'ರೇಸ್-3' ಡುಬಾಕ್ ಆದರೂ, ಕಲೆಕ್ಷನ್ ನಲ್ಲಿ ಡಮ್ಮಿ ಆಗಿಲ್ಲ.!
ಸಲ್ಮಾನ್ ಖಾನ್ ಅಭಿನಯದ 'ರೇಸ್-3' ಸಿನಿಮಾಗೆ ಅಷ್ಟೇನು ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಹಾಗ್ನೋಡಿದ್ರೆ, 'ರೇಸ್-3' ಡುಬಾಕ್, ಡಬ್ಬಾ ಅಂತೆಲ್ಲಾ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು.
ವಿಮರ್ಶಕರು ಕೂಡ 'ರೇಸ್-3' ಬಗ್ಗೆ ಒಳ್ಳೆಯ ಮಾತುಗಳನ್ನಾಡಲಿಲ್ಲ. 'ರೇಸ್-3' ಬಗ್ಗೆ ತೆಗಳಿಕೆ ಹೆಚ್ಚಾಗಿದೆ. ಹೀಗಿದ್ದರೂ, ಕಲೆಕ್ಷನ್ ನಲ್ಲಿ ಮಾತ್ರ 'ರೇಸ್-3' ಹಿಂದೆ ಬಿದ್ದಿಲ್ಲ.
ವರದಿಗಳ ಪ್ರಕಾರ, 'ರೇಸ್-3' ಸಿನಿಮಾ ಎರಡು ವಾರಗಳಲ್ಲಿ ಒಂದಲ್ಲ, ಎರಡಲ್ಲ.. ಬರೋಬ್ಬರಿ ಮುನ್ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸನ್ನಿಹದಲ್ಲಿದೆ. ನೀವು ನಂಬಿದ್ರೂ, ಬಿಟ್ಟರೂ.. ಇದೇ ಸತ್ಯ.! ಮುಂದೆ ಓದಿರಿ...

ಮುನ್ನೂರು ಕೋಟಿ ಕಲೆಕ್ಷನ್
ರಿಲೀಸ್ ಆದ ಎರಡು ವಾರಗಳಲ್ಲಿ ರೆಮೋ ಡಿಸೋಜಾ ನಿರ್ದೇಶನದ 'ರೇಸ್-3' ಸಿನಿಮಾ ವರ್ಲ್ಡ್ ವೈಡ್ 300 ಕೋಟಿ ಕಲೆಕ್ಷನ್ ಮಾಡುವ ಹೊಸ್ತಿಲಲ್ಲಿದೆ. ಭಾರತದಲ್ಲಿ 'ಪದ್ಮಾವತ್' ಆದ್ಮೇಲೆ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ 'ರೇಸ್-3' ಅಂದ್ರೆ ನೀವು ನಂಬಲೇಬೇಕು.

ಭಾರತದಲ್ಲಿ 'ರೇಸ್-3' ಮಾಡಿರುವ ಕಲೆಕ್ಷನ್ ಎಷ್ಟು.?
ಭಾರತದ ಮಾತ್ರದಲ್ಲಿಯೇ 'ರೇಸ್-3' ಸಿನಿಮಾ ಎರಡು ವಾರಗಳಲ್ಲಿ 170 ಕೋಟಿ ಕಲೆಕ್ಷನ್ ಮಾಡಿದೆ. 'ರೇಸ್-3' ಬಗ್ಗೆ ಟ್ರೋಲ್ ಗಳೇ ಹೆಚ್ಚಾಗಿದ್ದರೂ, ಈ ಪಾಟಿ ಕಲೆಕ್ಷನ್ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ.

ಹಕ್ಕುಗಳಿಂದ 200 ಕೋಟಿ
ಪ್ರಸಾರ ಹಕ್ಕುಗಳು, ಡಿಜಿಟಲ್, ಮ್ಯೂಸಿಕ್ ರೈಟ್ಸ್ ನಿಂದಲೇ 'ರೇಸ್-3' ಸಿನಿಮಾ ಸುಮಾರು 200 ಕೋಟಿ ಗಳಿಸಿತ್ತು ಅನ್ನೋದು ನಿಮಗೆ ಗೊತ್ತಾ.? ಬಿಡುಗಡೆಗೂ ಮುನ್ನವೇ ಸ್ಯಾಟೆಲೈಟ್ ರೈಟ್ಸ್ ಲೆಕ್ಕಾಚಾರದಲ್ಲಿ ದಾಖಲೆ ಮಾಡಿದ್ದ 'ರೇಸ್-3' ಇದೀಗ ಕಲೆಕ್ಷನ್ ವಿಚಾರದಲ್ಲೂ ರೆಕಾರ್ಡ್ ಬ್ರೇಕ್ ಮಾಡುತ್ತಿದೆ.

ಸಲ್ಮಾನ್ ಜನಪ್ರಿಯತೆ ಕಾರಣ
ಕಲೆಕ್ಷನ್ ನಲ್ಲಿ 'ರೇಸ್-3' ಸಿನಿಮಾ ದಾಖಲೆ ಬರೆಯಲು ಸಲ್ಮಾನ್ ಖಾನ್ ಜನಪ್ರಿಯತೆ ಕಾರಣ ಅನ್ನೋದು ಟ್ರೇಡ್ ಎಕ್ಸ್ ಪರ್ಟ್ ಗಳ ಅಭಿಪ್ರಾಯ. 'ರೇಸ್-3' ಬಗ್ಗೆ ಒಳ್ಳೆಯ ಟಾಕ್ ಇಲ್ಲದೇ ಇದ್ದರೂ, ಸಲ್ಮಾನ್ ಪಾಪ್ಯುಲಾರಿಟಿಯಿಂದ ಸಿನಿಮಾ ಹಿಟ್ ಆಗಿದೆ.


Click it and Unblock the Notifications











