ಸೆಲ್ಫಿ ನೆಪದಲ್ಲಿ ನಡುರಸ್ತೆಯಲ್ಲಿ ನಟಿಗೆ ಕಿಸ್ ಕೊಡಲು ಮುಂದಾದ ಅಭಿಮಾನಿ, ಬೆಚ್ಚಿ ಬಿದ್ದ ಚೆಲುವೆ..!

ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪೂನಂ ಪಾಂಡೆಗಾದ ಅನುಭವ ಸದ್ಯದ ಉದಾಹರಣೆ.

ಹೌದು, ಪ್ರಚಾರ ಪಡೆಯಲು ಏನು ಬೇಕಾದರೂ ಮಾಡುವವರಲ್ಲಿ ಮೊದಲಿಗರು ಪೂನಂ ಪಾಂಡೆ. ತನ್ನ ಸಾವನ್ನೇ ಪ್ರಚಾರಕ್ಕೆ ಬಂಡವಾಳ ಮಾಡಿಕೊಂಡ ಪೂನಂ ಪಾಂಡೆ ತನ್ನ ದೇಹಸಿರಿಯನ್ನ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಕೂಡ ಗಮನ ಸೆಳೆಯುವ ಪ್ರಯತ್ನ ಮಾಡ್ತಾರೆ. ಸುದ್ದಿಯಾಗ್ತಾರೆ. ಇಂಥಾ ಪೂನಂ ಪಾಂಡೆ ಮುಂಬೈನ ಬೀದಿಯಲ್ಲಿ ಸುತ್ತುವಾಗ ಅಭಿಮಾನದ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಬಲವಂತವಾಗಿ ಕಿಸ್ ಮಾಡುವ ಪ್ರಯತ್ನ ಮಾಡಿದ್ದಾನೆ.

Publicity Stunt or Harassment Fan Attempts to Kiss Poonam Pandey After Selfie Watch Video

ಕೆಂಪು ಬಣ್ಣದ ಗೌನ್ ಮತ್ತು ಬೂದು ಬಣ್ಣದ ಡೆನಿಮ್ ಜಾಕೆಟ್ ಹಾಕಿಕೊಂಡು ಪಾಪರಾಜಿಗಳಿಗೆ ಪೂನಂ ಫೋಸ್ ಕೊಡುತ್ತಿದ್ದ ಸಂದರ್ಭದಲ್ಲಿ ಬಂದ ಈ ವ್ಯಕ್ತಿ ಆರಂಭದಲ್ಲಿ ಸೆಲ್ಫಿ ಕೇಳಿದ್ದಾನೆ. ಅಭಿಮಾನಿ ಅಲ್ವಾ ಎಂದು ಪೂನಂ ನಡುವೆ ಅಂತರ ಇರಲಿ ಎಂದು ಹೇಳಿ ಸೆಲ್ಫಿ ನೀಡಲು ಮುಂದಾಗಿದ್ದಾರೆ. ಆದರೆ ಈ ಸಮಯದಲ್ಲಿ ಪೂನಂ ಪಾಂಡೆಯ ಹತ್ತಿರ ಬಂದ ವ್ಯಕ್ತಿ ಮುತ್ತು ಕೊಡುವ ಪ್ರಯತ್ನ ಮಾಡಿದ್ದಾನೆ. ವ್ಯಕ್ತಿಯ ಈ ವರ್ತನೆಯಿಂದ ಪೂನಂ ಪಾಂಡೆ ಬೆಚ್ಚಿ ಬಿದ್ದಿದ್ದಾರೆ.

ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತರಹೇವಾರಿ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಅನೇಕರು ಪ್ರಚಾರದ ಹುಚ್ಚು ಪೂನಂ ಪಾಂಡೆ ಅವರಿಂದ ಇದೆಲ್ಲ ಮಾಡಿಸುತ್ತಿದೆ ಎಂದು ಹೇಳಿದ್ದಾರೆ, ಬೇಕಂತಲೇ ಮಾಡಿರುವ ಡ್ರಾಮಾ ಇದು ಎಂದಿದ್ದಾರೆ. ಇನ್ನು ಕೆಲವರು ಇದು ಆಗಬೇಕಾಗಿದ್ದೇ ಎಂದು ಕಾಮೆಂಟ್ ಮಾಡಿದ್ದರೆ, ಮತ್ತು ಕೆಲವರು ಓವರ್ ಆಕ್ಟಿಂಗ್‌ ಮಾಡಿದ್ದಕ್ಕೆ ಪೂನಂ ಪಾಂಡೆ ಅವರ ಸಂಭಾವನೆಯಲ್ಲಿ 50 ರೂಪಾಯಿ ಕಟ್ ಮಾಡಿ ಎಂದು ಹೇಳಿದ್ದಾರೆ. ಕೆಲವರು ಕಿಸ್ ಕೊಡಲು ಬಂದ ವ್ಯಕ್ತಿಯನ್ನು ತೆಗಳಿದ್ದಾರೆ.

ಇನ್ನುಳಿದಂತೆ ಪೂನಂ ಪಾಂಡೆ ಸೆಪ್ಟೆಂಬರ್ 11, 2020ರಲ್ಲಿ ತಮ್ಮ ಬಹುಕಾಲದ ಸ್ನೇಹಿತ ಮುಂಬೈ ಮೂಲಕ ಸ್ಯಾಮ್ ಅವರ ಜೊತೆ ಮದುವೆಯಾಗಿದ್ದರು. ಸ್ಯಾಮ್ ಜೊತೆ 07 ಜನ್ಮ ಕಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಆ ನಂತರ ಕೇವಲ ಎರಡೇ ವಾರದಲ್ಲಿ ತಮ್ಮ ಗಂಡನ ವಿರುದ್ಧ ತಿರುಗಿ ಬಿದ್ದಿದ್ದರು. ಹನಿಮೂನ್‌ನಲ್ಲಿ ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೂನಂ ಆರೋಪಿಸಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.

ಒಟ್ನಲ್ಲಿ ಬಾಲಿವುಡ್‌ನಲ್ಲಿ ಪೂನಂ ಪಾಂಡೆಗೆ ಮಾಡಲು ಹೆಚ್ಚಿನ ಕೆಲಸವೇನೂ ಇಲ್ಲ. ಹೀಗಾಗಿ ಬಣ್ಣದ ಪ್ರಪಂಚದಲ್ಲಿ ಚಾಲ್ತಿಯಲ್ಲಿರಲು, ಮೊದಲಿಂದ ನಾನಾ ತರಹದ ಗಿಮಿಕ್ ಮಾಡಿಕೊಂಡೇ ಬಂದ ಪೂನಂ ಪಾಂಡೆ ಸದ್ಯಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X