For Quick Alerts
  ALLOW NOTIFICATIONS  
  For Daily Alerts

  19 ವರ್ಷಗಳ ಹಿಂದೆ ಮುಗಿದ ಕತೆಯನ್ನು ಅಲ್ಲಿಂದಲೇ ಪ್ರಾರಂಭಿಸುವೆ: ಮಾಧವನ್

  |

  ಹೆಂಗೆಳೆಯರ ಅಚ್ಚು ಮೆಚ್ಚಿನ ನಾಯಕನಾಗಿದ್ದ ಆರ್.ಮಾಧವನ್‌ ಗೆ ಈಗ 50 ವರ್ಷ ವಯಸ್ಸು. ಆಗಿನ ಲವರ್ ಬಾಯ್ ಇಮೇಜನ್ನು ಬಹುತೇಕ ಕಳೆದುಕೊಂಡಿದ್ದಾರೆ ಮಾಧವನ್.

  ಆದರೆ 90-2000 ದಶಕದಲ್ಲಿ ಮಾಧವನ್ ಗೆ ಇದ್ದ ಮಹಿಳಾ ಅಭಿಮಾನಿಗಳು ಶಾರುಖ್ ಖಾನ್‌ ಗೆ ಸಹ ಇರಲಿಲ್ಲವೇನೋ? ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು ಮಾಧವನ್. ಅವರು ಮಾಡುತ್ತಿದ್ದ ಸಿನಿಮಾಗಳೂ ಸಹ ಹಾಗೆಯೇ ಇರುತ್ತಿದ್ದವು.

  ವಿಶೇಷವೆಂದರೆ ಮಾಧವನ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ್ದು ಕನ್ನಡದ ಶಾಂತಿ-ಶಾಂತಿ-ಶಾಂತಿ ಸಿನಿಮಾದಲ್ಲಿ. ಆ ನಂತರವೇ ಅವರು ತಮ್ಮ ಮೊದಲ ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆದರೆ ಆರ್.ಮಾಧವನ್‌ ಗೆ ಈಗ ತಾವೇ ನಟಿಸಿದ್ದ 19 ವರ್ಷದ ಹಿಂದಿನ ಸಿನಿಮಾದ ಕತೆಯನ್ನು ಮುಂದುವರೆಸುವ ಮನಸ್ಸಾಗಿದೆಯಂತೆ.

  ರೆಹನಾ ಹೈ ತೆರೆ ದಿಲ್‌ ಮೇ ಸಿನಿಮಾಕ್ಕೆ 19 ವರ್ಷ

  ರೆಹನಾ ಹೈ ತೆರೆ ದಿಲ್‌ ಮೇ ಸಿನಿಮಾಕ್ಕೆ 19 ವರ್ಷ

  'ರೆಹನಾ ರೈ ತೆರೆ ದಿಲ್‌ ಮೇ' ಎಂಬ ಆರ್.ಮಾಧವನ್ ನಟಿಸಿದ್ದ ಮೊದಲ ಹಿಂದಿ ಸಿನಿಮಾ ಸೂಪರ್-ಡೂಪರ್ ಹಿಟ್ ಸಿನಿಮಾ ಆಗಿತ್ತು. ಆ ಸಿನಿಮಾ ಬಿಡುಗಡೆ ಆಗಿ 19 ವರ್ಷಗಳಾಗಿದೆ. ಆ ಸಿನಿಮಾದ ಮುಂದುವರೆದ ಭಾಗವನ್ನು ನಿರ್ದೇಶಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಆರ.ಮಾಧವನ್.

