ಸ್ಮೃತಿ ಮಂಧಾನ ಮೊದಲು ಮತ್ತೊಬ್ಬ ಚೆಲುವೆಗೂ ಮೋಸ ಮಾಡಿದ್ದ ಪಲಾಶ್ ಮುಚ್ಚಲ್ ? ಯಾರಿದು ಬಿರ್ವಾ ಶಾ..?
ಪ್ರೀತಿ-ಪ್ರೇಮ ಇದ್ದಲ್ಲಿ ವಿರಹ ಮತ್ತು ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕಥೆಯೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರೇಮ ಕಥೆ ಮತ್ತು ವ್ಯಥೆಗಳನ್ನು ನಮ್ಮ ಸುತ್ತ ಮುತ್ತ ನಾವು ಮತ್ತು ನೀವು ದಿನನಿತ್ಯ ಕೇಳುತ್ತಾನೆ ಇರುತ್ತೇವೆ. ಇನ್ನೂ.. ಬಣ್ಣದ ಬದುಕಿನಲ್ಲಿ ಬಹುತೇಕರಿಗೆ ಗೊತ್ತಿರುವಂತೆ ಲವ್ ಮತ್ತು ದೋಖಾ ತುಂಬಾ ಮಾಮೂಲು. ಇದೇ ಬಣ್ಣದ ಪ್ರಪಂಚದಿಂದ..
ಬಂದಿರುವ ನಿರ್ದೇಶಕ ಕಂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಆರ್ ಸಿಬಿ ಕ್ಯಾಪ್ಟನ್ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ಸ್ಮ್ರತಿ ಮಂಧಾನಗೆ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದರಾ ಗೊತ್ತಿಲ್ಲ.

ಆದರೆ .. ಪಲಾಶ್ ಮುಚ್ಚಲ್ ಸುತ್ತ ಮುತ್ತ ಅನುಮಾನದ ಹುತ್ತವಂತೂ ಸದ್ಯ ಇದೆ. ಹೀಗಿರುವಾಗ ಇದೀಗ ಪಲಾಶ್ ಮುಚ್ಚಲ್‌ಗೆ ಮಂಡಿಯೂರಿ ಪ್ರಪೋಸ್ ಮಾಡುವುದು ಆ ನಂತರ ಅದೇ ಪ್ರೀತಿಯನ್ನು ಒದ್ದು ಹೊರ ನಡೆಯುವುದು ಹೊಸದೇನಲ್ಲ ಎನ್ನುವ ಚರ್ಚೆಯನ್ನು ಸದ್ಯ ಸಾಕ್ಷಿ ಸಮೇತ ಹಲವರು ಸೋಶಿಯಲ್ ಮೀಡಿಯಾದಲ್ಲಿ ಮಾಡಲು ಶುರು ಮಾಡಿದ್ದಾರೆ.
ಹೌದು, ಅಸಲಿಗೆ ಸ್ಮೃತಿ ಮಂಧಾನ ಅವರ ಹಿಂದೆ ಬೀಳುವುದಕ್ಕಿಂತ ಮೊದಲು ಪಲಾಶ್ ಮುಚ್ಚಲ್‌ಗೆ ಜೈಹಿಂದ್ ಕಾಲೇಜ್‌ನ ವಿದ್ಯಾರ್ಥಿಯಾಗಿದ್ದ ಬಿರ್ವಾ ಶಾ ಅವರ ಮೇಲೆ ಪ್ರೇಮಾಂಕುರವಾಗಿತ್ತು. 2017ರ ಆಚೀಚೆ ಪಲಾಶ್ ಮುಚ್ಚಲ್ ಮತ್ತು ಬಿರ್ವಾ ಶಾ ಸ್ನೇಹಿತರೊಬ್ಬರ ಸಹಾಯದಿಂದ ಮೊದಲ ಬಾರಿ ಭೇಟಿಯಾಗಿದ್ದರು.
ಆ ನಂತರ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು. 2017ರಲ್ಲಿ ಮೊನ್ನೆಯ ದಿವಸ ಸ್ಮೃತಿ ಮಂಧಾನಗೆ ಮೈದಾನದಲ್ಲಿ ಪ್ರಪೋಸ್ ಮಾಡಿದಂತೆ ಬಿರ್ವಾ ಶಾ ಅವರ ಎದುರು ಪಲಾಶ್ ಮುಚ್ಚಲ್ ಮಂಡಿಯೂರಿದ್ದರು. ಸಿನಿಮಾ ಶೈಲಿಯಲ್ಲಿ ಪ್ರಪೋಸ್ ಮಾಡಿದ್ದರು.
ಆದರೆ.. ಆ ನಂತರ ಅದೇನಾಯ್ತು ಗೊತ್ತಿಲ್ಲ. ಅದೇ ವರ್ಷ 2017ರಲ್ಲಿ ಈ ಸಂಬಂಧ ಮುರಿದು ಬಿತ್ತು. ಹೀಗೆ ಒಂಟಿಯಾಗಿದ್ದ ಪಲಾಶ್ ಮುಚ್ಚಲ್ ಬದುಕಿನಲ್ಲಿ 2019ರಲ್ಲಿ ಬಂದಿದ್ದೇ ಸ್ಮೃತಿ ಮಂಧಾನ. ಸದ್ಯ ಹಲವರು ಬಿರ್ವಾ ಶಾಗೆ ಪಲಾಶ್ ಮುಚ್ಚಲ್ ಪ್ರಪೋಸ್ ಮಾಡಿದ್ದ ಫೋಟೊಗಳನ್ನು ಹೆಕ್ಕಿ ತೆಗೆದಿದ್ದಾರೆ. ಬಿರ್ವಾ ಶಾ ಮತ್ತು ಸ್ಮೃತಿ ಮಂಧಾನ ಅವರ ಫೋಟೊಗಳನ್ನು ಹೋಲಿಕೆ ಮಾಡುತ್ತಾ ಮಂಡಿಯೂರಿ ಪಲಾಶ್ ಇಬ್ಬರಿಗೂ ಮೋಸ ಮಾಡಿದ್ದಾರೆ ಎಂದು ಚರ್ಚೆ ಮಾಡುತ್ತಿದ್ದಾರೆ.

