ಪ್ರಿಯಾಂಕಾ ಚೋಪ್ರಾ ಮತ್ತೆ ಹಿಂದಿ ಸಿನಿಮಾ ಮಾಡಲ್ವಾ.?
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಜನಪ್ರಿಯ ಟಿವಿ ಶೋ 'ಕ್ವಾಂಟಿಕೋ' 3ನೇ ಆವೃತ್ತಿಯ ಚಿತ್ರೀಕರಣದಲ್ಲಿರುವ ಪಿಗ್ಗಿ, ಜೊತೆ ಜೊತೆಗೆ ಎರಡು ಇಂಗ್ಲೀಷ್ ಸಿನಿಮಾಗಳಲ್ಲಿ ಕೂಡ ಪ್ರಿಯಾಂಕಾ ತೊಡಗಿಕೊಂಡಿದ್ದಾರೆ.
ಈ ಮಧ್ಯೆ ಹಿಂದಿ ಸಿನಿಮಾರಂಗದಿಂದ ಪ್ರಿಯಾಂಕಾ ಮಾಯವಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಯಾಕಂದ್ರೆ, ಬಾಲಿವುಡ್ ನಲ್ಲಿ ಪಿಗ್ಗಿ ಸಿನಿಮಾ ಮಾಡಿ ಬರೋಬ್ಬರಿ 2 ವರ್ಷ ಆಯ್ತು. ಮತ್ತೆ ಯಾವುದು ಹಿಂದಿ ಚಿತ್ರಗಳನ್ನ ಕೂಡ ಒಪ್ಪಿಕೊಂಡಿಲ್ಲ. ಹೀಗಾಗಿ, ಪ್ರಿಯಾಂಕಾ ಬಾಲಿವುಡ್ ಸಿನಿಮಾ ಮತ್ತೆ ಮಾಡಲ್ವಾ ಎಂಬ ಪ್ರಶ್ನೆ ಬಿಟೌನ್ ನಲ್ಲಿ ಗಿರಿಗಿಟ್ಲೆ ಹೊಡಿತಿದೆ.
ಹೀಗಿರುವಾಗ, ಕ್ವಾಂಟಿಕೋ ಸುಂದರಿಯಿಂದ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. 14 ವರ್ಷಗಳ ಹಿಂದೆ ತೆರೆಕಂಡಿದ್ದ ಚಿತ್ರದ ಸೀಕ್ವೆಲ್ ಮೂಲಕ ಕಮ್ ಬ್ಯಾಕ್ ಮಾಡುವ ತಯಾರಿ ನಡೆಸುತ್ತಿದ್ದಾರೆ. ಹಾಗಿದ್ರೆ, ಯಾವ ಸಿನಿಮಾ? ಮುಂದೆ ಓದಿ....

2 ವರ್ಷದ ಬಳಿಕ ಮತ್ತೆ ಬಾಲಿವುಡ್ ಗೆ.?
2016ರಲ್ಲಿ ಬಿಡುಗಡೆಯಾಗಿದ್ದ 'ಗಂಗಾಜಲ್' ಚಿತ್ರದ ನಂತರ ಪ್ರಿಯಾಂಕಾ ಚೋಪ್ರಾ ಮತ್ತೆ ಯಾವುದೇ ಹಿಂದಿ ಸಿನಿಮಾ ಮಾಡಿರಲಿಲ್ಲ. ಇದೀಗ, 2 ವರ್ಷದ ಮೂಲಕ ಮತ್ತೆ ಬಿಟೌನ್ ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ದವಾಗುತ್ತಿದ್ದಾರೆ.

