ಮೇಕಪ್ ಬಿಟ್ಟಾಕಿ, ಪ್ರಿಯಾಂಕಾ ಡ್ರೆಸ್ ಬೆಲೆ ಕೇಳಿದ್ರೆ ಆಶ್ಚರ್ಯ ಆಗುತ್ತೆ!

ತಾರೆಯರ ಕೆಲವು ವಿಷಯಗಳು ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡುತ್ತದೆ. ಅದೇ ರೀತಿ ಇದೀಗ ಪ್ರಿಯಾಂಕಾ ಚೋಪ್ರಾ ಡ್ರೆಸ್ ಬೆಲೆ ಕೇಳಿದರೆ ಖಂಡಿತ ಎಲ್ಲರಿಗೂ ಆಶ್ಚರ್ಯ ಆಗುತ್ತದೆ.

ಇತ್ತೀಚಿಗಷ್ಟೆ ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ನಡೆದ ಮೆಟ್ ಗಾಲಾ 2019 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಪ್ರಿಯಾಂಕಾ ಚೋಪ್ರಾ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪ್ರಿಯಾಂಕಾ ಮೇಕಪ್ ಹಾಗೂ ಹೇರ್ ಸ್ಟೈಲ್ ನೋಡಿ ಅನೇಕರು ಗೇಲಿ ಮಾಡಿದರು.

ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಮತ್ತೆ ಟ್ರೋಲ್ ಆಗಲು ಈ ಹೇರ್ ಸ್ಟೈಲ್ ಹಾಗೂ ಮೇಕಪ್ ಕಾರಣವಾಗಿತ್ತು. ಆದರೆ, ಈಗ ಆ ಹೇರ್ ಸ್ಟೈಲ್ ಮತ್ತು ಮೇಕಪ್ ಜೊತೆಗೆ ಪ್ರಿಯಾಂಕಾ ಹಾಕಿದ್ದ ಗೌನ್ ಬೆಲೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದರ ಬೆಲೆ ಕೇಳಿದರೆ ನಿಜಕ್ಕೂ ಅಚ್ಚರಿ ಆಗುತ್ತದೆ...

ಪ್ರಿಯಾಂಕಾ ಗೌನ್ ಬೆಲೆ 45 ಲಕ್ಷ

ಪ್ರಿಯಾಂಕಾ ಗೌನ್ ಬೆಲೆ 45 ಲಕ್ಷ

ವಿಶೇಷ ಕಾರ್ಯಕ್ರಮಗಳಲ್ಲಿ ಪ್ರಿಯಾಂಕ ಚೋಪ್ರಾ ಕಾಸ್ಟೂಮ್ ಕಣ್ಣು ಕುಕ್ಕುವಂತೆ ಇರುತ್ತದೆ. ಅದೇ ರೀತಿ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಪ್ರಿಯಾಂಕ ಚೋಪ್ರಾ ಬಿಳಿ ಬಣ್ಣದ ಗೌನ್ ಧರಿಸಿದ್ದರು. ಅಚ್ಚರಿ ಅಂದರೆ, ಈ ಗೌನ್ ಬೆಲೆ ಬರೋಬ್ಬರಿ 45 ಲಕ್ಷ ರೂಪಾಯಿ. ಹೌದು, ಮೆಟ್ ಗಾಲಾ ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ಪ್ರಿಯಾಂಕಾ ಈ ಗೌನ್ ತಯಾರಿ ಮಾಡಿಸಿದ್ದರು.

ಕಿವಿಯೋಲೆಗಳ ಬೆಲೆ 10 ಲಕ್ಷ

ಕಿವಿಯೋಲೆಗಳ ಬೆಲೆ 10 ಲಕ್ಷ

ಸಾಮಾನ್ಯವಾಗಿ ಹುಡುಗಿಯರು ಡ್ರೆಸ್ ಗೆ ತಕ್ಕ ಹಾಗೆ ಅದೇ ಬಣ್ಣದ ಕಿವಿಯೋಲೆ ಹಾಕಿಕೊಳ್ಳುತ್ತಾರೆ. ಹೀಗಿರುವಾಗ ಪ್ರಿಯಾಂಕ ಏನ್ ಕಡಿಮೆಯೇ. ಪ್ರಿಯಾಂಕ ಸಹ ತಮ್ಮ ಡ್ರೆಸ್ ಗೆ ತಕ್ಕ ಕಿವಿಯೋಲೆಗಳ ಆಯ್ಕೆ ಮಾಡಿದ್ದರು. ಆ ಎರಡು ಕಿವಿಯೋಲೆಗಳ ಬೆಲೆ ಬರೋಬ್ಬರಿ 10 ಲಕ್ಷ. ಇದು ಆಶ್ಚರ್ಯ ಎನ್ನಿಸಿದರೂ ನಿಜ.

ಹೇರ್ ಸ್ಟೈಲ್ ಹಾಗೂ ಮೇಕಪ್ ಗೆ ಟ್ರೋಲ್

ಹೇರ್ ಸ್ಟೈಲ್ ಹಾಗೂ ಮೇಕಪ್ ಗೆ ಟ್ರೋಲ್

ಈ ರೀತಿ ಪ್ರಿಯಾಂಕಾ ತಮ್ಮ ಡ್ರೆಸ್ ಹಾಗೂ ಕಿವಿಯೋಲೆಗಳಿಗೆ ಸುಮಾರು 55 ಲಕ್ಷ ಖರ್ಚು ಮಾಡಿದ್ದರು. ಆದರೂ ಸಹ ತಮ್ಮ ಮೇಕಪ್ ಹಾಗೂ ಹೇರ್ ಸ್ಟೈಲ್ ನಿಂದ ಸಿಕ್ಕಾಪಟ್ಟೆ ಟ್ರೋಲ್ ಆದರು. ಪ್ರಿಯಾಂಕಾಗೆ ಈ ಹಿಂದೆ ಅನೇಕ ಬಾರಿ ಟ್ರೋಲ್ ಮಾಡಲಾಗಿದೆ. ಆದರೆ, ಸದ್ಯ ಅವರ ಅವತಾರವೇ ಬಹಳಷ್ಟು ಹಾಸ್ಯಕ್ಕೆ ಕಾರಣ ಆಗಿದೆ.

ಅಕ್ಟೋಬರ್ ನಲ್ಲಿ ಹೊಸ ಸಿನಿಮಾ

ಅಕ್ಟೋಬರ್ ನಲ್ಲಿ ಹೊಸ ಸಿನಿಮಾ

ಬಾಲಿವುಡ್ ಚಿತ್ರರಂಗದ ಈ ನಟಿ ಈಗ ಹಾಲಿವುಡ್ ತುಂಬ ಹೆಸರು ಮಾಡಿದ್ದಾರೆ. ಇಂಗ್ಲೀಷ್ ಟಿವಿ ಶೋಗಳ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದಾರೆ. ಈ ಕಾರಣದಿಂದ ಹಿಂದಿ ಸಿನಿಮಾ ಮಾಡುವುದು ಸ್ವಲ್ಪ ಕಡಿಮೆಯಾಗಿದೆ. ಅವರ ಮುಂದಿನ ಹಿಂದಿ ಸಿನಿಮಾ 'ದಿ ಸ್ಕೈ ಇಸ್ ಪಿಂಕ್' ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Bollywood actress Priyanka Chopra's met gala program outfit costs 45 lakh and her earrings was of around Rs 10 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X