ಬಾಲಿವುಡ್‌ಗೆ ನಾನು ಗುಡ್ ಬೈ ಹೇಳಿಲ್ಲ, ಅವರೇ ನನ್ನ ಹೊರ ಹಾಕಿದರು - ಕಹಿ ಸತ್ಯ ಹೇಳಿದ ಪ್ರಿಯಾಂಕ ಚೋಪ್ರಾ

ಚಿತ್ರರಂಗದಲ್ಲಿ ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ.ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಹಣದ ಮುಖ ನೋಡಿ ಹೋಗುತ್ತಾರೆ. ಎಲ್ಲವೂ ಅವರವರ ನಿರ್ಧಾರ.

ಆದರೆ, ಕೆಲ ಒಮ್ಮೆ ಸಂದರ್ಭ ಇದ್ದ ಜಾಗವನ್ನು ಬಿಡುವಂತೆ ಮಾಡುತ್ತದೆ. ಪ್ರತಿಭೆ ಇದ್ದರೂ ಅವಕಾಶಗಳು ಸಿಗದ ಹಿನ್ನೆಲೆ ಬೇರೆ ಕಡೆ ಪ್ರಯತ್ನ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಈ ಸವಾಲನ್ನು ಕೆಲವರು ಸ್ವೀಕರಿಸುತ್ತಾರೆ. ಕೆಲವರು ಸೋಲುತ್ತಾರೆ. ಇನ್ನೂ ಕೆಲವರು ಗೆಲ್ಲುತ್ತಾರೆ. ಉದಾಹರಣೆಗೆ ಪ್ರಿಯಾಂಕ ಚೋಪ್ರಾ.

Pushed Out Not Moved Priyanka Chopra Unmasks the Bollywood Politics That Forced Her to Hollywood

ಹೌದು, ಅಸಲಿಗೆ ಪ್ರಿಯಾಂಕ ಚೋಪ್ರಾ.. ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು ಹಿಂದಿ ಚಿತ್ರರಂಗದ ಮೂಲಕ ಅನ್ನುವ ಭ್ರಮೆ ಅನೇಕರಲ್ಲಿದೆ. ಆದರೆ ವಾಸ್ತವದಲ್ಲಿ ಪ್ರಿಯಾಂಕ ಚೋಪ್ರಾ ಅವರ ಬಣ್ಣ ಬಣ್ಣದ ಕನಸಿಗೆ ಮೊದಲು ರಂಗು ತುಂಬಿದ್ದು ಹಿಂದಿ ಚಿತ್ರರಂಗವಲ್ಲ ಬದಲಿಗೆ ದಕ್ಷಿಣ ಚಿತ್ರರಂಗ ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ.

ಅದು 2000ನೇ ಇಸ್ವಿ. ಪ್ರಿಯಾಂಕ ಚೋಪ್ರಾ ಆಗಷ್ಟೇ ''ಮಿಸ್ ವರ್ಲ್ಡ್'' ಪಟ್ಟವನ್ನ ಅಲಂಕರಿಸಿದ್ದರು. ಬಣ್ಣದ ಮೋಹಕ್ಕೆ ಸಿಲುಕಿ ಅವಕಾಶವನ್ನ ಎದುರು ನೋಡುತ್ತಿದ್ದರು. ಇದೇ ಸಮಯಕ್ಕೆ ಪ್ರಿಯಾಂಕಗೆ ಸಿಕ್ಕಿದ ಸಿನಿಮಾ ''ತಮಿಳನ್‌''. ಮಜಿತ್ ನಿರ್ದೇಶನದಲ್ಲಿ ಬಂದ ಈ ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ಇಳಯ ದಳಪತಿ ವಿಜಯ್ ಜೊತೆ ತೆರೆ ಹಂಚಿಕೊಂಡಿದ್ದರು ಅನ್ನುವುದು ವಿಶೇಷ.

ಈ ಚಿತ್ರದ ಫಲಿತಾಂಶ ಏನಾಯಿತು ಅನ್ನುವುದು ಬೇರೆ ವಿಚಾರವಾದರೂ, ಅವಕಾಶಗಳನ್ನು ಅರಸಿಕೊಂಡು ಪ್ರಿಯಾಂಕ ಆ ನಂತರ ಬಾಲಿವುಡ್‌ಗೆ ಬಂದರು. 2003ರಲ್ಲಿ ಸನ್ನಿ ಡಿಯೋಲ್ ಅಭಿನಯದ ''ದಿ ಹೀರೋ'' ಮೂಲಕ ಬಾಲಿವುಡ್ ಬೆಳ್ಳಿತೆರೆಯಲ್ಲಿ ಮಿಂಚಿದರು.

ಆದರೆ, ಇವರ ಅದೃಷ್ಟದ ಬಾಗಿಲು ತೆರೆದಿದ್ದು ಅಕ್ಷಯ್ ಕುಮಾರ್ ಅವರ ''ಅಂದಾಜ್'' ಚಿತ್ರದ ಮೂಲಕ. ಇಲ್ಲಿಂದಾಚೆ ಒಂದಾದ ಮೇಲೊಂದು ಚಿತ್ರ ಮಾಡಿದ ಪ್ರಿಯಾಂಕ ಚೋಪ್ರಾ 2015-16ರ ಆಸು-ಪಾಸು ಬಾಲಿವುಡ್‌ನಿಂದ ರಪಕ್ ಅಂತ ಕಣ್ಮರೆಯಾದರು. ''ಬೇವಾಚ್'' ಚಿತ್ರದೊಂದಿಗೆ ಹಾಲಿವುಡ್ ಪ್ರವೇಶಿಸಿದರು.

