ಬಿಗಿಯಾದ ಬಟ್ಟೆ ಧರಿಸಲು ಬಿಡುತ್ತಿರಲ್ಲಿಲ್ಲ ಎಂದು ಅಪ್ಪನ ಮೇಲೆ ಮುನಿಸಿಕೊಂಡಿದ್ದೆ: ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ. ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಹಾಲಿವುಡ್ ಸಿನಿಮಾಗಳಲ್ಲಿಯೂ ಬಣ್ಣಹಚ್ಚುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ನಟಿ. ಬ್ಲೋಬಲ್ ಸ್ಟಾರ್ ಆಗಿ ಗುತಿಸಿಕೊಂಡಿರುವ ಪ್ರಿಯಾಂಕಾ ಅಮೆರಿಕದ ಗಾಯಕ ನಿಕ್ ಜೋನಸ್ ಕೈ ಹಿಡಿದು ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದಾರೆ.

ಪ್ರಿಯಾಂಕಾ ಆಗಾಗ ಹಾಟ್ ಪೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸುತ್ತಿರುತ್ತಾರೆ. ದಿನಕ್ಕೊಂದು ಉಡುಗೆ ತೊಟ್ಟು, ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆ ಗೆಡೆಸುತ್ತಿರುವ ಪ್ರಿಯಾಂಕಾ, ಹದಿಹರೆಯದಲ್ಲಿದ್ದಾಗ ತೀರಾ ಟೈಟ್ ಉಡುಗೆಗಳನ್ನು ತೊಡುತ್ತಿರಲ್ಲವಂತೆ. ಕಾರಣ ಬಿಗಿಯಾದ ಉಡುಗೆ ಧರಿಸಿಸಲು ತಂದೆ ಬಿಡುತ್ತಿರಲ್ಲವಂತೆ. ಈ ಬಗ್ಗೆ ಪ್ರಿಯಾಂಕಾ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

ಬಿಗಿ ಉಡುಪು ಧರಿಸಿದ್ದನ್ನು ನೋಡಿ ತಂದೆ ಕೆಂಡಾಮಂಡಲವಾಗಿದ್ದರು

ಬಿಗಿ ಉಡುಪು ಧರಿಸಿದ್ದನ್ನು ನೋಡಿ ತಂದೆ ಕೆಂಡಾಮಂಡಲವಾಗಿದ್ದರು

ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ತನ್ನ ತಂದೆ ಅಶೋಕ್ ಚೋಪ್ರಾ ಜೊತೆಗಿನ ನೆನಪನ್ನು ಹಂಚಿಕೊಂಡಿದ್ದಾರೆ. "ನನಗೆ ಆಗ 16 ವರ್ಷ. ನಾನು ಅಮೆರಿಕಾದಿಂದ ವಾಪಸ್ ಬಂದ ನಂತರ ನನ್ನ ತಂದೆ ನನ್ನನ್ನು ನೋಡಿ ಬೆಚ್ಚಿಬಿದ್ದರು. ನಾನು ಧರಿಸಿದ್ದ ಉಡುಪನ್ನು ನೋಡಿ ಕೆಂಡಾಮಂಡಲವಾಗಿದ್ದು. ನಾನು ಅಮೆರಿಕಾಗೆ ಹೋದ ನಂತರ ಅಲ್ಲಿಯ ಉಡುಗೆ ತೊಡುಗೆ ಧರಿಸಲು ಪ್ರಾರಂಭಿಸಿದ್ದೆ. ಭಾರತಕ್ಕೆ ಬಂದ ನಂತರವೂ ಬಿಗಿಯಾದ ಉಡುಪು ಧರಿಸಿದ್ದನ್ನು ನೋಡಿ ಅಪ್ಪ ಕೋಪಮಾಡಿಕೊಂಡಿದ್ದರು. ನಮ್ಮಿಬ್ಬರ ನಡುವೆ ಮಾತಿನ ವಾಗ್ವಾದವೆ ನಡೆದಿತ್ತು" ಎಂದು ಹೇಳಿದ್ದಾರೆ.

