆಲಸ ಎನಿಸುವುದಿಲ್ಲ. ಅದು ಫನ್ ಆಗಿರುತ್ತದೆ ಅಷ್ಟೆ. ನಮ್ಮ ಮೂವರ ಸಿನಿಮಾ ಮುಂದಿನ ವರ್ಷದಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ'' ಎಂದಿದ್ದಾರೆ.

ಕೋವಿಡ್, ಆ ಬಳಿಕ ಆಲಿಯಾರ ಮಗು ಇನ್ನಿತರೆ ಕಾರಣಗಳಿಂದ ಸಿನಿಮಾದ ಚಿತ್ರೀಕರಣ ತಡವಾಗುತ್ತಲೇ ಇದೆ. ಇದೀಗ ಕತ್ರಿನಾ ಕೈಫ್ ಸಹ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಆರಂಭವಾಗುವ ಸಂಭವ ಇದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ನಿರ್ದೇಶಿಸಲಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ಹಾಲಿವುಡ್‌ ಸಿನಿಮಾ 'ಲವ್ ಅಗೇನ್' ಬಿಡುಗಡೆ ಆಗಬೇಕಿದೆ. ಜನಪ್ರಿಯ ರೂಸ್ಸೊ ಬ್ರದರ್ಸ್ ನಿರ್ದೇಶನದ 'ಸಿಟಾಡೆಲ್' ವೆಬ್ ಸರಣಿ ಚಿತ್ರೀಕರಣ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಮೊದಲ ಸೀಸನ್ ಬಿಡುಗಡೆ ಆಗಲಿದೆ.

More from Filmibeat

English summary
Priyanka Chopra talks about movie with Alia Bhatt and Katrina Kaif. She said movie shooting will start from 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X