For Quick Alerts
  ALLOW NOTIFICATIONS  
  For Daily Alerts

  ಭಾರತಕ್ಕೆ ಬಂದ ನಿಕ್ ತಂದೆ-ತಾಯಿ: ನಾಳೆ ಪ್ರಿಯಾಂಕಾ ಕಡೆಯಿಂದ ಸ್ಪೆಷಲ್ ಪಾರ್ಟಿ.!

  By Harshitha
  |

  ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ನತ್ತ ಇಡೀ ಬಾಲಿವುಡ್ ಕಣ್ಣಿಟ್ಟಿದೆ. ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಸದ್ಯದಲ್ಲಿಯೇ ಮದುವೆ ಆಗುತ್ತಾರೆ ಎಂಬ ಸುದ್ದಿ ಬ್ರೇಕ್ ಆದ್ಮೇಲೆ ಎಲ್ಲರ ಕಣ್ಣು ಇವರಿಬ್ಬರ ಮೇಲೆ ಬಿದ್ದಿದೆ.

  ತಮ್ಮ ಮದುವೆ ಬಗ್ಗೆ ಅಥವಾ ಎಂಗೇಜ್ಮೆಂಟ್ ಬಗ್ಗೆ ಪ್ರಿಯಾಂಕಾ ಛೋಪ್ರಾ ಆಗಲಿ, ನಿಕ್ ಜೊನಾಸ್ ಆಗಲಿ ಇಲ್ಲಿಯವರೆಗೂ ತುಟಿ ಬಿಚ್ಚಿಲ್ಲ. ಹೀಗಿದ್ದರೂ, ಪ್ರತಿದಿನ ಪ್ರಿಯಾಂಕಾ ಮತ್ತು ನಿಕ್ ಬಗ್ಗೆ ಒಂದಲ್ಲಾ ಒಂದು ಸುದ್ದಿ ಹರಿದಾಡುತ್ತಲೇ ಇದೆ.

  ಆಗಸ್ಟ್ 18 ರಂದು ಮುಂಬೈನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಸ್ಪೆಷಲ್ ಪಾರ್ಟಿ ಅರೇಂಜ್ ಮಾಡಿದ್ದಾರೆ. ಇದೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಸದ್ಯ ನಿಕ್ ಜೊನಾಸ್ ತಮ್ಮ ಕುಟುಂಬದ ಜೊತೆಗೆ ಭಾರತಕ್ಕೆ ಬಂದು ಇಳಿದಿದ್ದಾರೆ. ಬೇಕಾದ್ರೆ, ನೀವೇ ಫೋಟೋಗಳನ್ನು ನೋಡಿರಿ...

  ಭಾರತಕ್ಕೆ ಬಂದ ನಿಕ್ ತಂದೆ ತಾಯಿ

  ಭಾರತಕ್ಕೆ ಬಂದ ನಿಕ್ ತಂದೆ ತಾಯಿ

  ನಿಕ್ ಜೊನಾಸ್ ತಂದೆ-ತಾಯಿ (ಕೆವಿನ್-ಡೆನಿಸ್ ಜೊನಾಸ್) ಭಾರತಕ್ಕೆ ಬಂದಿದ್ದಾರೆ. ಪ್ರಿಯಾಂಕಾ ಛೋಪ್ರಾ ಆಯೋಜಿಸಿರುವ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದಾರೆ ನಿಕ್ ತಂದೆ-ತಾಯಿ.

  ಅರೇ.. ಏರ್ ಪೋರ್ಟ್ ನಲ್ಲಿ ಇದೇನ್ ಮಾಡ್ಬಿಟ್ರು ನಟಿ ಪ್ರಿಯಾಂಕಾ.?ಅರೇ.. ಏರ್ ಪೋರ್ಟ್ ನಲ್ಲಿ ಇದೇನ್ ಮಾಡ್ಬಿಟ್ರು ನಟಿ ಪ್ರಿಯಾಂಕಾ.?

  ಕ್ಯಾಮರಾ ಕಂಗಳಲ್ಲಿ ಸೆರೆಯಾದ ನಿಕ್

  ಕ್ಯಾಮರಾ ಕಂಗಳಲ್ಲಿ ಸೆರೆಯಾದ ನಿಕ್

  ತಮ್ಮ ತಂದೆ-ತಾಯಿ ಜೊತೆಗೆ ಏರ್ ಪೋರ್ಟ್ ನಲ್ಲಿ ನಿಕ್ ಲ್ಯಾಂಡ್ ಆದಾಗ, ಕ್ಯಾಮರಾ ಕಂಗಳಿಗೆ ಸೆರೆ ಸಿಕ್ಕರು.

