»   » 'ಅನಾರ್ಕಲಿ ಆಫ್ ಆರಾ' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಕರಣ್ ಜೋಹರ್

'ಅನಾರ್ಕಲಿ ಆಫ್ ಆರಾ' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಕರಣ್ ಜೋಹರ್

Posted By:
Subscribe to Filmibeat Kannada

ಬಿಹಾರದ ಆರಾ ನಗರದ ಗಾಯಕಿ ಮತ್ತು ಡ್ಯಾನ್ಸರ್ ಆಗಿದ್ದ ಯುವತಿಯೊಬ್ಬಳ ಬದುಕಿನ ಕಥೆಯನ್ನಾಧರಿಸಿ ಮೂಡಿಬರುತ್ತಿರುವ ಬಾಲಿವುಡ್ ಸಿನಿಮಾ 'ಅನಾರ್ಕಲಿ ಆಫ್ ಆರಾ' ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.

Producer Karan Johar unveils first poster of Swara Bhaskar’s Anaarkali of Aarah

'ಅನಾರ್ಕಲಿ ಆಫ್ ಆರಾ' ಸಿನಿಮಾದ ಎರಡು ಪೋಸ್ಟರ್ ಗಳನ್ನು ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಬಿಡುಗಡೆ ಮಾಡಿದ್ದು, ಸಖತ್ ಕಲರ್ ಫುಲ್ ಆಗಿರುವ ಪೋಸ್ಟರ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಸ್ವರಾ ಬಾಸ್ಕರ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ಅವಿನಾಶ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ನಾಯಕ ನಟಿ ಸ್ವರಾ ಭಾಸ್ಕರ್ ಲೆಹೆಂಗಾ ಚೋಲಿ ಧರಿಸಿ ಸೊಂಟ ಬಳುಕಿಸಿರುವ ಮತ್ತು ಸೈಕಲ್ ಮೇಲೆ ಕುಳಿತಿರುವ ಎರಡು ಕಲರ್ ಫುಲ್ ಪೋಸ್ಟರ್ ಗಳು ಸಿನಿ ಪ್ರಿಯರ ಗಮನ ಸೆಳೆದಿವೆ. ಅಲ್ಲದೇ ಚಿತ್ರತಂಡ ಬಿಹಾರದ ಆರಾ ನಗರದ ಗಾಯಕಿ ಮತ್ತು ಡ್ಯಾನ್ಸರ್ ಆಗಿದ್ದ ಯುವತಿಯೊಬ್ಬಳ ಕಥೆಯನ್ನು ಬಿಂಬಿಸುವ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ.

'ಅನಾರ್ಕಲಿ ಆಫ್ ಆರಾ' ಚಿತ್ರದಲ್ಲಿ ಸ್ವರಾ ಭಾಸ್ಕರ್ ಅಲ್ಲದೇ ಸಂಜಯ್ ಮಿಶ್ರ, ಪಂಕಜ್ ತ್ರಿಪಥಿ ಅಭಿನಯಿಸಿದ್ದಾರೆ. ಚಿತ್ರ ಮಾರ್ಚ್ 24 ರಂದು ತೆರೆ ಮೇಲೆ ಬರುತ್ತಿದೆ. ಚಿತ್ರದ ಟೀಸರ್ ನೋಡಲು ಕ್ಲಿಕ್ ಮಾಡಿ

English summary
Filmmakker Karan Johar revealed the colourful posters of Swara Bhaskar’s 'Anaarkali of Aarah' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada