For Quick Alerts
  ALLOW NOTIFICATIONS  
  For Daily Alerts

  ಏಷಿಯಾದ ಅತ್ಯಂತ ಸೆಕ್ಸಿಯೆಸ್ಟ್ ಮಹಿಳೆ ಇವರಂತೆ..!

  By Suneetha
  |

  ಜಾಗತಿಕ ಸ್ಪರ್ಧೆಯನ್ನೇ ಬೀಟ್ ಮಾಡಿರುವ ಬಿಟೌನ್ ನ ಬೆಡಗಿ ನಟಿ ಪ್ರಿಯಾಂಕ ಚೋಪ್ರಾ ಅವರು 'ಏಷಿಯಾದ ಸೆಕ್ಸಿಯೆಸ್ಟ್ ಮಹಿಳೆ' ಎಂಬ ಬಿರುದು ಪಡೆದುಕೊಂಡಿದ್ದಾರೆ. ಯುಕೆ ಕಂಡಕ್ಟ್ ಮಾಡಿದ್ದ ಪೋಲ್ ಒಂದರ ಫಲಿತಾಂಶದಲ್ಲಿ ಬಾಲಿವುಡ್ ನಟಿ ಪಿಗ್ಗಿ ಅವರು ಅಗ್ರಸ್ಥಾನದಲ್ಲಿದ್ದಾರೆ.

  '50 ಸೆಕ್ಸಿಯೆಸ್ಟ್ ಮಹಿಳೆ' ಎಂಬ ವಿಚಾರದಲ್ಲಿ 'ಈಸ್ಟರ್ನ್ ಐ' ಎಂಬ ಲಂಡನ್ ನ ವಾರಪತ್ರಿಕೆಯೊಂದು ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಪೋಲ್ ಅನ್ನು ಶುರು ಮಾಡಿತ್ತು.[ಸೆಟ್ ನಲ್ಲೇ ಕುಸಿದು ಬಿದ್ದ ಸೋನಮ್ ಕಪೂರ್]

  ಇದರಲ್ಲಿ ಸುಮಾರು 33 ವರ್ಷದ ನಟಿ ಕಮ್ ಹಾಡುಗಾರ್ತಿ ಪ್ರಿಯಾಂಕ ಚೋಪ್ರಾ ಅವರು ಮಿಲಿಯನ್ ವೋಟ್ ಗಿಟ್ಟಿಸಿಕೊಳ್ಳುವ ಮೂಲಕ 'ಏಷಿಯಾದ ಸೆಕ್ಸಿಯೆಸ್ಟ್ ಮಹಿಳೆ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  'ಈ ಟೈಟಲ್ ನನಗೆ ದೊರಕಿದ್ದು, ತುಂಬಾ ಖುಷಿಯ ವಿಚಾರ ನಾನು ನನ್ನ ಸೆಕ್ಸಿ ಲುಕ್ ಅನ್ನು ವಾಪಸ್ ಪಡೆದುಕೊಂಡೆ. ಯಾರೆಲ್ಲಾ ನನಗೆ ವೋಟ್ ಮಾಡಿದ್ದೀರೋ ಎಲ್ಲರಿಗೂ ತುಂಬಾ ಧನ್ಯವಾದಗಳು. ಜೊತೆಗೆ 'ನಾನು ತುಂಬಾ ಸೆಕ್ಸಿ' ಅನ್ನೋ ಫೀಲ್ ತಂದು ಕೊಟ್ಟ 'ಈಸ್ಟರ್ನ್ ಐ' ವಾರಪತ್ರಿಕೆಗೂ ಧನ್ಯವಾದಗಳು ಎಂದು ನಟಿ ಪ್ರಿಯಾಂಕ ಚೋಪ್ರಾ ನುಡಿದಿದ್ದಾರೆ.[ಬ್ರೇಕಿಂಗ್ ನ್ಯೂಸ್: 'ಮಸ್ತಾನಿ' ಬಿಡುಗಡೆಗೆ ಕಂಟಕವಾಗಿರುವ ಶಿವಸೇನೆ]