  ಅಂದು ಪ್ರಿಯಾಂಕಾ ಬಚ್ಚಿಟ್ಟುಕೊಂಡಿದ್ದು ಇದೇ ವಜ್ರದ ಉಂಗುರ.! ಇದರ ಬೆಲೆ ಎಷ್ಟು ಗೊತ್ತಾ.?ಅಂದು ಪ್ರಿಯಾಂಕಾ ಬಚ್ಚಿಟ್ಟುಕೊಂಡಿದ್ದು ಇದೇ ವಜ್ರದ ಉಂಗುರ.! ಇದರ ಬೆಲೆ ಎಷ್ಟು ಗೊತ್ತಾ.?

  ನಾಳೆ ನಡೆಯುವುದು ಎಂಗೇಜ್ಮೆಂಟ್ ಪಾರ್ಟಿ.?

  ನಾಳೆ ನಡೆಯುವುದು ಎಂಗೇಜ್ಮೆಂಟ್ ಪಾರ್ಟಿ.?

  ನಾಳೆ ಮುಂಬೈನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ನಡೆಯಲಿರುವುದು ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ಪಾರ್ಟಿ ಎನ್ನಲಾಗಿದೆ. ಜುಲೈ 18 ರಂದೇ (ಪ್ರಿಯಾಂಕಾ ಜನ್ಮದಿನ) ಪ್ರಿಯಾಂಕಾ ಕೈಬೆರಳಿಗೆ ನಿಕ್ ಉಂಗುರ ತೊಡಿಸಿದ್ದಾರೆ ಎಂದು ಸುದ್ದಿ ಆಗಿತ್ತು. ಈ ನಡುವೆ ತಮ್ಮ ನಿಶ್ಚಿತಾರ್ಥ ಭಾರತದಲ್ಲಿಯೇ ನಡೆಯಬೇಕು ಎಂಬ ಆಸೆ ಇರುವ ಕಾರಣ ನಾಳೆ ಎಂಗೇಜ್ಮೆಂಟ್ ಪಾರ್ಟಿ ಆಯೋಜಿಸಿದ್ದಾರಂತೆ ನಟಿ ಪ್ರಿಯಾಂಕಾ ಛೋಪ್ರಾ.

  ಅಂತೂ ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ ಹತ್ತಿರ ಬಂತು.!ಅಂತೂ ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ ಹತ್ತಿರ ಬಂತು.!

  ಭಾವಿ ಸೊಸೆಗೆ ದುಬಾರಿ ಗಿಫ್ಟ್.?

  ಭಾವಿ ಸೊಸೆಗೆ ದುಬಾರಿ ಗಿಫ್ಟ್.?

  ಈಗಾಗಲೇ ಪ್ರಿಯಾಂಕಾ ಕೈಬೆರಳಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ವಜ್ರದ ಉಂಗುರವನ್ನ ನಿಕ್ ತೊಡಿಸಿದ್ದಾರೆ. ಇದೀಗ ಭಾವಿ ಸೊಸೆ ಪ್ರಿಯಾಂಕಾ ಛೋಪ್ರಾಗೆ ನಿಕ್ ತಂದೆ-ತಾಯಿ ದುಬಾರಿ ಉಡುಗೊರೆ ನೀಡಲಿದ್ದಾರಂತೆ.

  ಪಾರ್ಟಿಯಲ್ಲಿ ಬಾಲಿವುಡ್ ದಿಗ್ಗಜರು ಭಾಗಿ

  ಪಾರ್ಟಿಯಲ್ಲಿ ಬಾಲಿವುಡ್ ದಿಗ್ಗಜರು ಭಾಗಿ

  ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಬಾಲಿವುಡ್ ದಿಗ್ಗಜರಿಗೆ ಪ್ರಿಯಾಂಕಾ ಆಹ್ವಾನ ನೀಡಿದ್ದಾರಂತೆ. ಎಲ್ಲರ ಮುಂದೆ ತಮ್ಮ ನಿಶ್ಚಿತಾರ್ಥ ಹಾಗೂ ಮದುವೆ ಸುದ್ದಿಯನ್ನ ಪ್ರಿಯಾಂಕಾ ಬಹಿರಂಗ ಪಡಿಸುವ ಸಾಧ್ಯತೆ ಇದೆ.

  English summary
  Priyanka Chopra's engagement: Nick's Parents arrive in India. Have a look at the pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X