ಸಂಗೀತದ ರಾಣಿ ಮೈಥಿಲಿ ಠಾಕೂರ್ ಬಿಹಾರದ ಅತಿ ಕಿರಿಯ ಶಾಸಕಿ; ರಾಜಕೀಯದಲ್ಲಿ ಕ್ರಾಂತಿ ಮಾಡಿದ ಈ ಗಾಯಕಿ ಹಿನ್ನೆಲೆಯೇನು?

By Srushti. S G

ಮೈಥಿಲಿ ಠಾಕೂರ್.. 2025ರ ಬಿಹಾರ ಚುನಾವಣೆಯಲ್ಲಿ ಕ್ರಾಂತಿ ಮಾಡಿದ ಮಹಿಳೆ. ಈಕೆ ಬಿಹಾರ ಹಾಗೂ ಸುತ್ತಮುತ್ತದ ರಾಜ್ಯಗಳಲ್ಲಿ ಬಹಳ ಚಿರಪರಿಚಿತ. ಈಕೆ ಕೇವಲ ಗಾಯಕಿ ಮಾತ್ರವಲ್ಲ. ಭಾರತದ ಜಾನಪದ ಲೋಕದ ಹೊಸ ಸಂಚಲನ. ಅವರ ಹಾಡುಗಳು ಕೋಟಿಗಟ್ಟಲೆ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿವೆ. ಇಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿಯೂ ಅವರಿಗೆ ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗವಿದೆ. ಅತೀ ಚಿಕ್ಕ ವಯಸ್ಸಿನಲ್ಲಿ ರಾಜಕೀಯಕ್ಕೆ ಕಾಲಿಟ್ಟ ಗಾಯಕಿಯ ಈ ನಿರ್ಧಾರ ಎಲ್ಲರ ಗಮನ ಸೆಳೆದಿತ್ತು.

ಇತ್ತೀಚೆಗೆ ನಡೆದ 2025ರ ವಿಧಾನ ಸಭೆ ಚುನಾವಣೆಯಲ್ಲಿ ಬಿಹಾರದ ದರ್ಭಾಂಗಾದ ಅಲಿನಗರ ವಿಧಾನಸಭಾ ಕ್ಷೇತ್ರದಿಂದ ಮೈಥಿಲಿ ಠಾಕೂರ್ ಸ್ಪರ್ಧಿಸಿದ್ದರು. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದರು. ತನ್ನ ಮೊದಲ ಚುನಾವಣೆಯಲ್ಲಿಯೇ ಗೆಲುವಿನ ನಗೆಯನ್ನು ಬೀರಿದ್ದಾರೆ. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅವರು ರಾಜಕೀಯದಲ್ಲಿನ ಅನುಭವಿ ನಾಯಕರನ್ನು ಸೋಲಿಸಿದ್ದು, ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

Queen of Folk Music Maithili Thakur wins Bihar election Makes Debut in Vidhan Sabha

ಮೈಥಿಲಿ ಠಾಕೂರ್ ಇಡೀ ದೇಶದ ಗಮನ ಸೆಳೆದಿದ್ದಾರೆ. ಯಾಕಂದ್ರೆ ಇವರು ಬಿಹಾರದ ಇತಿಹಾಸದಲ್ಲೇ ಅತಿ ಕಿರಿಯ ಶಾಸಕಿ. ಕೇವಲ 25ನೇ ವಯಸ್ಸಿನಲ್ಲಿಯೇ ಶಾಸಕಿಯಾಗಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಈ ಯುವ ಸಾಧಕಿಯ ಹಿನ್ನೆಲೆ ಮತ್ತು ರಾಜಕೀಯ ಪಯಣ ನಿಜಕ್ಕೂ ಸ್ಫೂರ್ತಿದಾಯಕ. ಸಂಗೀತ ಲೋಕದ ಸ್ಟಾರ್ ಗಾಯಕಿಯೊಬ್ಬರು ಈಗ ಜನರ ಪ್ರತಿನಿಧಿಯಾಗಿ ಬದಲಾಗಿದ್ದಾರೆ. ಅವರ ಈ ಪ್ರಯಾಣವು ರಾಜಕೀಯ ಕ್ಷೇತ್ರದ ಕಡೆಗೆ ಒಲವು ಬೆಳೆಸಿಕೊಂಡಿರುವ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದೆ.

ಸಂಗೀತ ಲೋಕದ ಮಿನುಗು ತಾರೆ,ಯಾರೀ ಮೈಥಿಲಿ?

