twitter
    For Quick Alerts
    ALLOW NOTIFICATIONS  
    For Daily Alerts

    ಕೊನೆ ಕ್ಷಣದಲ್ಲಿ 'ಪುಷ್ಪ'ಗೆ ಸಂಕಷ್ಟ: ಇಕ್ಕಟ್ಟಿನಲ್ಲಿ ಚಿತ್ರತಂಡ

    |

    ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ನಾಳೆ (ಡಿಸೆಂಬರ್ 17) ಬಿಡುಗಡೆ ಆಗಲಿದೆ. ಸಿನಿಮಾದ ಬಹುತೇಕ ಶೋಗಳು ಈಗಾಗಲೇ ಬುಕ್ ಆಗಿವೆ. ಆದರೆ ಈ ಕೊನೆಯ ಹಂತದಲ್ಲಿ ದೊಡ್ಡ ಇಕ್ಕಟ್ಟೊಂದ್ದಕ್ಕೆ 'ಪುಷ್ಪ' ತಂಡ ಸಿಲುಕಿಕೊಂಡಿದೆ.

    Recommended Video

    ನನ್ನನ್ನು ಕ್ಷಮಿಸಿ ಪ್ಲೀಸ್

    'ಪುಷ್ಪ' ಸಿನಿಮಾ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವುದು ಗೊತ್ತೇ ಇದೆ. 'ಪುಷ್ಪ'ದ ಹಿಂದಿ ಡಬ್ಬಿಂಗ್ ಸಿನಿಮಾ ಬಿಡುಗಡೆಗೆ ದೊಡ್ಡ ತೊಡಕೊಂದು ಎದುರಾಗಿದೆ.

    'ಪುಷ್ಪ' ಸಿನಿಮಾದ ಹಿಂದಿ ಡಬ್ಬಿಂಗ್ ಆವೃತ್ತಿ ಈವರೆಗೂ ಸೆನ್ಸಾರ್ ಆಗಿಲ್ಲ. ಇದು ಚಿತ್ರತಂಡಕ್ಕೆ ದೊಡ್ಡ ಆಘಾತ ತಂದಿದ್ದು, ಸೆನ್ಸಾರ್ ಇಲ್ಲದೆ ಬಿಡುಗಡೆ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಈ ಹಿಂದೆ ಸಿನಿಮಾದ 'ಹಿಂದಿ' ಡಬ್ಬಿಂಗ್ ವರ್ಷನ್ ಅನ್ನು ಸೆನ್ಸಾರ್‌ಗೆ ಸಲ್ಲಿಸಲಾಗಿತ್ತು. ಆದರೆ ಸಲ್ಲಿಕೆಯಾದ ಪ್ರತಿಯಲ್ಲಿ ಸಂಗೀತದ ಭಾಗ ಪೂರ್ಣವಾಗಿರಲಿಲ್ಲ. ಹಾಗಾಗಿ ಅಪೂರ್ಣ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಆಗದು ಎಂದು ಸೆನ್ಸಾರ್ ಮಂಡಳಿಯು ಸಿನಿಮಾವನ್ನು ನೋಡಲು ನಿರಾಕರಿಸಿತ್ತು. ಜೊತೆಗೆ ಸಲ್ಲಿಕೆಯಾದ ಭಾಗದಲ್ಲಿ ಸಮಂತಾರ ಐಟಂ ಹಾಡು ಇರಲಿಲ್ಲ ಎಂದೂ ಹೇಳಲಾಗಿತ್ತು.

    ಮುಂಬೈನಲ್ಲಿ ನಿರ್ದೇಶಕ ಸುಕುಮಾರ್

    ಮುಂಬೈನಲ್ಲಿ ನಿರ್ದೇಶಕ ಸುಕುಮಾರ್

    ಆ ನಂತರ ನಿರ್ದೇಶಕ ಸುಕುಮಾರ್ ಅವರು ಮುಂಬೈಗೆ ತೆರಳಿ ಸಿನಿಮಾದ ಹಿನ್ನೆಲೆ ಸಂಗೀತ, ಡಿಟಿಎಸ್ ಇನ್ನಿತರೆ ಕಾರ್ಯವನ್ನು ಪೂರ್ಣಗೊಳಿಸುವುದರಲ್ಲಿ ಮಗ್ನರಾದರು. ಕೊನೆಗೆ ಇಂದು ಸೆನ್ಸಾರ್‌ ಮಂಡಳಿಯು 'ಪುಷ್ಪ' ಸಿನಿಮಾದ ಹಿಂದಿ ಡಬ್ಬಿಂಗ್ ವರ್ಷನ್ ಅನ್ನು ನೋಡಲು ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಸೆನ್ಸಾರ್ ಮಂಡಳಿಯು ಸಿನಿಮಾಕ್ಕೆ ಕಟ್‌ಗಳನ್ನು ಸೂಚಿಸಿದರೆ ಅವನ್ನು ಜಾರಿಗೊಳಿಸಲು ಅವನ್ನು ಜಾರಿಗೊಳಿಸಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಹಿಡಿಯಬಹುದು ಎನ್ನಲಾಗುತ್ತಿದೆ.