'ಐತ್ರಾಜ್' ಚಿತ್ರದ ಸೀಕ್ವೆಲ್ ನಲ್ಲಿ ನಟನೆ.!
2004 ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ 'ಐತ್ರಾಜ್' ಚಿತ್ರದ ಮುಂದುವರೆದ ಭಾಗದಲ್ಲಿ ಪ್ರಿಯಾಂಕಾ ಕಮ್ ಬ್ಯಾಕ್ ಮಾಡುವ ಯೋಚನೆ ಮಾಡಿದ್ದಾರೆ. ಅಕ್ಷಯ್ ಕುಮಾರ್, ಕರೀನಾ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದ ಈ ಚಿತ್ರವನ್ನ ಅಬ್ಬಾಸ್ ಮಸ್ತಾನ್ ನಿರ್ದೇಶನ ಮಾಡಿದ್ದಾರೆ.

ಖಳನಟಿಯಾಗಿ ಮತ್ತೆ ಬರ್ತಿದ್ದಾರೆ
‘ಸಾತ್ ಕೂನ್ ಮಾಫ್', ‘ಐತ್ ರಾಜ್' ಚಿತ್ರಗಳಲ್ಲಿ ಪ್ರಿಯಾಂಕಾ ಖಳನಟಿಯಾಗಿರುವುದನ್ನು ನೋಡಿರಬಹುದು. 'ಬೇವಾಚ್' ಚಿತ್ರದಲ್ಲೂ ನೆಗಿಟೀವ್ ಪಾತ್ರ ನಿರ್ವಹಿಸಿದ್ದರು. ಇದೀಗ, ಐತ್ ರಾಜ್ ಚಿತ್ರದ ಮುಂದುವರೆದ ಭಾಗದಲ್ಲೂ ಅದೇ ರೀತಿಯ ಪಾತ್ರವನ್ನ ಮತ್ತೆ ಮಾಡ್ತಿದ್ದಾರಂತೆ ಪಿಗ್ಗಿ.

ಈ ವರ್ಷಾಂತ್ಯಕ್ಕೆ ಸೆಟ್ಟೇರಬಹುದು
ಸುಭಾಶ್ ಗಾಯ್ ಅವರು ಈ ಚಿತ್ರವನ್ನ ನಿರ್ಮಾಣ ಮಾಡಲು ಮುಂದಾಗಿದ್ದು, ಈಗಾಗಲೇ ಸ್ಕ್ರಿಪ್ಟ್ ಸಿದ್ದವಾಗಿದೆ. ಪ್ರಿಯಾಂಕಾ ಚೋಪ್ರಾ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿದ್ದು, ಎಲ್ಲ ಅಂದುಕೊಂಡಂತೆ ಆದ್ರೆ, ಈ ವರ್ಷಾಂತ್ಯಕ್ಕೆ ಸೆಟ್ಟೇರಬಹುದು ಎನ್ನಲಾಗಿದೆ.

2 ವರ್ಷ ಪ್ರಿಯಾಂಕಾ ಮಾಡಿದ್ದೇನು?
2016 ರಿಂದ 2018ರ ಇಲ್ಲಿಯವರೆಗೂ ಪಿಗ್ಗಿ ಸುಮ್ಮನೆ ಕೂತಿರಲಿಲ್ಲ. ಒದು ಬೋಜ್ ಫುರಿ, ಎರಡು ಮರಾಠಿ, ಒಂದು ಪಂಜಾಬಿ, ಒಂದು ಸಿಕ್ಕಿಂ, ಹಾಗೂ ಒಂದು ಇಂಗ್ಲೀಷ್ ಸಿನಿಮಾದಲ್ಲಿ ಪ್ರಿಯಾಂಕಾ ಅಭಿನಯಿಸಿದ್ದರು. ಆದ್ರೆ, ಹಿಂದಿ ಸಿನಿಮಾ ಮಾಡಿರಲಿಲ್ಲ.

ಈಸ್ ನಾಟ್ ರೊಮ್ಯಾಂಟಿಕ್
ಸದ್ಯ, ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿನಿಮಾ 'ಈಸ್ ನಾಟ್ ರೊಮ್ಯಾಂಟಿಕ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರೆಬಲ್ ವಿಲ್ಸನ್, ಆಡಮ್ ಡಿವೈನ್ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಪಿಗ್ಗಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