ಮೈಥಿಲಿ ಠಾಕೂರ ಸಂಗೀತದಲ್ಲಿ ಪರಿಣಿತಿ ಪಡೆದಿದ್ದಾರೆ. ಅವರು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಯ ಪ್ರಕಾರಗಳಲ್ಲಿ ಪರಿಣತಿ ಪಡೆದುಕೊಂಡಿದ್ದಾರೆ. ಅವರ ಜಾನಪದ ಗಾಯನ ಶೈಲಿ ಬಹಳ ವಿಶಿಷ್ಟವಾಗಿದೆ. ಅದು ಸೂಫಿ ಸಂಗೀತದೊಂದಿಗೆ ಬೆಸೆದುಕೊಂಡಿದ್ದು, ಇವರ ಹಾಡುಗಳು ದೇಶಾದ್ಯಂತ ಅಪಾರ ಖ್ಯಾತಿ ಗಳಿಸಿದರು. ಈಕೆ ರಾಷ್ಟ್ರೀಯ ಮಟ್ಟದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. 'ರೈಸಿಂಗ್ ಸ್ಟಾರ್'ನಂತಹ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇದಿಕೆಗಳು ಅವರಿಗೆ ದೊಡ್ಡ ಹೆಸರು ತಂದುಕೊಟ್ಟವು. ಮೈಥಿಲಿ ಸುಮಾರು ಹನ್ನೆರಡು ವಿಭಿನ್ನ ಭಾಷೆಗಳಲ್ಲಿ ಹಾಡುತ್ತಾರೆ. ಇದು ಅವರ ಬಹುಮುಖ ಪ್ರತಿಭೆಗೆ ಉದಾಹರಣೆ. ಅವರ ಹಾಡುಗಳ ಶಕ್ತಿ ಭಾಷೆಯ ಎಲ್ಲೆ ಮೀರಿ ಮುಂದೆ ಸಾಗಿದೆ.

ಗಾಯಕಿಯಾಗಿ ಮೈಥೀಲಿ ಗಳಿಸಿದ ಜನಪ್ರಿಯತೆ ಬಲು ದೊಡ್ಡದು. ಅವರ ಹಾಡುಗಳು ಮಿಲಿಯನ್ ಲೆಕ್ಕದಲ್ಲಿ ವೀಕ್ಷಣೆಗಳನ್ನು ಪಡೆಯುತ್ತವೆ. ತಮ್ಮ ಹಾಡುಗಳ ಮೂಲಕ ಅವರು ಬಿಹಾರದ ಸಂಸ್ಕೃತಿಯನ್ನು ಪ್ರಚಾರ ಮಾಡಿದರು. ಅವರ ಸಂಸ್ಕೃತಿ, ಆಚಾರ-ವಿಚಾರ ಗಾಯಕಿಗೆ ರಾಜಕೀಯ ನೆರವಾಗಿದೆ.

Queen of Folk Music Maithili Thakur wins Bihar election Makes Debut in Vidhan Sabha

ಐತಿಹಾಸಿಕ ರಾಜಕೀಯ ಗೆಲುವು

ಬಿಜೆಪಿ ಪಕ್ಷವು ಮೈಥಿಲಿ ಠಾಕೂರ್ ಅವರನ್ನು ಅಲಿನಗರದಂತಹ ಪ್ರಮುಖ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕೆ ಇಳಿಸಿದ್ದರು. ಇದು ಬಿಜೆಪಿ ಪಕ್ಷದ ಒಂದು ಅಚ್ಚರಿಯ ನಿರ್ಧಾರವಾಗಿತ್ತು. ಅಲಿನಗರವು ಈ ಮೊದಲು ಆರ್.ಜೆ.ಡಿ ಪಕ್ಷದ ಭದ್ರಕೋಟೆಯಾಗಿತ್ತು. ಇದು ಮಹಾಘಟಬಂಧನ್ ಅವರ ತೆಕ್ಕೆಯಲ್ಲಿತ್ತು. ಇಂತಹ ಕಠಿಣ ಸವಾಲನ್ನು ಅವರು ಎದುರಿಸಿ ಚುನಾವಣಿಯಲ್ಲಿ ಗೆದ್ದು ಚರಿತ್ರೆಯನ್ನೇ ಬರೆದಿದ್ದಾರೆ.

