For Quick Alerts
  ALLOW NOTIFICATIONS  
  For Daily Alerts

  'ನಿನ್ನ ತೋಳುಗಳಲ್ಲಿ ನನ್ನ ಉಸಿರು ನಿಂತು ಹೋಗಿದೆ' ಎಂದ ಪ್ರಿಯಾಂಕಾ ಚೋಪ್ರಾ

  |

  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ಪಾಪ್ ಸ್ಟಾರ್ ನಿಕ್ ಜೋನಸ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನುವ ಸುದ್ದಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಇವರಿಬ್ಬರ ದಾಂಪತ್ಯದ ಬಗ್ಗೆನೇ ಚರ್ಚೆ ಶುರುವಾಗಿದೆ. ಅನ್ಯೋನ್ಯತೆಯಿಂದ ಇದ್ದ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಅಂತಲೇ ಮಾತಾಡಿಕೊಳ್ಳುತ್ತಿದ್ದಾರೆ.

  ಅಷ್ಟಕ್ಕೂ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ದಾಂಪತ್ಯದ ಬಗ್ಗೆ ಇಷ್ಟೊಂದು ಚರ್ಚೆ ಆಗಲು ಕಾರಣವಿದೆ. ಪ್ರಿಯಾಂಕಾ ಚೋಪ್ರಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪತಿ ಹೆಸರು ಸೇರಿಕೊಂಡಿದ್ದರು. ಈಗ ದಿಢೀರನೇ ಪತಿಯ ಹೆಸರನ್ನು ಕೈ ಬಿಟ್ಟಿದ್ದಾರೆ. ನಟಿ ಸಮಂತಾ ಕೂಡ ವಿಚ್ಛೇದನಕ್ಕಿಂತ ಮುನ್ನ ಹೀಗೆ ಮಾಡಿದ್ದರು. ಆ ಕಾರಣಕ್ಕೆ ಪ್ರಿಯಾಂಕಾ ದಾಂಪತ್ಯದಲ್ಲೂ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿತ್ತು. ಈಗ ಪ್ರಿಯಾಂಕಾ ಪತಿ ಹಂಚಿಕೊಂಡ ಒಂದು ಪೋಸ್ಟ್‌ಗೆ ಕಮೆಂಟ್ ಮಾಡುವ ಮೂಲಕ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

  ಪತಿ ಜೋನಸ್ ಪೋಸ್ಟ್‌ಗೆ ಪಿಗ್ಗಿ ಕಮೆಂಟ್

  ಪತಿ ಜೋನಸ್ ಪೋಸ್ಟ್‌ಗೆ ಪಿಗ್ಗಿ ಕಮೆಂಟ್

  ಪ್ರಿಯಾಂಕಾ ಚೋಪ್ರಾ ನವೆಂಬರ್ 22 ರಂದು ತನ್ನ ಟ್ವೀಟರ್ ಖಾತೆಯಿಂದ ಚೋಪ್ರಾ ಹಾಗೂ ಜೋನಸ್ ಎರಡೂ ಹೆಸರುಗಳನ್ನು ತೆಗೆದು ಹಾಕಿದ್ದರು. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜೋನಸ್ ಹೆಸರುನ್ನು ಕೈ ಬಿಟ್ಟಿದ್ದರು. ಇದು ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿತ್ತು. ಈ ಬೆನ್ನಲೇ ಪ್ರಿಯಾಂಕಾ-ನಿಕ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅಂತ ಮಾತಾಡಿಕೊಳ್ಳುತ್ತಿದ್ದರು. ಇಬ್ಬರ ವಿಚ್ಛೇದನದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಪತಿ ನಿಕ್ ಜೋನಸ್ ಇನ್‌ಸ್ಟಾಗ್ರಾಂನಲ್ಲಿ ವರ್ಕ್‌ಔಟ್ ವಿಡಿಯೋವನ್ನು ಶೇರ್ ಮಾಡಿದ್ದರು. ಆ ವಿಡಿಯೋಗೆ ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ.

