ಶಾಕಿಂಗ್; ಹೀರೊ ಹಾಗೂ ಆತನ ತಂದೆಯನ್ನು ನಡುರಸ್ತೆಯಲ್ಲಿ ಹೊಡೆದು ಸಾಯಿಸಿಬಿಟ್ರು!
ನೆರೆಯ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾತ್ಮಕ ಪ್ರತಿಭಟನೆ ಹೆಚ್ಚಾಗಿ ತಮ್ಮ ಸರ್ಕಾರ ಪತನದ ಬಳಿಕ ದೇಶ ತೊರೆದಿರುವ ಶೇಖ್ ಹಸೀನಾ ಭಾರತಕ್ಕೆ ಬಂದಿದ್ದಾರೆ. ಸರ್ಕಾರಿ ಹುದ್ದೆಗಳಲ್ಲಿ ಮೀಸಲು ಕಡಿತಕ್ಕೆ ಆಗ್ರಹಿಸಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆದು ನೂರಾರು ಜನ ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳ ದಂಗೆಯಿಂದ ಬಾಂಗ್ಲಾದೇಶ ನಲುಗಿ ಹೋಗಿದೆ. ಪರಸ್ಥಿತಿಯನ್ನು ಹತೋಟಿಗೆ ತರಲು ಸೇನೆ ನಿರಂತಹ ಶ್ರಮ ವಹಿಸಿದೆ. ಇದೇ ಪ್ರತಿಭಟನೆಯಲ್ಲಿ ಬಾಂಗ್ಲಾದೇಶದ ಚಿತ್ರ ನಿರ್ಮಾಪಕ ಸಲೀಂ ಖಾನ್ ಹಾಗೂ ಆತನ ಮಗ ಹೀರೊ ಶಾಂತೋ ಖಾನ್‌ನನ್ನು ಪ್ರತಿಭಟನಾಕಾರನ್ನು ಹೊಡೆದು ಕೊಂದಿದ್ದಾರೆ. ಚಿತ್ರ ಚಿತ್ರರಂಗಕ್ಕೆ ಆಘಾತ ತಂದಿದೆ.

ಬಾಂಗ್ಲಾ ಚಿತ್ರರಂಗದಲ್ಲಿ ಸಲೀಂ ಖಾನ್ ಒಂದಷ್ಟು ಸಿನಿಮಾಗಳನ್ನು ನಿರ್ಮಿಸಿದ್ದರು. ಅವರ ಮಗ ಶಾಂತೋ ಖಾನ್ ಹೀರೊ ಆಗಿ ಗುರ್ತಿಸಿಕೊಂಡಿದ್ದರು. ಕೊಲ್ಕತ್ತಾ ಚಿತ್ರರಂಗ ಕೂಡ ನೆರೆಯ ರಾಷ್ಟ್ರದ ಚಿತ್ರ ನಿರ್ಮಾಪಕ ಹಾಗೂ ನಟನ ಹತ್ಯೆಗೆ ದಿಗ್ಭ್ರಮೆ ವ್ಯಕ್ತಪಡಿಸಿದೆ. ಕೊಲ್ಕತ್ತಾ ನಟ ರಾಜತಬಾ ದತ್ತಾ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಶಾಂತೋ ಖಾನ್ ನಟನೆಯ 'ಬಿಕ್ಖೋವ್' ಎನ್ನುವ ಚಿತ್ರದಲ್ಲಿ ರಾಜತಬಾ ದತ್ತಾ ಸಹ ನಟಿಸಿದ್ದರು. ಅದನ್ನು ಅವರು ನೆನಪಿಸಿಕೊಂಡಿದ್ದಾರೆ. ಆ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನನ್ನನ್ನು ಬಹಳ ಚೆನ್ನಾಗಿ ನಡೆಸಿಕೊಂಡಿದ್ದರು ಎಂದಿದ್ದಾರೆ. ನನಗೆ ಈ ಸುದ್ದಿ ಕೇಳಿ ಆಘಾತವಾಯಿತು. ನಿಜಕ್ಕೂ ಅವರ ಸಾವಿಗೆ ಕಾರಣ ಏನು ಎನ್ನುವುದು ಗೊತ್ತಿಲ್ಲ. ಆದರೆ ಅವರ ಸಾವು ನನಗೆ ನೋವು ತಂದಿದೆ. ಕಲಾವಿದರಾಗಿ ನಾವು ಸದಾ ಶಾಂತಿ, ಸೌಹಾರ್ದತೆ, ಹಾಗೂ ಸಹೋದರತೆಯನ್ನು ಬಯಸುತ್ತೇವೆ" ಎಂದಿದ್ದಾರೆ.
ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರ ದಂಗೆಯನ್ನು ನಿಯಂತ್ರಿಸಲು ಸೇನೆ ಹಾಗೂ ಪೊಲೀಸರು ವಿಫಲವಾಗಿದ್ದರು. ಸೋಮವಾರ(ಆಗಸ್ಟ್ 5) ಬಾಂಗ್ಲಾದೇಶದ ಚಾಂದ್‌ಪುರ ಉಪ ಜಿಲ್ಲೆ ಪ್ರದೇಶದ ಬಜಾರ್‌ನಲ್ಲಿ ಜನ ಕಟ್ಟಿಗೆಗಳಿಂದ ಸಲೀಂ ಖಾನ್ ಹಾಗೂ ಮಗ ಶಾಂತೋ ಖಾನ್‌ನನ್ನು ಹೊಡೆದು ಕೊಂದಿದ್ದಾರೆ.
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪರಾರಿಯಾದ ಬೆನ್ನಲ್ಲೇ ಸಲೀಂ ಖಾನ್ ಹಾಗೂ ಶಾಂತೋ ಖಾನ್ ಓಡಿ ಹೋಗಲು ಯತ್ನಿಸಿದ್ದಾರೆ. ಫರೂಕಾಬಾದ್ ಮಾರ್ಕೆಟ್‌ನಲ್ಲಿ ಅವರನ್ನು ಜನ ಗುರ್ತಿಸಿ ಕೊಲ್ಲಲು ಮುಂದಾಗಿದ್ದಾರೆ. ಆಗ ಬಂದೂಕು ತೋರಿಸಿ ಬಚಾವಾಗಿದ್ದರು. ಆದರೆ ಅಲ್ಲಿಂದ ಮುಂದೆ ಬಂದಾಗ ಮತ್ತೊಂದು ಗುಂಪು ಅಡ್ಡಗಟ್ಟಿ ಹೊಡೆದಿದೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ "ಸಲೀಂ ಖಾನ್ ಹಾಗೂ ಶಾಂತೋ ಖಾನ್ ಸಾವಿನ ಸುದ್ದಿ ತಿಳಿಯಿತು. ನಮ್ಮ ಜೀವದ ಮೇಲಿನ ಕಾಳಜಿಯಿಂದ ನಾವು ರಕ್ಷಣೆಗೆ ಹೋಗಲು ಸಾಧ್ಯವಾಗಲಿಲ್ಲ" ಎಂದಿರುವುದಾಗಿ ವರದಿಯಾಗಿದೆ.


Click it and Unblock the Notifications