  'ಎಲ್ಲಿಗೆ ನಿಂತಿತ್ತೊ ಅಲ್ಲಿಂದಲೇ ಕತೆ ಮುಂದುವರೆಸುತ್ತೇನೆ'

  'ಎಲ್ಲಿಗೆ ನಿಂತಿತ್ತೊ ಅಲ್ಲಿಂದಲೇ ಕತೆ ಮುಂದುವರೆಸುತ್ತೇನೆ'

  19 ವರ್ಷದ ಹಿಂದೆ ಆ ಸಿನಿಮಾದ ಕತೆ ಎಲ್ಲಿಗೆ ನಿಂತಿತ್ತೊ ಅಲ್ಲಿಂದಲೇ ಮತ್ತು ಮುಂದುವರೆಸಿ ಆ ಸಿನಿಮಾದ ಮುಂದಿನ ಭಾಗ ತೆಗೆಯಲು ನಾನು ರೆಡಿ, ಯಾರಾದರೂ ನಿರ್ಮಾಪಕರು ನನ್ನನ್ನು ಕೇಳಿದರೆ, ಕಂಡಿತ ನಾನು ರೆಹನಾ ಹೈ ತೆರೆ ದಿಲ್‌ ಮೆ ಸಿನಿಮಾದ ಮುಂದುವರೆದ ಭಾಗದ ನಿರ್ದೇಶನ ಮಾಡುತ್ತೇನೆ ಎಂದಿದ್ದಾರೆ ಮಾಧವನ್.

  ದಿಯಾ ಮಿರ್ಜಾ ಗೆ ಅದು ಮೊದಲ ಸಿನಿಮಾ

  ದಿಯಾ ಮಿರ್ಜಾ ಗೆ ಅದು ಮೊದಲ ಸಿನಿಮಾ

  ರೆಹನಾ ಹೈ ತೆರೆ ದಿಲ್‌ ಮೆ ಸಿನಿಮಾ ತಮಿಳಿನ ಮಿನಾಲೆ ಸಿನಿಮಾದ ರೀಮೇಕ್, ಆ ಸಿನಿಮಾದಲ್ಲಿ ಸಹ ಆರ್.ಮಾಧವನ್ ನಾಯಕನಾಗಿ ನಟಿಸಿದ್ದರು. ಗೌತಮ್ ಮೆನನ್ ಸಿನಿಮಾ ನಿರ್ದೇಶಿಸಿದ್ದರು. ಹಿಂದಿಯಲ್ಲಿಯೂ ಅವರೇ ನಿರ್ದೇಶಿಸಿದ್ದು, ದಿಯಾ ಮಿರ್ಜಾ ಗೆ ನಾಯಕಿಯಾಗಿ ಅದು ಮೊದಲ ಸಿನಿಮಾ. ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಸಹ ಇದ್ದರು.

  'ಚಿತ್ರೀಕರಣದ ವೇಳೆ ಸಾಕಷ್ಟು ಸಮಸ್ಯೆಗಳಾದವು'

  'ಚಿತ್ರೀಕರಣದ ವೇಳೆ ಸಾಕಷ್ಟು ಸಮಸ್ಯೆಗಳಾದವು'

  'ರೆಹನಾ ಹೈ ತೆರೆ ದಿಲ್‌ ಮೆ' ಸಿನಿಮಾದ ಚಿತ್ರೀಕರಣದ ವೇಳೆ ಸಾಕಷ್ಟು ಸಮಸ್ಯೆಗಳು ಆದವು. ನನಗೂ ನಿರ್ದೇಶಕನಿಗೂ ಆಗಿ ಬರಲಿಲ್ಲ. ನಿರ್ದೇಶಕ ಹಾಗೂ ನಿರ್ಮಾಪಕ ಜಗಳ ಮಾಡಿಕೊಂಡರು. ಆದರೆ ಇವೆಲ್ಲಾ ಸಿನಿಮಾದ ಮೇಲೆ ಪ್ರಭಾವ ಬೀರದಂತೆ ನೋಡಿಕೊಂಡೆವು ಹಾಗಾಗಿ ಆ ಸಿನಿಮಾ ಚೆನ್ನಾಗಿ ಮೂಡಿಬಂದಿತು ಎಂದಿದ್ದಾರೆ ಮಾಧವನ್.

  English summary
  R Madhavan talked about movie Rhnaa Hai Terre Dil Mein as its completed 19 years. He wanted to do sequel of the movie.
  Friday, October 23, 2020, 17:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X