  ನಿನ್ನ ತೋಳುಗಳಲ್ಲಿ ಉಸಿರು ನಿಂತು ಹೋಯಿತು

  ನಿನ್ನ ತೋಳುಗಳಲ್ಲಿ ಉಸಿರು ನಿಂತು ಹೋಯಿತು

  ನಿಕ್ ಜೋನಸ್ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವ ಪೋಸ್ಟ್ ವೈರಲ್ ಆಗುತ್ತಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ ಪತಿ ನಿಕ್ ಪೋಸ್ಟ್ ಮಾಡಿದ ವಿಡಿಯೋಗೆ ಪ್ರಿಯಾಂಕಾ ಚೋಪ್ರಾ ಮಾಡಿದ ಕಮೆಂಟ್ ಅದಕ್ಕಿಂತ ಹೆಚ್ಚು ವೈರಲ್ ಆಗುತ್ತಿದೆ. ನಿಕ್ ವರ್ಕ್‌ಔಟ್ ವಿಡಿಯೋಗೆ " ಡಾಮ್.. ನಿನ್ನ ತೋಳುಗಳಲ್ಲಿ ನನ್ನ ಉಸಿರು ನಿಂತು ಹೋಯಿತು." ಎಂದು ಕಮೆಂಟ್ ಮಾಡಿದ್ದಾರೆ. ಈ ಮೂಲಕ ಇಬ್ಬರ ದಾಂಪತ್ಯದಲ್ಲಿ ಎದ್ದಿರುವ ವಿಚ್ಛೇದನದ ಗಾಳಿ ಸುದ್ದಿಗೆ ಪರೋಕ್ಷವಾಗಿ ಬ್ರೇಕ್ ಹಾಕಿದ್ದಾರೆ.

  ಪತಿ ಹೆಸರು ಕೈ ಬಿಡಲು ಕಾರಣವೇನು?

  ಪತಿ ಹೆಸರು ಕೈ ಬಿಡಲು ಕಾರಣವೇನು?

  ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಪತಿ ಜೋನಸ್ ಹೆಸರನ್ನು ಕೈ ಬಿಟ್ಟಿದ್ದೇಕೆ? ಅನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ನೆಟ್‌ಫ್ಲಿಕ್ಸ್‌ನಲ್ಲಿ ಜೋನಸ್ ಸಹೋದರರು ಹೊಸ ಕಾರ್ಯಕ್ರಮ ಆರಂಭ ಆಗಿದೆ. ಜೋನಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್‌ನಲ್ಲಿ ಹಾಡು, ನೃತ್ಯ, ಚೇಷ್ಟೆ ಎಲ್ಲವೂ ಇರುತ್ತೆ. ಈ ಕಾರಣಕ್ಕಾಗಿ ಪ್ರಿಯಾಂಕಾ ತನ್ನ ಸೋಶಿಯಲ್ ಮೀಡಿಯಾ ಖಾತೆಯಿಂದ ಚೋಪ್ರಾ ಹಾಗೂ ಜೋನಸ್ ಹೆಸರನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಇದೇ ಶೋನಲ್ಲಿ ಪ್ರಿಯಾಂಕಾ ಚೋಪ್ರಾ ವಿಶೇಷ ಅತಿಥಿಯಾಗಿಯೂ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ.

  ಪ್ರಿಯಾಂಕಾ- ನಿಕ್ ಪ್ರೀತಿಸಿ ವಿವಾಹ

  ಪ್ರಿಯಾಂಕಾ- ನಿಕ್ ಪ್ರೀತಿಸಿ ವಿವಾಹ

  ಹಾಲಿವುಡ್‌ನಲ್ಲೂ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ 'ಮ್ಯಾಟ್ರಿಕ್ಸ್ 4' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. ಇನ್ನು ಪ್ರಿಯಾಂಕಾ ಚೋಪ್ರಾ ಹಾಗೂ ಗಾಯಕ ನಿಕ್ ಜೋನಸ್ 2018 ಡಿಸೆಂಬರ್ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಮೆರಿಕದ ಗಾಯಕ ನಿಕ್ ಭಾರತದಲ್ಲೇ ಪ್ರಿಯಾಂಕಾ ಚೋಪ್ರಾರನ್ನು ಅದ್ದೂರಿಯಾಗಿ ವಿವಾಹವಾಗಿದ್ದರು. ಆ ಬಳಿಕ ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಇಬ್ಬರು ಅಮೆರಿಕದಲ್ಲಿ ನೆಲೆಸಿದ್ದಾರೆ.

  English summary
  Nick Jonas posted a video of his weights lifting in the gym. Priyanka Chopra commented, "Damn! I just died in your arms...."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X