  ಇವರು ಅಗ್ರಸ್ಥಾನದಲ್ಲಿದ್ದರೆ, ಇವರ ಜೊತೆ ಇನ್ನು ಕೆಲವು ನಟಿಮಣಿಗಳು ರೇಸ್ ನಲ್ಲಿದ್ದಾರೆ. ಅವರು ಯಾರು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  ನಟಿ ಪ್ರಿಯಾಂಕ ಚೋಪ್ರಾ

  ನಟಿ ಪ್ರಿಯಾಂಕ ಚೋಪ್ರಾ

  ಅಂದಹಾಗೆ ನಟಿ ಪಿಗ್ಗಿ ಅವರು ಇದು ಮೂರನೇ ಬಾರಿಗೆ ಸೆಕ್ಸಿ ಮಹಿಳೆ ಎಂಬ ಕಿರೀಟವನ್ನು ಹೊತ್ತುಕೊಂಡಿರುವುದು. ಅಲ್ಲದೇ ಇವರು ಅಮೇರಿಕದ ಟಿವಿ ಧಾರಾವಾಹಿ ಥ್ರಿಲ್ಲರ್ ಕಥೆಯನ್ನಾಧರಿಸಿದ 'ಕ್ವಾಂಟಿಕೋ' ದಲ್ಲೂ ನಟಿಸಿದ್ದು, ಅದೂ ಕೂಡ ಟಾಪ್ ನಲ್ಲಿದೆ. ಮಾತ್ರವಲ್ಲದೇ ಮಾಜಿ ವಿಶ್ವಸುಂದರಿಯಾಗಿರುವ ಪಿಗ್ಗಿ ಅವರು 2014ರಲ್ಲಿ 'ಮೇರಿ ಕೋಮ್' ಎಂಬ ಸಿನಿಮಾ ಮಾಡಿ ಸಿನಿರಸಿಕರ ಮನಗೆದ್ದಿದ್ದರು.

  ಕಿರುತೆರೆ ನಟಿ ಸನಾಯ ಇರಾನಿ

  ಕಿರುತೆರೆ ನಟಿ ಸನಾಯ ಇರಾನಿ

  'ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂ' ಖ್ಯಾತಿಯ ಕಿರುತೆರೆ ನಟಿ ಸನಾಯ ಇರಾನಿ ಅವರು ಕಳೆದ ಭಾರಿ ಪ್ರಥಮ ಸ್ಥಾನದಲಿದ್ದವರು ಈ ಬಾರಿ ದ್ವಿತೀಯ ಸ್ಥಾನಕ್ಕೆ ಜಂಪ್ ಆಗಿದ್ದಾರೆ.

  ಕಿರುತೆರೆ ನಟಿ ದ್ರಾಶ್ತಿ ಧಮಿ

  ಕಿರುತೆರೆ ನಟಿ ದ್ರಾಶ್ತಿ ಧಮಿ

  'ಮಧುಬಾಲ' ಖ್ಯಾತಿಯ ಕಿರುತೆರೆ ನಟಿ ದ್ರಾಶ್ತಿ ಧಮಿ ಅವರು ಕಳೆದ ಬಾರಿ ಎರಡನೇ ಸ್ಥಾನದಲ್ಲಿ 'ಏಷಿಯಾದ ಸೆಕ್ಸಿಯೆಸ್ಟ್ ಮಹಿಳೆ' ಎಂಬ ಕಿರೀಟ ತೊಟ್ಟುಕೊಂಡಿದ್ದವರು ಈ ಬಾರಿ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

  ನಟಿ ದೀಪಿಕಾ ಪಡುಕೋಣೆ

  ನಟಿ ದೀಪಿಕಾ ಪಡುಕೋಣೆ

  ಬಾಲಿವುಡ್ ನ ಮತ್ತೊಬ್ಬ ಚೆಲುವೆ ದೀಪಿಕಾ ಪಡುಕೋಣೆ ಅವರಿಗೂ ಈ ಸ್ಪರ್ಧೆಯಲ್ಲಿ ವೋಟ್ ಬಿದ್ದಿದ್ದು, 'ಮಸ್ತಾನಿ' ಚೆಲುವೆ ಡಿಪ್ಪಿ ಅವರು ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ.

