'ನನ್ನೊಂದಿಗೆ ರಾತ್ರಿ ಇರು' ಎಂದ ನಿರ್ಮಾಪಕನ ಅಸಲಿ ಮುಖ ಬಿಚ್ಚಿಟ್ಟ ನೀನಾ ಗುಪ್ತಾ

ಹಿಂದಿ ಚಿತ್ರರಂಗ ಖ್ಯಾತ ನಟಿ ಮತ್ತು ನಿರ್ದೇಶಕಿ ನೀನಾ ಗುಪ್ತಾ ಬರೆದಿರುವ 'ಸಚ್ ಕಹುನ್ ತೋಹ್' ಪುಸ್ತಕ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ತಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ಕುರಿತು ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ನಟಿ ನೀನಾ ಗುಪ್ತಾ ತನ್ನ ಪುಸ್ತಕದಲ್ಲಿ ಕಾಸ್ಟಿಂಗ್ ಕೌಚ್ ಕುರಿತು ಉಲ್ಲೇಖಿಸಿದ್ದಾರೆ. ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇರುವುದು ನಿಜ ಎಂದು ಹೇಳಿರುವ ನಟಿ ತಮಗಾದ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ.

ಸಿನಿಮಾ ಜೀವನದಲ್ಲಿ ಇನ್ನು ಆರಂಭಿಕ ಹಂತದಲ್ಲಿದ್ದ ಸಮಯದಲ್ಲಿ ನಿರ್ಮಾಪಕರೊಬ್ಬರು ಅವಕಾಶ ಕೊಡುವುದಾಗಿ ಕರೆದು ಕೆಟ್ಟದಾಗಿ ಆಫರ್ ಮಾಡಿದ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

ಚರ್ಚಿಸಲು ಹೋಟೆಲ್‌ಗೆ ಹೋದೆ

ಚರ್ಚಿಸಲು ಹೋಟೆಲ್‌ಗೆ ಹೋದೆ

ದಕ್ಷಿಣ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ನಿರ್ಮಾಪಕರೊಬ್ಬರನ್ನು ಭೇಟಿ ಮಾಡಲು ಸ್ನೇಹಿತೆ ಸೂಚಿಸಿದಳು. ಸ್ಟಾರ್ ಹೋಟೆಲ್‌ವೊಂದರಲ್ಲಿ ತಂಗಿದ್ದ ನಿರ್ಮಾಪಕನನ್ನು ಭೇಟಿ ಮಾಡಲು ನಾನು ಹೋದೆ. ಹೋಟೆಲ್‌ ಲಾಬಿಗೆ ಹೋಗಿ ಫೋನ್ ಮಾಡಿದೆ. ಆತ ''ನಿಮ್ಮನ್ನೇ ಕಾಯ್ತಿದ್ದೆ, ಮಹಡಿಗೆ ಬನ್ನಿ'' ಎಂದು ಹೇಳಿದೆ. ನಾನು ಆ ನಿರ್ಮಾಪಕ ಇದ್ದಲ್ಲಿಗೆ ಹೋದೆ.

ನನ್ನ ಪಾತ್ರವೇನು ಸರ್?

ನನ್ನ ಪಾತ್ರವೇನು ಸರ್?

ನಿರ್ಮಾಪಕನನ್ನು ಭೇಟಿ ಮಾಡಿದ ನಾನು ''ಸರ್ ನನ್ನ ಪಾತ್ರವೇನು?'' ಎಂದು ಕೇಳಿದೆ. ಅದಕ್ಕೆ ಅವರು ''ನಾಯಕಿಯ ಸ್ನೇಹಿತೆ'' ಎಂದು ಹೇಳಿ ವಿವರಿಸಿದರು. ಅದನ್ನು ಕೇಳಿದ ನನಗೆ ಈ ಪಾತ್ರ ಬಹಳ ಸಣ್ಣದು ಅನಿಸಿತು. ''ಸರಿ, ನಾನು ಹೋಗ್ತೇನೆ ಸರ್, ನನ್ನ ಸ್ನೇಹಿತರು ಕಾಯ್ತಿದ್ದಾರೆ'' ಅಂದೆ. ಈ ಮಾತು ಕೇಳಿ ಆತ ಒಂದು ಕ್ಷಣ ಆಘಾತವಾದಂತೆ ನೋಡಿದೆ.

ಈ ರಾತ್ರಿ ಇಲ್ಲಿ ಇರಲ್ವೇ ಎಂದ ನಿರ್ಮಾಪಕ

ಈ ರಾತ್ರಿ ಇಲ್ಲಿ ಇರಲ್ವೇ ಎಂದ ನಿರ್ಮಾಪಕ

ನಾನು ಹೋಗ್ತೀನಿ ಸರ್ ಎಂದ ತಕ್ಷಣ ಆತ ಗಾಬರಿಯಾಗಿ ನೋಡತೊಡಗಿದ. 'ಹೇ ಹೋಗ್ತೀರಾ, ಹಾಗಾದ್ರೆ ನೀವು ಈ ರಾತ್ರಿ ಇಲ್ಲಿ ಇರಲ್ವಾ''? ಎಂದು ಪ್ರಶ್ನಿಸಿದ. ಇದನ್ನು ಕೇಳಿ ನನಗೆ ಇದ್ದಕ್ಕಿದ್ದಂತೆ ನನ್ನ ತಲೆ ಮೇಲೆ ಒಂದು ಬಕೆಟ್ ಐಸ್ ನೀರು ಹಾಕಿದ್ರಾ ಎಂದೆನಿಸಿತು ಎಂದು ಘಟನೆಯನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ. ''ಆಮೇಲೆ ಆ ನಿರ್ಮಾಪಕ ನನ್ನನ್ನು ಒತ್ತಾಯಿಸಿಲ್ಲ, ನಾನು ಅಲ್ಲಿಂದ ಬೇಗ ಬಂದು ಬಿಟ್ಟೆ'' ಎಂದು ತಿಳಿಸಿದ್ದಾರೆ.

Recommended Video

ಸಂಚಾರಿ ವಿಜಯ್ ಹೆಸರಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಚಕ್ರವರ್ತಿ ಚಂದ್ರಚೂಡ್ | Filmibeat Kannada
ರಾಷ್ಟ್ರ ಪ್ರಶಸ್ತಿ ಪಡೆದ ನಟಿ

ರಾಷ್ಟ್ರ ಪ್ರಶಸ್ತಿ ಪಡೆದ ನಟಿ

ನೀನಾ ಗುಪ್ತಾ 1994ರಲ್ಲಿ ತೆರೆಕಂಡಿದ್ದ 'ವಾಹ್ ಚೋಕ್ರಿ' ಸಿನಿಮಾದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2021ರಲ್ಲಿ ನೆಟ್‌ಫ್ಲಿಕ್ಸ್‌ಲ್ಲಿ ಬಿಡುಗಡೆಯಾದ 'ಸರ್ದಾರ್ ಕಾ ಗ್ರ್ಯಾಂಡ್‌ಸನ್' ಸಿನಿಮಾದಲ್ಲಿ ನಟಿಸಿದ್ದರು. ರಣ್ವೀರ್ ಸಿಂಗ್ ನಟನೆಯ '83' ಚಿತ್ರದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
One of the south industry producer asked to Neena Gupta to spend night with him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X