ಅಂದು ಪ್ರಿಯಾಂಕಾ ಬಚ್ಚಿಟ್ಟುಕೊಂಡಿದ್ದು ಇದೇ ವಜ್ರದ ಉಂಗುರ.! ಇದರ ಬೆಲೆ ಎಷ್ಟು ಗೊತ್ತಾ.?
ಏಳೆಂಟು-ದಿನಗಳ ಹಿಂದೆಯಷ್ಟೇ ಏರ್ ಪೋರ್ಟ್ ನಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ನಡೆದುಕೊಂಡ ರೀತಿ ಹಲವರ ಕಣ್ಣರಳಿಸಿತ್ತು. ಏರ್ ಪೋರ್ಟ್ ಗೆ ನಟಿ ಪ್ರಿಯಾಂಕಾ ಛೋಪ್ರಾ ಬಂದಿಳಿದ ಕೂಡಲೆ ಫೋಟೋಗ್ರಾಫರ್ ಗಳು ಫೋಟೋ ಕ್ಲಿಕ್ ಮಾಡಲು ರೆಡಿ ಆದರು. ಈ ವೇಳೆ ಎಡಗೈನಲ್ಲಿದ್ದ ವಜ್ರದ ಉಂಗುರವನ್ನ ಬಿಚ್ಚಿ ನಟಿ ಪ್ರಿಯಾಂಕಾ ಜೇಬಿನ ಒಳಗೆ ಹಾಕೊಂಡ ದೃಶ್ಯ ಕ್ಯಾಮರಾ ಕಂಗಳಲ್ಲಿ ಸೆರೆ ಆಗಿತ್ತು.
ಅಸಲಿಗೆ, ಮೀಡಿಯಾದಿಂದ ನಟಿ ಪ್ರಿಯಾಂಕಾ ಮುಚ್ಚಿಟ್ಟುಕೊಂಡ ವಜ್ರದ ಉಂಗುರ 'ಎಂಗೇಜ್ಮೆಂಟ್ ರಿಂಗ್' ಅಂತಲೇ ಅನೇಕರು ಬಿಂಬಿಸಿದರು. ಒಂದ್ವೇಳೆ ಅದು ನಿಶ್ಚಿತಾರ್ಥದ ಉಂಗುರ ಆಗಿಲ್ಲದಿದ್ದರೆ, ಅದನ್ನ ಮುಚ್ಚಿಟ್ಟುಕೊಳ್ಳುವ ಅವಶ್ಯಕತೆ ಆದರೂ ಏನಿತ್ತು ಹೇಳಿ.?
ಅಂದು, ಏರ್ ಪೋರ್ಟ್ ನಲ್ಲಿ ಫೋಟೋಗ್ರಾಫರ್ ಗಳ ಕಣ್ತಪ್ಪಿಸಿ, ಪ್ರಿಯಾಂಕಾ ಛೋಪ್ರಾ ಬಚ್ಚಿಟ್ಟುಕೊಂಡ ವಜ್ರದ ಉಂಗುರ ಇದೀಗ ಕೆಲ ಫೋಟೋಗಳಲ್ಲಿ ರಾರಾಜಿಸುತ್ತಿದೆ.
ಪ್ರಿಯಾಂಕಾ ಹುಟ್ಟುಹಬ್ಬದಂದು ನಿಕ್ ತೊಡಿಸಿದ್ದಾರೆ ಎನ್ನಲಾದ ಈ ವಜ್ರದ ಉಂಗುರದ ಬೆಲೆ ಎಷ್ಟು ಗೊತ್ತಾ.? ವಿವರ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

ಇದೇ ನೋಡಿ ಆ ಉಂಗುರ.!
ಅವತ್ತು ಏರ್ ಪೋರ್ಟ್ ನಲ್ಲಿ ಪ್ರಿಯಾಂಕಾ ಛೋಪ್ರಾ ಮರೆ ಮಾಡಿದ್ದು ಇದೇ ಉಂಗುರ ಅಂತ ಹೇಳ್ತಿದ್ದಾರೆ ಬಾಲಿವುಡ್ ಪಂಡಿತರು. ಅಂದು ಪ್ರಿಯಾಂಕಾ ಬಚ್ಚಿಟ್ಟ ಉಂಗುರ ಇಂದು ರವೀನಾ ಟಂಡನ್ ಫೋಟೋದಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿದೆ.

ಉಂಗುರದ ಬೆಲೆ ಎಷ್ಟು ಗೊತ್ತಾ.?
ವರದಿಗಳ ಪ್ರಕಾರ, ನಟಿ ಪ್ರಿಯಾಂಕಾ ಧರಿಸಿರುವ ವಜ್ರದ ಉಂಗುರದ ಬೆಲೆ $200,000 ಅಂದ್ರೆ ಸರಿಸುಮಾರು ಒಂದು ಕೋಟಿ ನಲವತ್ತು ಲಕ್ಷ ರೂಪಾಯಿ.! ಈ ವಜ್ರದ ಉಂಗುರ ನಾಲ್ಕು carat ತೂಗಲಿದ್ದು, ಹೈ ಕ್ವಾಲಿಟಿ ಕುಶನ್ ಕಟ್ ಹೊಂದಿದೆ.

ಪಾರ್ಟಿ ಮೂಡ್ ನಲ್ಲಿ ಪ್ರಿಯಾಂಕಾ
ಅಷ್ಟಕ್ಕೂ, ನಟಿ ಪ್ರಿಯಾಂಕಾ ಛೋಪ್ರಾ ಈ ಉಂಗುರವನ್ನ ಶೋ ಆಫ್ ಮಾಡಿದ್ದು ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ. ಮನೀಶ್ ಮಲ್ಹೋತ್ರ ರವರ ಹೌಸ್ ಪಾರ್ಟಿ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆತ್ಮೀಯ ಗೆಳತಿಯರ ಜೊತೆಗೆ ಪ್ರಿಯಾಂಕಾ
ನಟಿ ಕರೀಷ್ಮಾ ಕಪೂರ್, ಸೋಫಿ ಚೌಧರಿ, ನೇಹಾ ಧೂಪಿಯಾ, ಮನೀಶ್ ಮಲ್ಹೋತ್ರ ಜೊತೆಗೆ ಪ್ರಿಯಾಂಕಾ ಛೋಪ್ರಾ ಪಾರ್ಟಿ ಮಾಡಿದ್ದಾರೆ.

ಆಗಸ್ಟ್ 18 ರಂದು ಅನೌನ್ಸ್ ಮೆಂಟ್
ಮೂಲಗಳ ಪ್ರಕಾರ, ಆಗಸ್ಟ್ 18 ರಂದು 5 ಸ್ಟಾರ್ ಹೋಟೆಲ್ ನಲ್ಲಿ ಪ್ರಿಯಾಂಕಾ ಛೋಪ್ರಾ ಪಾರ್ಟಿಯೊಂದನ್ನ ಅರೇಂಜ್ ಮಾಡಿದ್ದಾರೆ. ಈ ಪಾರ್ಟಿಗೆ ಬಾಲಿವುಡ್ ದಿಗ್ಗಜರನ್ನ ಆಹ್ವಾನಿಸಲಾಗಿದ್ದು, ಅಂದೇ ತಮ್ಮ ಎಂಗೇಜ್ಮೆಂಟ್ ವಿಚಾರವನ್ನ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಅನೌನ್ಸ್ ಮಾಡುವ ಸಾಧ್ಯತೆ ಇದ್ಯಂತೆ.


Click it and Unblock the Notifications










