ನಟ ಮಾಧವನ್‌ಗೆ ಪದ್ಮಶ್ರೀ ಗೌರವ; ನಟ ಮಮ್ಮುಟ್ಟಿಗೆ ಪದ್ಮವಿಭೂಷಣ ಪುರಸ್ಕಾರ

ಮೇ 25ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ 2026ರ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದರು. 66 ಮಂದಿ ಸಾಧಕರು ಅಂದು ಪ್ರಶಸ್ತಿ ಸ್ವೀಕರಿಸಿದ್ದರು. ಜೂನ್ 23 ರಂದು ಎರಡನೇ ಕಂತಿನಲ್ಲಿ 65 ಗಣ್ಯರಿಗೆ ಪ್ರಶಸ್ತಿ ನೀಡಲು ಸಿದ್ಧತೆ ನಡೆದಿದೆ. ಚಿತ್ರ ನಟರಾದ ಮಾಧವನ್ ಅವರಿಗೆ ಪದ್ಮಶ್ರೀ ಹಾಗೂ ಮಲಯಾಳಂ ನಟ ಮಮ್ಮುಟಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಮಹಾರಾಷ್ಟ್ರದಿಂದ ಕಲಾ ವಿಭಾಗದಲ್ಲಿ ನಟ, ಬರಹಗಾರ ಮತ್ತು ನಿರ್ದೇಶಕ ಮಾಧವನ್ ರಂಗನಾಥನ್ ಅವರಿಗೆ ಪದ್ಮಶ್ರೀ ಲಭಿಸಿದೆ. 'ಮ್ಯಾಡಿ' ಎಂದೇ ಚಿತ್ರರಂಗದಲ್ಲಿ ಮಾಧವನ್ ಹೆಸರು ಮಾಡಿದ್ದಾರೆ. ದೂರದರ್ಶನದಲ್ಲಿ 1,200 ಕ್ಕೂ ಹೆಚ್ಚು ಸಂಚಿಕೆಗಳಲ್ಲಿ ಅವರು ನಟಿಸಿದ್ದಾರೆ. ತಮಿಳು, ಹಿಂದಿ ಮತ್ತು ಇತರ ಭಾಷೆಗಳಲ್ಲಿ ಒಟ್ಟು 75 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮುಂಬೈನಲ್ಲಿ ಸಾವಯವ ಹೈಡ್ರೋಪೋನಿಕ್ ಕೃಷಿ ಮತ್ತು ತಮಿಳುನಾಡಿನಲ್ಲಿ ತೆಂಗಿನ ತೋಟ ಸೇರಿದಂತೆ ಕೃಷಿ ಉದ್ಯಮಗಳನ್ನು ಸಹ ಮಾಧವನ್ ತೊಡಗಿಸಿಕೊಂಡಿದ್ದಾರೆ.

R Madhavan Set to Receive Padma Shri award National Honour for His Stellar Contribution to Cinema

ಇತ್ತೀಚೆಗೆ 'ಧುರಂಧರ್' ಸರಣಿ ಸಿನಿಮಾಗಳಲ್ಲಿ ಐಬಿ ಮುಖ್ಯಸ್ಥ ಅಜಯ್ ಸನ್ಯಾಲ್ ಪಾತ್ರದಲ್ಲಿ ಮಾಧವನ್ ನಟಿಸಿ ಗೆದ್ದಿದ್ದರು. 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಚಿತ್ರ ನಿರ್ದೇಶಿಸಿ ನಟಿಸಿ ಮೋಡಿ ಮಾಡಿದ್ದರು. ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. 1998ರಲ್ಲಿ 'ಶಾಂತಿ ಶಾಂತಿ ಶಾಂತಿ' ಎಂಬ ಕನ್ನಡ ಚಿತ್ರದಲ್ಲಿ ಕೂಡ ಅವರು ನಟಿಸಿದ್ದರು.