Pushed Out Not Moved Priyanka Chopra Unmasks the Bollywood Politics That Forced Her to Hollywood

ತನ್ನ ಸಮಕಾಲೀನರು ಬಾಲಿವುಡ್‌ನಲ್ಲಿ ನೆಲೆಯೂರಲು ನಾನಾ ರೀತಿಯ ಸರ್ಕಸ್ ಮಾಡುತ್ತಿದ್ದ ಸಮಯದಲ್ಲಿಯೇ ಪ್ರಿಯಾಂಕ ಚೋಪ್ರಾ ಹಾಲಿವುಡ್‌ನಲ್ಲಿ ತಮ್ಮ ಹೆಸರಿನ ಧ್ವಜವನ್ನು ಹಾರಿಸಿದ್ದರು. ''ಎ ಕಿಡ್ ಲೈಕ್ ಜೇಕ್'' ಸೇರಿ ನಾಲ್ಕೈದು ಚಿತ್ರಗಳಲ್ಲಿ ಮಿಂಚಿದರು.

ಸದ್ಯ ಪ್ರಿಯಾಂಕ ಚೋಪ್ರಾ ಅಭಿನಯದ ಹಾಲಿವುಡ್‌ನ ಮತ್ತೊಂದು ಸಿನಿಮಾ ''ದಿ ಬ್ಲಫ್'' ಬಿಡುಗಡೆಯಾಗಿದೆ. ಈ ಸಮಯದಲ್ಲಿ ಪ್ರಿಯಾಂಕ ಚೋಪ್ರಾ ತಮ್ಮ ಬದುಕಿನ ಪ್ರಯಾಣವನ್ನೊಮ್ಮೆ ಹಿಂದೆ ತಿರುಗಿ ನೋಡಿದ್ದಾರೆ. ಬಾಲಿವುಡ್‌ಗೆ ನಾನು ಗುಡ್ ಬೈ ಹೇಳಿಲ್ಲ ಅವರೇ ನನ್ನನ್ನೂ ಹೊರ ದಬ್ಬಿದರು ಎಂದಿದ್ದಾರೆ.

ಈ ಕುರಿತು ''ಫಸ್ಟ್‌ಪೋಸ್ಟ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ಹಿಂದಿ ಉದ್ಯಮವನ್ನು ನಾನು ಯಾವತ್ತು ತೊರೆಯಲು ಬಯಸಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ನಾನು ಬಾಲಿವುಡ್‌ನಲ್ಲಿ ಕೆಲಸ ಮಾಡುವಾಗ ನನಗೆ ಸೀಮಿತ ಅವಕಾಶಗಳಿದ್ದವು, ಒಬ್ಬ ಕಲಾವಿದೆಯಾಗಿ ನಾನು ಬೆಳೆಯಬೇಕು ಎನ್ನುವ ಆಸೆ ನನಗೆ ಇತ್ತು ಎಂದು ಹೇಳಿರುವ ಪ್ರಿಯಾಂಕ ಚೋಪ್ರಾ ಒಂದು ರೀತಿಯಲ್ಲಿ ಉತ್ತಮವಾದ ಅವಕಾಶಗಳನ್ನು ಹುಡುಕುವಂತೆ ನನ್ನನ್ನೂ ಬಾಲಿವುಡ್ ತಳ್ಳಿತು ಎಂದು ಹೇಳಿದ್ದಾರೆ.

ಸರಿಸುಮಾರು 12 ವರ್ಷ ಆಯ್ತು. ಆ ಕೆಲಸದ ವೇಗ ನನಗೆ ಈಗ ಸಿಕ್ಕಿದೆ ಎಂದು ಹೇಳಿರುವ ಪ್ರಿಯಾಂಕ ಚೋಪ್ರಾ, ನನಗೆ ನನ್ನ ಭಾರತೀಯ ಚಿತ್ರಗಳೆಂದರೆ ತುಂಬಾ ಇಷ್ಟ, ''ವಾರಣಾಸಿ'' ಚಿತ್ರದ ಮೂಲಕ ಮರಳಿ ಭಾರತೀಯ ಚಿತ್ರರಂಗಕ್ಕೆ ನಾನು ಬರುತ್ತಿರುವುದು ತುಂಬಾನೇ ಖುಷಿ ಇದೆ ಎಂದು ಹೇಳಿದ್ದಾರೆ. ಹಾಲಿವುಡ್ ಮತ್ತು ಬಾಲಿವುಡ್ ನಡುವೆ ನಾನು ಯಾವತ್ತು ಆಯ್ಕೆ ಮಾಡಿಲ್ಲ, ಎರಡರಲ್ಲಿಯೂ ನಾನು ಸಕ್ರಿಯಳಾಗಿದ್ದೇನೆ ಎಂದು ಹೇಳಿರುವ ಪ್ರಿಯಾಂಕ ಚೋಪ್ರಾ ಎರಡು ಕಡೆ ಕೆಲಸ ಮಾಡಲು ನನಗೆ ಇಷ್ಟ ಎಂದು ಹೇಳಿದ್ದಾರೆ. ಸದ್ಯ ಪ್ರಿಯಾಂಕ ಚೋಪ್ರಾ ಅವರ ಸಂದರ್ಶನದ ಈ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

More from Filmibeat

English summary
From Bollywood exile to Global Icon. Discover why Priyanka Chopra felt "limited" by industry games and how she turned a forced exit into international stardom.
Read more about: priyanka chopra hollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X