13 ಕೋಟಿ ವಂಚನೆ: ಸಿನಿಮಾ ನಿರ್ಮಾಪಕನ ಬಂಧನ
ಮುಂಬೈನ ಹಣಕಾಸು ಅಪರಾಧ ತನಿಖೆ ವಿಭಾಗದ ಪೊಲೀಸರು ಸಿನಿಮಾ ನಿರ್ಮಾಪಕ ಪರಾಗ್ ಸಾಂಘ್ವಿ ಅನ್ನು ಬಂಧಿಸಿದ್ದಾರೆ.
ಸೋಮವಾರ ನಿರ್ಮಾಪಕ ಪರಾಗ್ ಸಾಂಘ್ವಿಯನ್ನು ಬಂಧಿಸಲಾಗಿದ್ದು, 13.74 ಕೋಟಿ ರುಪಾಯಿ ವಂಚನೆ ಹಾಗೂ ಸುಳ್ಳು ದಾಖಲೆ ಸೃಷ್ಟಿ ಮಾಡಿದ ಆರೋಪ ಈ ನಿರ್ಮಾಪಕನ ಮೇಲಿದೆ.
ಮುಂಬೈನ ದುಬಾರಿ ಪ್ರದೇಶ ಬಾಂದ್ರಾನಲ್ಲಿ ಮೂರು ಫ್ಲ್ಯಾಟ್‌ಗಳನ್ನು ಅಕ್ರಮವಾಗಿ ಪರಾಗ್ ಸಾಂಘ್ವಿ ಮಾರಾಟ ಮಾಡಿದ್ದಾನೆ ಎಂದು ಮುಂಬೈ ಪೊಲೀಸರ ಬಳಿ ದೂರು ದಾಖಲಾಗಿದೆ.

ವ್ಯಕ್ತಿಯೊಬ್ಬರು ಖಾಸಗಿ ಸಂಸ್ಥೆಯೊಂದರಿಂದ 2013 ರಲ್ಲಿ ಮೂರು ಫ್ಲ್ಯಾಟ್‌ಗಳನ್ನು ಖರೀದಿಸಿದ್ದರು. ಅದರಲ್ಲಿ ಒಂದನ್ನು ಪರಾಗ್ ನಿರ್ದೇಶಕರಾಗಿರುವ ಅಲುಂಬ್ರಾ ಎಂಟರ್ಟೈನ್‌ಮೆಂಟ್ ಸಂಸ್ಥೆಗೆ ನೀಡಲಾಗಿತ್ತು. ಆ ಫ್ಲ್ಯಾಟ್ ಸೇರಿದಂತೆ ಇನ್ನೂ ಎರಡು ಫ್ಲ್ಯಾಟ್‌ಗಳನ್ನು ನಿರ್ಮಾಪಕ ಪರಾಗ್ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ 13.74 ಕೋಟಿಗೆ ಮಾರಾಟ ಮಾಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪರಾಗ್ ಸಾಂಘ್ವಿ ಬಾಲಿವುಡ್‌ನಲ್ಲಿ ಕೆಲವು ಸಿನಿಮಾಗಳ ನಿರ್ಮಾಣ ಹಾಗೂ ಹಲವು ಸಿನಿಮಾಗಳ ವಿತರಣೆ ಕಾರ್ಯ ಮಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಅಟ್ಯಾಕ್ 26/11', 'ಪಾರ್ಟನ್', 'ಭೂತ್ ರಿಟರ್ನ್ಸ್' ಅಂಥಹಾ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