ಭಾವನಾತ್ಮಕವಾದ ಸನ್ನಿವೇಶ.. ರೊಮ್ಯಾಂಟಿಕ್ ವಾತಾವರಣ.. ಆದರೂ ಕೂಡ ಪಲಾಶ್ ಮತ್ತು ಬಿರ್ವಾ ಶಾ ಅವರ ಸಂಬಂಧ ಮುರಿದು ಬಿದ್ದಿದ್ದೇಕೆ..? ಎಂಬ ಪ್ರಶ್ನೆಗೆ ಸದ್ಯ ಉತ್ತರ ಹುಡುಕುತ್ತಿರುವ ಹಲವರು ಇಷ್ಟೆಲ್ಲಾ ಆದ ನಂತರವೂ ಪಲಾಶ್ ಮುಚ್ಚಲ್ ಜೊತೆ ಸ್ಮೃತಿ ಮಂಧಾನ ಸಪ್ತಪದಿ ತುಳಿಯುವುದು ಅನುಮಾನ, ಮದುವೆ ಮುರಿದು ಬಿದ್ದಂತೆಯೇ ಎಂಬ ಅಭಿಪ್ರಾಯವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ದಾರೆ. ಬಿರ್ವಾ ಶಾ ಅವರಿಗೂ ಪಲಾಶ್ ಮುಚ್ಚಲ್ ಮೋಸ ಮಾಡಿದ್ದಾರೆ ಅದ್ರಂತೆ ಸ್ಮೃತಿ ಮಂಧಾನಗೆ ಕೂಡ ಮೋಸ ಮಾಡಿದ್ದಾರೆ ಎಂಬ ಮಾತುಗಳನ್ನಾಡುತ್ತಿದ್ದಾರೆ.
ಒಟ್ನಲ್ಲಿ ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ ಅವರ ಮದುವೆ ಸದ್ಯದ ಹಲವರ ಬಾಯಿಗೆ ಆಹಾರವಾಗಿದೆ.ಏಕಾಏಕಿ ಈ ವಿವಾದ ಭುಗಿಲೆದ್ದಿದ್ದೇಕೆ..? ಇನ್‌ಸ್ಟಾಗ್ರಾಮ್‌ನಲ್ಲಿ ಪಲಾಶ್ ಮುಚ್ಚಲ್ ತಮ್ಮ ಜೊತೆ ಆಡಿದ ಮಾತುಕತೆಯ ಸ್ಕ್ರೀನ್ ಶಾಟ್‌ಗಳನ್ನು ಮೇರಿ ಡಿಕೋಸ್ಟಾ ಮದುವೆಯ ಸಮಯದಲ್ಲಿ ಹಂಚಿಕೊಂಡಿದ್ದೇಕೆ..? ಎಂಬ ಪ್ರಶ್ನೆಗಳು ಕೂಡ ಹಲವರನ್ನು ಕಾಡುತ್ತಿವೆ.
ಯಾರದ್ದು ಸರಿ.. ಯಾರದ್ದು ತಪ್ಪು.. ಮುಂದೇನು..? ಎಂಬ ಚರ್ಚೆಗೆ ಈ ಎಲ್ಲ ಘಟನಾವಳಿಗಳು ನಾಂದಿ ಹಾಡಿವೆ. ಸೋಶಿಯಲ್ ಮೀಡಿಯಾ ಸ್ಕ್ರೀನ್‌ಶಾಟ್‌ಗಳಿಂದ.. ಥಿಯರಿಗಳಿಂದ.. ಮತ್ತು ಮೀಮ್‌ಗಳಿಂದ ತುಂಬಿ ತುಳುಕುತ್ತಿದೆ. ಈ ಕಥೆಯ ಕ್ಲೈಮ್ಯಾಕ್ಸ್ ಹಲವರಲ್ಲಿ ಕುತೂಹಲ ಕೆರಳಿಸಿದೆ.


Click it and Unblock the Notifications











