twitter
    For Quick Alerts
    ALLOW NOTIFICATIONS  
    For Daily Alerts

    'ಆರ್ಟಿಕಲ್-370' ಶೀರ್ಷಿಕೆಗೆ ನಿರ್ಮಾಪಕರಿಂದ ಭಾರಿ ಬೇಡಿಕೆ

    |

    ಸಿನಿಮಾ ಅಂದ್ರೆನೇ ಹೀಗೆ......ಸಮಾಜದಲ್ಲಿ ಏನೇ ವಿವಾದ, ವಿಶೇಷತೆ, ಬೆಳವಣಿಗೆ, ಬದಲಾವಣೆ ಆದರೂ ಅದರ ಮೇಲೊಂದು ಕಣ್ಣಿಟ್ಟಿರುತ್ತೆ. ಸಿನಿಮಾ ಮಾಡಬಹುದಾ ಎಂದು ಯೋಚಿಸಿ ಫಟ್ ಅಂತ ಟೈಟಲ್ ರಿಜಿಸ್ಟಾರ್ ಮಾಡಿಬಿಡ್ತಾರೆ.

    ಇದೀಗ, ಆರ್ಟಿಕಲ್ 370 ಸರದಿ. ಹೌದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, 370ನೇ ವಿಧಿ (ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ) ರದ್ದುಗೊಳಿಸಿದ ಬೆನ್ನಲ್ಲೆ ಈಗ ಬಾಲಿವುಡ್ ಮಂದಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

    'ಆರ್ಟಿಕಲ್ 370' ಟೈಟಲ್ ರಿಜಿಸ್ಟಾರ್ ಮಾಡಿಸಲು ತಾ ಮುಂದು, ನಾ ಮುಂದು ಎಂದು ಮುಗಿಬಿದ್ದಿದ್ದಾರಂತೆ. ಇದರ ಜೊತೆಗೆ 'ಕಾಶ್ಮೀರ ಹಮಾರ', 'ಧರ 370' ಹೀಗೆ ಹಲವು ವಿಧದಲ್ಲಿ ಟೈಟಲ್ ರಿಜಿಸ್ಟಾರ್ ಮಾಡಿಸಲು ಪ್ರಯತ್ನಿಸುತ್ತಿದ್ದಾರಂತೆ.

    Producer Ready To Make Movie Based On Article 370

    ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?

    ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್ (ಐಎಂಪಿಪಿಎ), ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಇಂಡಿಯನ್ ಫಿಲ್ಮ್ ಟಿವಿ ಪ್ರೊಡ್ಯೂಸರ್ಸ್ ಕೌನ್ಸಿಲ್ (ಐಎಫ್ ‌ಟಿಪಿಸಿ)ಗಳಲ್ಲಿ ಇದುವರೆಗೂ ಸುಮಾರು 50ಕ್ಕೂ ಅಧಿಕ ಟೈಟಲ್ ನೋಂದಣಿ ಆಗಿದೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

    ಕಲಂ 370 ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಮೊದಲ ಅರ್ಜಿ

    'ಉರಿ' ಸಿನಿಮಾ ಬಹುದೊಡ್ಡ ಯಶಸ್ಸು ಕಂಡ ನಂತರ ಈಗ ಅಂತಹದ್ದೇ ಚಿತ್ರಗಳ ಮೇಲೆ ಬಾಲಿವುಡ್ ನಿರ್ಮಾಪಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಪುಲ್ವಾಮಾ ದಾಳಿ ಬಳಿಕ ನಡೆದ ಬಾಲ್ ಕೋಟ್ ಏರ್ ಸ್ಟ್ರೈಕ್ ಘಟನೆಯನ್ನು ಸಿನಿಮಾ ಮಾಡಲು ನಿರ್ಮಾಪಕರು ಆಸಕ್ತಿ ತೋರಿದ್ದರು.

    ಜಮ್ಮು ಮತ್ತು ಕಾಶ್ಮೀರ ನಿವಾಸಿಗಳ ವಿಶೇಷಾಧಿಕಾರ ಕಲಂ 35ಎ ಎಂದರೇನು?

    ಆಗಲೂ ಹಲವು ಬಗೆಯ ಟೈಟಲ್ ಗಳನ್ನ ರಿಜಿಸ್ಟಾರ್ ಮಾಡಿಸಿದ್ದರು. ಸರ್ಜಿಕಲ್ ಸ್ಟ್ರೈಕ್ 2, ಏರ್ ಸ್ಟ್ರೈಕ್, ಬಾಲ್ ಕೋಟ್ ಅಟ್ಯಾಕ್, ಡೆಡ್ಲಿ ಅಟ್ಯಾಕ್, ಪುಲ್ವಾಮಾ ಅಟ್ಯಾಕ್ ಹೀಗೆ ಹಲವು ಶೀರ್ಷಿಕೆಗಳು ನೋಂದಣಿ ಆಗಿದ್ದವು. ಈಗ, 370ನೇ ವಿಧಿ ರದ್ದು ಆಗುತ್ತಿದ್ದಂತೆ ಇದರ ಬಗ್ಗೆಯೂ ಸಿನಿಮಾ ಮಾಡಲು ಚಿಂತನೆಗಳು ನಡೆಯುತ್ತಿದೆ.

    English summary
    Bollywood producer showing interest to make movie based on article 370. already title register process also going very fast.
    Wednesday, August 7, 2019, 20:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X