    ಗೋಲ್ಡ್‌ಮೈನ್‌ ವಿತರಣೆ ಸಂಸ್ಥೆಗೆ ಮಾರಾಟ ಮಾಡಲಾಗಿತ್ತು

    ಗೋಲ್ಡ್‌ಮೈನ್‌ ವಿತರಣೆ ಸಂಸ್ಥೆಗೆ ಮಾರಾಟ ಮಾಡಲಾಗಿತ್ತು

    'ಪುಷ್ಪ' ಸಿನಿಮಾದ ಹಿಂದಿ ವರ್ಷನ್‌ ಆರಂಭದಿಂದಲೂ ಸಮಸ್ಯೆಯಲ್ಲಿಯೇ ಇದೆ. ಆರಂಭದಲ್ಲಿ 'ಪುಷ್ಪ' ಸಿನಿಮಾದ ವಿತರಣೆ ಹಕ್ಕನ್ನು ಗೋಲ್ಡ್‌ ಮೈನ್ ಡಿಸ್ಟ್ರಿಬ್ಯೂಷನ್‌ ಸಂಸ್ಥೆ ಖರೀದಿ ಮಾಡಿತ್ತು. ಸಿನಿಮಾದ ಹಿಂದಿ ಡಬ್ಬಿಂಗ್ ಅನ್ನು ಕೇವಲ ಯೂಟ್ಯೂಬ್‌ ಬಿಡುಗಡೆಗೆ ಅಷ್ಟೆ ಖರೀದಿಸಿದ್ದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಂತರ ಮಧ್ಯ ಪ್ರವೇಶಿಸಿದ ಅಲ್ಲು ಅರ್ಜುನ್ ಗೋಲ್ಡ್ ಮೈನ್ ಡಿಸ್ಟ್ರಿಬ್ಯೂಷನ್ ಸಂಸ್ಥೆಯ ಒಪ್ಪಂದವನ್ನು ರದ್ದುಗೊಳಿಸಿ ತಮ್ಮ ಎಎ ಡಿಸ್ಟ್ರಿಬ್ಯೂಷನ್‌ ಸಂಸ್ಥೆಯ ಮೂಲಕವೇ 'ಪುಷ್ಪ' ಸಿನಿಮಾದ ಹಿಂದಿ ವರ್ಷನ್ ಅನ್ನು ವಿತರಣೆ ಮಾಡುತ್ತಿದ್ದಾರೆ.

    ಯಾವ ಭಾಷೆಯಲ್ಲಿ ಯಾರ ವಿತರಣೆ

    ಯಾವ ಭಾಷೆಯಲ್ಲಿ ಯಾರ ವಿತರಣೆ

    'ಪುಷ್ಪ' ಸಿನಿಮಾವನ್ನು ತೆಲುಗಿನಲ್ಲಿ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವೀಸ್‌ ನವರೇ ವಿತರಣೆ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಲೈಕಾ ಪ್ರೊಡಕ್ಷನ್ಸ್ ಮತ್ತು ಶ್ರೀ ಲಕ್ಷ್ಮಿ ಮೂವೀಸ್, ಕರ್ನಾಟಕದಲ್ಲಿ ಸ್ವಾಗತ್ ಎಂಟರ್ಪ್ರೈಸಸ್ ಮತ್ತು ಕೇರಳದಲ್ಲಿ ಇ4 ಎಂಟರ್ಟ್ರೈನ್‌ಮೆಂಟ್‌ನವರು ವಿತರಣೆ ಮಾಡುತ್ತಿದ್ದಾರೆ. ಸಿನಿಮಾವು ಆಂಧ್ರ, ತಮಿಳುನಾಡು, ಕರ್ನಾಟಕ, ಕೇರಳಗಳಲ್ಲಿ ಒಳ್ಳೆಯ ಓಪನಿಂಗ್ ಪಡೆವ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದ ಮೊದಲ ದಿನದ ಬಹುತೇಕ ಶೋಗಳು ಈಗಾಗಲೇ ಬುಕ್ ಆಗಿಬಿಟ್ಟಿವೆ.

    ರಕ್ತ ಚಂದನ ಕಳ್ಳಸಾಗಣೆ ಕತೆ ಹೊಂದಿರುವ 'ಪುಷ್ಪ'

    ರಕ್ತ ಚಂದನ ಕಳ್ಳಸಾಗಣೆ ಕತೆ ಹೊಂದಿರುವ 'ಪುಷ್ಪ'

    'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆ ಕುರಿತಾದ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ಅಲ್ಲು ಅರ್ಜುನ್ ನಾಯಕ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡಿಗ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಫಹಾದ್ ಫಾಸಿಕ್ ಮುಖ್ಯ ವಿಲನ್ ಆಗಿಯೂ, ಹಾಸ್ಯ ನಟ ಸುನಿಲ್ ವಿಲನ್ ಆಗಿಯೂ ನಟಿಸಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ. ಸಿನಿಮಾದಲ್ಲಿ ನಟಿ ಸಮಂತಾ ಮೊದಲ ಬಾರಿಗೆ ಐಟಂ ಹಾಡಿಗೆ ನರ್ತಿಸಿದ್ದಾರೆ. ಸಿನಿಮಾಕ್ಕೆ ದೇವಿಶ್ರೀಪ್ರಸಾದ್ ಸಂಗೀತ ನೀಡಿದ್ದು ಎಲ್ಲ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಸಿನಿಮಾ ಡಿಸೆಂಬರ್ 17ಕ್ಕೆ ಬಿಡುಗಡೆ ಆಗಲಿದೆ.

    English summary
    Allu Arjun starer Pushpa movie Hindi dubbed version is in trouble. Hindi dubbed version not yet censored. Movie scheduled to watch by censor team on December 16.
    Thursday, December 16, 2021, 16:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X