ಮೈಥಿಲಿ ಠಾಕೂರ್ ಚುನಾವಣೆಯಲ್ಲಿ ದೊಡ್ಡ ಅಂತರದಿಂದ ಗೆಲುವು ಸಾಧಿಸಿದರು. ಅವರು ತಮ್ಮ ಪ್ರತಿಸ್ಪರ್ಧಿ, ಆರ್.ಜೆ.ಡಿ ಪಕ್ಷದ ಹಿರಿಯ ನಾಯಕರಾಗಿದ್ದ ಬಿನೋದ್ ಮಿಶ್ರಾ ಅವರನ್ನು ಸೋಲಿಸಿದರು. ಮೈಥಿಲಿ ಠಾಕೂಲ್ ಅವರ ಗೆಲುವಿನ ಅಂತರ ಬರೋಬ್ಬರಿ 11,730 ಮತಗಳು. ಇದು ಯುವ ಶಕ್ತಿಗೆ ಸಿಕ್ಕ ದೊಡ್ಡ ಜಯವಾಗಿದೆ. ಕೇವಲ 25 ವರ್ಷ ವಯಸ್ಸಿನಲ್ಲಿ ಗಾಯಕಿ ಶಾಸಕರಾಗುವ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ. ಮೈಥಿಲಿ ಠಾಕೂರ್ ಗೆಲುವು ಬಿಹಾರ ರಾಜಕೀಯದಲ್ಲಿ ಒಂದು ದೊಡ್ಡ ಬದಲಾವಣೆಯಾಗಿದೆ.

ಮೈಥಿಲಿಗೆ ಕುಟುಂಬದ ಬೆಂಬಲ

ಮೈಥಿಲಿ ಠಾಕೂರ್‌ ರಾಜಕೀಯ ಪ್ರಚಾರದ ಮೇಳೆ ಇಡೀ ಕುಟುಂಬವೇ ಕೈಜೋಡಿಸಿತ್ತು. ಇದು ಕೂಡ ಮೈಥಿಲಿಯವರ ಗೆಲುವಿಗೆ ಪ್ರಮುಖ ಕಾರಣ. ಅವರ ಕಿರಿಯ ಸಹೋದರ ರಿಷವ್ ಠಾಕೂರ್ ಕೂಡ ತಬಲಾ ವಾದಕರಾಗಿದ್ದು, ಮತ್ತೊಬ್ಬ ಕಿರಿಯ ಸಹೋದರಿ ಆಯಾಚಿ ಠಾಕೂರ್ ಗಾಯಕರು. ಅವರೆಲ್ಲರೂ ಜಾನಪದ ಗೀತೆಗಳನ್ನು ಹಾಡುತ್ತಾ ಪ್ರಚಾರ ಮಾಡಿದ್ದರು. ಅದು ಅವರ ಗೆಲವಿಗೆ ಪ್ರಮುಖ ಕಾರಣವಾಯ್ತು. ಕಲೆಯ ಕ್ಷೇತ್ರದಲ್ಲಿ ಹೆಸರು ಮಾಡಿದ ಅವರ ಕುಟುಂಬ ಇದೀಗ ರಾಜಕೀಯದಲ್ಲೂ ಹೆಜ್ಜೆ ಇಟ್ಟಿದೆ.

ಶಾಸಕಿಯಾಗಿ ಮೈಥಿಲಿ ಠಾಕೂರ್ ಅವರು ಹಲವಾರು ಭರವಸೆಗಳನ್ನು ನೀಡಿದ್ದಾರೆ. ಹಾಗೇ ತಮ್ಮ ಕ್ಷೇತ್ರದ ಹೆಸರನ್ನು ಬದಲಾವಣೆ ಮಾಡುವಂತೆ ಘೋಷಣೆ ಮಾಡಿದ್ದಾರೆ. ಅಲಿನಗರ ಕ್ಷೇತ್ರವನ್ನು 'ಸೀತಾನಗರ' ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದರು. ಶಾಲಾ ಪಠ್ಯಕ್ರಮದಲ್ಲಿ ಮಿಥಿಲಾ ಚಿತ್ರಕಲೆಯನ್ನು ಪರಿಚಯಿಸುವುದಾಗಿ ಭರವಸೆ ನೀಡಿದ್ದಾರೆ. ಶಿಕ್ಷಣದ ಸುಧಾರಣೆ ಪ್ರಮುಖ ಆದ್ಯತೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು, ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಲು ಅವರು ಶ್ರಮಿಸುವುದಾಗಿ ಹೇಳಿದ್ದಾರೆ.

More from Filmibeat

English summary
Queen of Folk Music Maithili Thakur wins Bihar election: Makes Debut in Vidhan Sabha.
Read more about: singer election bihar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X