ಬಿಹಾರದ ಜಮ್‌ಶಡ್‌ಪುರದಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮಾಧವನ್ ಅಲ್ಲೇ ಶಾಲಾ ವಿದ್ಯಾಭ್ಯಾಸ ಮುಗಿಸಿದ್ದರು. ಕೊಲ್ಹಾಪುರದಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಬಿಎಸ್ಸಿ ಪದವಿ ಪಡೆದಿದ್ದರು. ಆರಂಭದಲ್ಲಿ ಹಿಂದಿ ದೂರದರ್ಶನ ಧಾರಾವಾಹಿಗಳಲ್ಲಿ ಮಾಧವನ್ ಬಣ್ಣ ಹಚ್ಚಿದ್ದರು. 'ಯೂಲ್ ಲವ್ ಸ್ಟೋರಿ' (1993) ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಬಳಿಕ ಜೀ ಟಿವಿಯ ಬನೇಗಿ ಅಪ್ನಿ ಬಾತ್ (1993) ಮತ್ತು ಘರ್ ಜಮಾಯಿ ಧಾರಾವಾಹಿಗಳಲ್ಲಿ ನಟಿಸಿದ್ದರು. 'ಇಸ್ ರಾತ್ ಕಿ ಸುಬಹ್ ನಹೀ' ಚಿತ್ರ ಹಾಡಿನಲ್ಲಿ ಗೆಸ್ಟ್ ಅಪ್ಪಿಯರೆನ್ಸ್ ಮಾಡಿದ್ದರು. 'ಇನ್ಫರ್ನೊ' ಎಂಬ ಇಂಗ್ಲೀಷ್ ಚಿತ್ರದಲ್ಲಿ ಕೂಡ ನಟಿಸಿದ್ದರು.

ಮಾಧವನ್ ಪೂರ್ಣಪ್ರಮಾಣದಲ್ಲಿ ಭಾರತದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಕನ್ನಡದಲ್ಲಿ. ಹೌದು 'ಶಾಂತಿ ಶಾಂತಿ ಶಾಂತಿ' ಅವರು ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಿದ ಮೊದಲ ಸಿನಿಮಾ. 2000 ಇಸವಿಯಲ್ಲಿ ಬಂದಿದ್ದ 'ಅಲೈಪಾಯುಥೆ' ಚಿತ್ರ ಮಾಧವನ್ ಸಿನಿಜೀವನಕ್ಕೆ ದೊಡ್ಡ ತಿರುವು ಕೊಟ್ಟಿತ್ತು. ಮಣಿರತ್ನಂ ನಿರ್ದೇಶನದ ಸಿನಿಮಾ ಹಿಟ್ ಆಗಿದ್ದು ಮಾತ್ರವಲ್ಲ ಕೆಲ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಸದ್ದು ಮಾಡಿತ್ತು. ಸ್ಪುರದ್ರೂಪಿ ನಟ ಮಾಧವನ್ ಲವ್ ಸ್ಟೋರಿ ಸಿನಿಮಾಗಳಲ್ಲಿ ಹೆಚ್ಚು ಮಿಂಚಿದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದರು.

ಫಿಲ್ಮ್‌ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಪ್ರಶಸ್ತಿ, ಸೈಮಾ ಅವಾರ್ಡ್, ಐಫಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳ ಗರಿ ಮಾಧವನ್ ಮುಡಿಗೇರಿದೆ. 'ರಾಕೆಟ್ರಿ' ಸಿನಿಮಾ ನಿರ್ಮಿಸಿ ನಟಿಸಿ ರಾಷ್ಟ್ರಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಮಾಧವನ್ ಮೊದಲ ನಿರ್ದೇಶನದ ಚಿತ್ರಕ್ಕೆ ಈ ಗೌರವ ಲಭಿಸಿದ್ದು ವಿಶೇಷ. ಸದ್ಯ 'ಅಲ್ಫಾ', 'G. D. N', 'ಅದ್ರಿಷ್ಟಶಾಲಿ', 'ಸರ್ಕಲ್' ಎಂಬ ಸಿನಿಮಾಗಳಲ್ಲಿ ಮಾಧವನ್ ನಟಿಸುತ್ತಿದ್ದಾರೆ.

Read more about: madhavan mammootty award
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X