ಪಿವಿ ಸಿಂಧು ಬಯೋಪಿಕ್ನಲ್ಲಿ ಈ ನಟಿ ಮಾಡಿದ್ರೆ ಚೆಂದವಂತೆ
Recommended Video
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಪಿವಿ ಸಿಂಧು ಅವರ ಬಯೋಪಿಕ್ ಸಿನಿಮಾ ಆಗುತ್ತಿದೆ. ಬಾಲಿವುಡ್ ನಟ ಸೋನು ಸೂದ್ ಈ ಚಿತ್ರ ನಿರ್ಮಿಸಲಿದ್ದಾರೆ.
ಪಿವಿ ಸಿಂಧು ಅವರ ಪಾತ್ರ ಯಾರು ಮಾಡಲಿದ್ದಾರೆ ಎನ್ನುವುದಕ್ಕೆ ಮುಂಚೆಯೇ ಅವರ ಕೋಚ್ ಪುಲ್ಲೆಲ ಗೋಪಿಚಂದ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗ್ತಿದೆ.
ಪಿವಿ ಸಿಂಧು ಪಾತ್ರದಲ್ಲಿ ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದು ಖಚಿತವಿಲ್ಲ. ಹೀಗಿರುವಾಗ, ಸ್ವತಃ ಪಿವಿ ಸಿಂಧು ಅವರೇ ತನ್ನ ಪಾತ್ರವನ್ನ ಈ ನಟಿ ಮಾಡಿದ್ರೆ ಚೆಂದ ಎಂದು ಅಭಿಪ್ರಾಯ ಪಟ್ಟಿದ್ದಾರೆ.

''ದೀಪಿಕಾ ಪಡುಕೋಣೆ ಈ ಪಾತ್ರಕ್ಕೆ ಸೂಕ್ತವಾಗಬಹುದು. ಯಾಕಂದ್ರೆ, ಅವರು ಕೂಡ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಒಳ್ಳೆಯ ನಟಿ. ಆದರೆ ನಿರ್ಮಾಪಕರ ನಿರ್ಧಾರವೇ ಅಂತಿ. ಅವರ ನಿರ್ಧಾರವನ್ನ ನಾನು ಗೌರವಿಸುತ್ತೇನೆ'' ಎಂದು ತಿಳಿಸಿದ್ದಾರೆ.
''ಬಯೋಪಿಕ್ ಚಿತ್ರದ ಬಗ್ಗೆ ಸೋನು ಸೂದ್ ಅವರ ನನಗೆ ತಿಳಿಸಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚೇನೂ ಮಾತನಾಡಿಲ್ಲ. ಒಮ್ಮೆ ಭೇಟಿಯಾದ ಬಳಿಕ ಈ ಬಗ್ಗೆ ಸಂಪೂರ್ಣ ಸ್ಪಷ್ಟನೆ ಸಿಗಲಿದೆ. ಈ ಚಿತ್ರಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ. ಒಂದೊಳ್ಳೆ ಸಿನಿಮಾ ಆಗುತ್ತೆ ಎಂಬ ಭರವಸೆ ನನಗೂ ಇದೆ'' ಎಂದು ಪಿವಿ ಸಿಂಧು ಹೇಳಿದ್ದಾರೆ.


Click it and Unblock the Notifications











