ರತನ್ ಟಾಟಾ ಬಯೋಪಿಕ್ ನಲ್ಲಿ ದಕ್ಷಿಣ ಭಾರತದ ಖ್ಯಾತ ನಟ?

ಬಾಲಿವುಡ್ ನಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್ ಗಳು ತೆರೆಗೆ ಬಂದಿದೆ. ಈಗಲು ಸಿದ್ಧವಾಗುತ್ತಿದೆ. ಸದ್ಯ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಬಯೋಪಿಕ್ ತಯಾರಿ ನಡೆಯುತ್ತಿದೆ. ಇದೇ ಬೆನ್ನಲ್ಲೇ ಈಗ ಮತ್ತೊಂದು ಬಯೋಪಿಕ್ ಸದ್ದು ಮಾಡುತ್ತಿದೆ.

Recommended Video

ಉಹಾಪೋಹಗಳಿಗೆ ತೆರೆ ಎಳೆದ ಮಾಧವನ್ | Madhavan | Filmibeat Kannada

ಹೌದು, ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ಬಯೋಪಿಕ್ ತಯಾರಾಗುತ್ತಿದೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ರತನ್ ಟಾಟಾ ಬಯೋಪಿಕ್ ಗೆ ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವುದು ಇನ್ನೂ ಬಹಿಂರಂಗವಾಗಿಲ್ಲ, ಆದರೆ ವಿಶೇಷ ರತನ್ ಟಾಟಾ ಪಾತ್ರದಲ್ಲಿ ಖ್ಯಾತ ನಟ ಮಾಧವನ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಈ ಬಗ್ಗೆ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿ ನಟ ಮಾಧವನ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಮಾಧವನ್ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗನೊಬ್ಬ, 'ಮಾಧವನ್, ರತನ್ ಟಾಟಾ ಬಯೋಪಿಕ್ ನಲ್ಲಿ ನೀವು ನಟಿಸುತ್ತಿದ್ದೀರಾ? ಒಂದು ವೇಳೆ ಈ ಸಿನಿಮಾ ಬಂದರೆ ಅನೇಕರಿಗೆ ಪ್ರೇರಣೆಯಾಗಲಿದೆ' ಎಂದು ಹೇಳಿದ್ದಾರೆ.

R Madhavan Reaction About Playing the lead in Ratan Tatas Biopic

ಅಭಿಮಾನಿಯ ಪ್ರಶ್ನೆಗೆ ಉತ್ತರ ನೀಡಿರುವ ನಟ ಮಾಧವನ್, 'ದುರದೃಷ್ಟವಶಾತ್ ಇದು ನಿಜವಲ್ಲ. ಕೆಲವು ಅಭಿಮಾನಿಗಳು ಪೋಸ್ಟರ್ ಮಾಡಿದ್ದಾರೆ. ಅಂತಹ ಯಾವುದೇ ಯೋಜನೆ ಇನ್ನು ಚರ್ಚೆಯಾಗಿಲ್ಲ.' ಎಂದು ಹೇಳುವ ಮೂಲಕ ಮಾಧವಾನ್ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮಾಧವನ್ ಇತ್ತೀಚಿಗೆ ನಿಶಬ್ದಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಚಿತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದರು. ಹಿಂದಿಯಲ್ಲಿ ಮಾಧವನ್ ಕೊನೆಯದಾಗಿ ಸಾಲಾ ಖಡೂಸ್ ನಲ್ಲಿ ನಟಿಸಿದ್ದರು. ಬಾಕ್ಸಿಂಗ್ ತರಬೇತುದಾರರಾಗಿ ಕಾಣಿಸಿಕೊಂಡಿದ್ದರು. ಸದ್ಯ ಮಾರಾ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 17ರಂದು ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗುತ್ತಿದೆ.

More from Filmibeat

English summary
Actor R Madhavan reaction About Playing the lead in Ratan Tata's Biopic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X