  ಬಿಟೌನ್ ಬೆಡಗಿ ಕತ್ರೀನಾ ಕೈಫ್

  ಬಿಟೌನ್ ಬೆಡಗಿ ಕತ್ರೀನಾ ಕೈಫ್

  ರಣಬೀರ್ ಕಪೂರ್ ಪ್ರಿಯತಮೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರೂ ಇದರಲ್ಲಿ ಭಾಗವಹಿಸಿದ್ದು, ಟಾಪ್ 5 ರಲ್ಲಿ ಇವರು ಐದನೇ ಸ್ಥಾನವನ್ನು ಅಲಂಕರಿಸಿ 'ಏಷಿಯಾದ ಸೆಕ್ಸಿಯೆಸ್ಟ್ ಮಹಿಳೆ' ಎನಿಸಿಕೊಂಡಿದ್ದಾರೆ.

  ಕಿರುತೆರೆ ನಟಿ ನಿಯಾ ಶರ್ಮಾ

  ಕಿರುತೆರೆ ನಟಿ ನಿಯಾ ಶರ್ಮಾ

  ಜೀ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ 'ಜಮೈ ರಾಜಾ' ಖ್ಯಾತಿಯ ಕಿರುತೆರೆ ನಟಿ ನಿಯಾ ಶರ್ಮಾ ಅವರು 6ನೇ ಸ್ಥಾನ ಗಿಟ್ಟಿಸಿಕೊಂಡು ಸೆಕ್ಸಿ ಮಹಿಳೆ ಎಂಬ ಪಟ್ಟ ಗಳಿಸಿಕೊಂಡಿದ್ದಾರೆ.

  ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್

  ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್

  ಬಾಲಿವುಡ್ ಇನ್ನೋರ್ವ ಬೆಡಗಿ ಕರೀನಾ ಕಪೂರ್ ಖಾನ್ ಅವರು ಟಾಪ್ 10 ನಲ್ಲಿ 7 ನೇ ಸ್ಥಾನ ಗಿಟ್ಟಿಸಿಕೊಂಡು ಸೆಕ್ಸಿ ಮಹಿಳೆ ರೇಸ್ ನಲ್ಲಿದ್ದಾರೆ.

  ನಟಿ ಕಮ್ ಮಾಡೆಲ್ ಗೌಹರ್ ಖಾನ್

  ನಟಿ ಕಮ್ ಮಾಡೆಲ್ ಗೌಹರ್ ಖಾನ್

  ಮಾಡಲ್ ಕಮ್ ಬಾಲಿವುಡ್‌ ನಟಿ ಹಿಂದಿ 'ಬಿಗ್ ಬಾಸ್ 7'ಖ್ಯಾತಿಯ ಗೌಹರ್ ಖಾನ್ ಅವರು ಟಾಪ್ 10 ನಲ್ಲಿ 8ನೇ ಸ್ಥಾನದಲ್ಲಿ ಸೆಕ್ಸಿ ಮಹಿಳೆ ಪಟ್ಟವನ್ನು ಅಲಂಕರಿಸಿದ್ದಾರೆ.

  ಬಾಲಿವುಡ್ ನಟಿ ಸೋನಂ ಕಪೂರ್

  ಬಾಲಿವುಡ್ ನಟಿ ಸೋನಂ ಕಪೂರ್

  ಸಲ್ಮಾನ್ ಖಾನ್ ಅವರ ಜೊತೆ 'ಪ್ರೇಮ್ ರತನ್ ಧನ್ ಪಾಯೋ' ಎಂದು ಡ್ಯುಯೆಟ್ ಹಾಡಿದ್ದ ಬಾಲಿವುಡ್ ನಟಿ ಸೋನಂ ಕಪೂರ್ ಅವರು ಟಾಪ್ 10 ರಲ್ಲಿ 9ನೇ ಸ್ಥಾನದಲ್ಲಿದ್ದುಕೊಂಡು ತೃಪ್ತಿ ಪಟ್ಟುಕೊಂಡಿದ್ದಾರೆ.

  English summary
  Bollywood star Priyanka Chopra beat off global competition to retain her title as the "Sexiest Asian Woman" in an annual UK poll. The singer and actress, 33, came out on top following millions of votes pouring in from across the globe on social media for the 2015 edition of the popular '50 Sexiest Asian Women' poll conducted by London-based weekly newspaper 'Eastern Eye.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X