ಪ್ರಿಯಾಂಕಾ ಚೋಪ್ರಾ ಆತ್ಮಚರಿತ್ರೆಯಲ್ಲಿ ವಿಜಯ್ ಚಾಪ್ಟರ್; ಮೊದಲ ಸಹ ನಟನ ಬಗ್ಗೆ ಹೇಳಿದ್ದೇನು?

ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ತನ್ನ ಆತ್ಮಚರಿತ್ರೆ ಬಿಡುಗಡೆ ಮಾಡಲು ಕಾತರರಾಗಿದ್ದಾರೆ. 'ಅನ್ ಫಿನಿಶಿಡ್' ಪುಸ್ತಕ ಕೈಯಲ್ಲಿ ಹಿಡಿದು ಪ್ರಿಯಾಂಕಾ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆತ್ಮ ಚರಿತ್ರೆಯಲ್ಲಿ ಪ್ರಿಯಾಂಕಾ ಅತ್ಯಂತ ಸುಂದರ ಮತ್ತು ಕೆಟ್ಟ ಘಟನೆಗಳ ಬಗ್ಗೆ ಬರೆದುಕೊಂಡಿದ್ದಾರೆ. ಈಗಾಗಲೇ ಆತ್ಮಚರಿತ್ರೆಯ ಕೆಲವು ಇಂಟರೆಸ್ಟಿಂಗ್ ವಿಚಾರಗಳು ಬಹಿರಂಗವಾಗಿವೆ.

ಇದೀಗ ಪ್ರಿಯಾಂಕಾ ತನ್ನ ಮೊದಲ ಆನ್ ಸ್ಕ್ರೀನ್ ಹೀರೋ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಬಗ್ಗೆ ಬರೆದಿರುವ ವಿಚಾರ ಬಹಿರಂಗವಾಗಿದೆ. ಅಂದಹಾಗೆ ಪ್ರಿಯಾಂಕಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ತಮಿಳು ಚಿತ್ರರಂಗದ ಮೂಲಕ. ವಿಶೇಷ ಎಂದರೆ ನಟ ವಿಜಯ್ ಗೆ ನಾಯಕಿಯಾಗಿ.

2002ರಲ್ಲಿ ರಿಲೀಸ್ ಆದ ತಮಿಜಾನ್ ಸಿನಿಮಾ ಮೂಲಕ ಪ್ರಿಯಾಂಕಾ ಸಿನಿ ಪಯಣ ಪ್ರಾರಂಭ ಮಾಡಿದ್ದಾರೆ. ಮಜಿತ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತನ್ನ ಮೊದಲ ಹೀರೋ ವಿಜಯ್ ಬಗ್ಗೆ ಆತ್ಮಚರಿತ್ರೆಯಲ್ಲಿ ಉಲ್ಲೇಖ ಮಾಡಿದ್ದು, ವಿಜಯ್ ತುಂಬಾ ಪ್ರಭಾವ ಬೀರಿದ ವ್ಯಕ್ತಿ ಎಂದು ಹೇಳಿದ್ದಾರೆ.

Priyanka Chopra writes about her first co star Tamil Actor Vijay in her Autobiography

'ವಿಜಯ್ ಅವರ ನಮ್ರತೆ ಮತ್ತು ಅಭಿಮಾನಿಗಳ ಜೊತೆಗಿನ ಬಾಂಧವ್ಯ ನನ್ನ ಮೇಲೆ ಶಾಶ್ವತವಾದ ಪ್ರಭಾವ ಬೀರಿತು' ಎಂದು ಹೇಳಿದ್ದಾರೆ. ಅವರಿಂದ ಅಭಿಮಾನಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿತಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ. 'ಯು ಎಸ್ ನಲ್ಲಿ 'ಕ್ವಾಂಟಿಕೋ' ಚಿತ್ರೀಕರಣ ಸಮಯದಲ್ಲಿ ಅಭಿಮಾನಿಗಳು ಭೇಟಿ ಮಾಡಲು ಬಂದಾಗ ಊಟದ ವಿರಾಮದಲ್ಲಿ ಅವರನ್ನು ಭೇಟಿಯಾಗಿ, ಅವರ ಜೊತೆ ಫೋಟೋ ತೆಗೆಸಿಕೊಂಡೆ. ಆ ಕ್ಷಣ ನನಗೆ ನನ್ನ ಮೊದಲ ಸಹ ನಟ ವಿಜಯ್ ಅವರನ್ನು ನೆನಪಿಸಿತು ಎಂದು ಹೇಳಿದ್ದಾರೆ.

Priyanka Chopra writes about her first co star Tamil Actor Vijay in her Autobiography

ಪ್ರಿಯಾಂಕಾ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿರುವುದು ಅದೇ ಮೊದಲು ಮತ್ತು ಕೊನೆ. ಬಳಿಕ ಮತ್ತೆ ದಕ್ಷಿಣ ಭಾರತದ ಕಡೆ ಮುಖ ಮಾಡಿಲ್ಲ. ಇದೀಗ ಸಲಾರ್ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಪ್ರಿಯಾಂಕಾ ಕೊನೆಯದಾಗಿ ವೈಟ್ ಟೈಗರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Bollywood Actress Priyanka Chopra writes about her first co star Tamil Actor Vijay in her Autobiography.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X