ಹುಡುಗರು ನನ್ನನ್ನು ಫಾಲೋ ಮಾಡಿಕೊಂಡು ಬರುತ್ತಿದ್ದರು

ಹುಡುಗರು ನನ್ನನ್ನು ಫಾಲೋ ಮಾಡಿಕೊಂಡು ಬರುತ್ತಿದ್ದರು

"ನಾನು ಬಿಗಿಯಾದ ಬಟ್ಟೆ ಧರಿಸಿ ಶಾಲೆಗೆ ಹೋಗುವುದು ಅಪ್ಪನಿಗೆ ಇಷ್ಟವಾಗುತ್ತಿರಲಿಲ್ಲ. ಅಲ್ಲದೆ ನಾನು ಶಾಲೆಯಿಂದ ಮನೆಗೆ ಬರುವಾಗ ಹುಡುಗರು ನನ್ನನ್ನು ಫಾಲೋ ಮಾಡಿಕೊಂಡು ಬರುತ್ತಿದ್ದರು. ಇದನ್ನು ನೋಡಿದ ಅಪ್ಪ ಬಿಗಿಯಾದ ಬಟ್ಟೆ ಧರಿಸಲು ಬಿಡುತ್ತಿರಲಿಲ್ಲ. ಅಪ್ಪ ಮತ್ತು ಮಗಳ ನಡುವೆ ಇಗೋ ಸಮಸ್ಯೆಯಿಂದ ಕಿರಿಕ್ ಆಗುತ್ತಿತ್ತು" ಎಂದು ಹೇಳಿದ್ದಾರೆ.

ನಾಲ್ಕು ವರ್ಷ ಅಮೆರಿಕಾದಲ್ಲಿ ಓದಿದ ಪ್ರಿಯಾಂಕಾ

ನಾಲ್ಕು ವರ್ಷ ಅಮೆರಿಕಾದಲ್ಲಿ ಓದಿದ ಪ್ರಿಯಾಂಕಾ

"ನನ್ನ ಮತ್ತು ಅಪ್ಪನ ನಡುವೆ ತುಂಬ ಅನ್ಯೋನ್ಯತೆ ಇತ್ತು. ನಾನು 12ನೇ ವರ್ಷದವಳಾಗಿದ್ದಾಗ ಓದಲು ಅಮೆರಿಕಾಗೆ ಹೋದೆ. ಆ ನಂತರ ನಾಲ್ಕು ವರ್ಷದ ಬಳಿಕ ಅಮೆರಿಕಾದಿಂದ ವಾಪಸ್ ಆದೆ. ಅಷ್ಟರಲ್ಲಿ ಸಾಕಷ್ಟು ಬದಲಾಗಿದ್ದೆ. ಹೋಗುವಾಗ ಗುಂಗುರು ಕೂದಲಿನ ಭಾರತೀಯ ಹುಡುಗಿಯಾಗಿ ಹೋಗಿದ್ದೆ. ಆದರೆ ಬರುವಾಗ ಸಾಕಷ್ಟು ಬದಲಾಗಿದ್ದೆ, ಟೈಟ್ ಬಟ್ಟೆಗಳನ್ನು ಧರಿಸುತ್ತಿದ್ದೆ. ಮೊದಲೆರಡು ವಾರ ಅಪ್ಪನಿಗೆ ಏನು ಹೇಳಬೇಕೆಂದು ತಿಳಿಯದೆ ಗೊಂದಲದಲ್ಲಿದ್ದರು. ಆನಂತರ ಟೈಟ್ ಬಟ್ಟೆ ಧರಿಸಬೇಡ ಎಂದು ಹೇಳುತ್ತಿದ್ದರು. ಅಪ್ಪ ಮತ್ತು ನನ್ನ ನಡುವೆ ಎಷ್ಟೆ ಕಿತ್ತಾಟವಾಗುತ್ತಿದ್ದರು ಇಬ್ಬರು ಉತ್ತಮ ಸ್ನೇಹಿತರಾಗಿದ್ದೆವು" ಎಂದು ಪ್ರಿಯಾಂಕಾ ಹೇಳಿದ್ದಾರೆ.

2013ರಲ್ಲಿ ತಂದೆಯನ್ನು ಕಳೆದುಕೊಂಡ ಪ್ರಿಯಾಂಕಾ

ಪ್ರಿಯಾಂಕ್ ತಂದೆ ಅಶೋಕ್ ಚೋಪ್ರಾ ಈಗಿಲ್ಲ. 2013ರಲ್ಲಿ ಪ್ರಿಯಾಂಕಾ ತಂದೆಯನ್ನು ಕಳೆದುಕೊಂಡಿದ್ದಾರೆ. ಲಿವರ್ ಕ್ಯಾನ್ಸರ್ ನಿಂದ ಅಶೋಕ್ ಚೋಪ್ರಾ ನಿಧನರಾದರು. ಅಪ್ಪನ ಜೊತೆಗಿದ್ದ ಒಂದಿಷ್ಟು ನೆನಪುಗಳನ್ನು ಪ್ರಿಯಾಂಕಾ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

More from Filmibeat

English summary
Bollywood Actress Priyanka Copra father banned her tight cloths as a teenager.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X