twitter
    For Quick Alerts
    ALLOW NOTIFICATIONS  
    For Daily Alerts

    'ರೇಸ್-3' ಡುಬಾಕ್ ಆದರೂ, ಕಲೆಕ್ಷನ್ ನಲ್ಲಿ ಡಮ್ಮಿ ಆಗಿಲ್ಲ.!

    By Harshitha
    |

    ಸಲ್ಮಾನ್ ಖಾನ್ ಅಭಿನಯದ 'ರೇಸ್-3' ಸಿನಿಮಾಗೆ ಅಷ್ಟೇನು ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಹಾಗ್ನೋಡಿದ್ರೆ, 'ರೇಸ್-3' ಡುಬಾಕ್, ಡಬ್ಬಾ ಅಂತೆಲ್ಲಾ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು.

    ವಿಮರ್ಶಕರು ಕೂಡ 'ರೇಸ್-3' ಬಗ್ಗೆ ಒಳ್ಳೆಯ ಮಾತುಗಳನ್ನಾಡಲಿಲ್ಲ. 'ರೇಸ್-3' ಬಗ್ಗೆ ತೆಗಳಿಕೆ ಹೆಚ್ಚಾಗಿದೆ. ಹೀಗಿದ್ದರೂ, ಕಲೆಕ್ಷನ್ ನಲ್ಲಿ ಮಾತ್ರ 'ರೇಸ್-3' ಹಿಂದೆ ಬಿದ್ದಿಲ್ಲ.

    ವರದಿಗಳ ಪ್ರಕಾರ, 'ರೇಸ್-3' ಸಿನಿಮಾ ಎರಡು ವಾರಗಳಲ್ಲಿ ಒಂದಲ್ಲ, ಎರಡಲ್ಲ.. ಬರೋಬ್ಬರಿ ಮುನ್ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸನ್ನಿಹದಲ್ಲಿದೆ. ನೀವು ನಂಬಿದ್ರೂ, ಬಿಟ್ಟರೂ.. ಇದೇ ಸತ್ಯ.! ಮುಂದೆ ಓದಿರಿ...

    ಮುನ್ನೂರು ಕೋಟಿ ಕಲೆಕ್ಷನ್

    ಮುನ್ನೂರು ಕೋಟಿ ಕಲೆಕ್ಷನ್

    ರಿಲೀಸ್ ಆದ ಎರಡು ವಾರಗಳಲ್ಲಿ ರೆಮೋ ಡಿಸೋಜಾ ನಿರ್ದೇಶನದ 'ರೇಸ್-3' ಸಿನಿಮಾ ವರ್ಲ್ಡ್ ವೈಡ್ 300 ಕೋಟಿ ಕಲೆಕ್ಷನ್ ಮಾಡುವ ಹೊಸ್ತಿಲಲ್ಲಿದೆ. ಭಾರತದಲ್ಲಿ 'ಪದ್ಮಾವತ್' ಆದ್ಮೇಲೆ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ 'ರೇಸ್-3' ಅಂದ್ರೆ ನೀವು ನಂಬಲೇಬೇಕು.

    ಸಲ್ಮಾನ್ ಖಾನ್ ಗೆ ಮತ್ತೆ ಯಶಸ್ಸು ತಂದು ಕೊಡುವುದೇ 'ರಂಜಾನ್'.?ಸಲ್ಮಾನ್ ಖಾನ್ ಗೆ ಮತ್ತೆ ಯಶಸ್ಸು ತಂದು ಕೊಡುವುದೇ 'ರಂಜಾನ್'.?

    ಭಾರತದಲ್ಲಿ 'ರೇಸ್-3' ಮಾಡಿರುವ ಕಲೆಕ್ಷನ್ ಎಷ್ಟು.?

    ಭಾರತದಲ್ಲಿ 'ರೇಸ್-3' ಮಾಡಿರುವ ಕಲೆಕ್ಷನ್ ಎಷ್ಟು.?

    ಭಾರತದ ಮಾತ್ರದಲ್ಲಿಯೇ 'ರೇಸ್-3' ಸಿನಿಮಾ ಎರಡು ವಾರಗಳಲ್ಲಿ 170 ಕೋಟಿ ಕಲೆಕ್ಷನ್ ಮಾಡಿದೆ. 'ರೇಸ್-3' ಬಗ್ಗೆ ಟ್ರೋಲ್ ಗಳೇ ಹೆಚ್ಚಾಗಿದ್ದರೂ, ಈ ಪಾಟಿ ಕಲೆಕ್ಷನ್ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ.

    'ದಬ್ಬಂಗ್-3' ಬೇಡವೇ ಬೇಡ: ಟ್ವಿಟ್ಟರ್ ನಲ್ಲಿ ಸಲ್ಮಾನ್ ಅಭಿಮಾನಿಗಳ ಆಗ್ರಹ.!'ದಬ್ಬಂಗ್-3' ಬೇಡವೇ ಬೇಡ: ಟ್ವಿಟ್ಟರ್ ನಲ್ಲಿ ಸಲ್ಮಾನ್ ಅಭಿಮಾನಿಗಳ ಆಗ್ರಹ.!

    ಹಕ್ಕುಗಳಿಂದ 200 ಕೋಟಿ

    ಹಕ್ಕುಗಳಿಂದ 200 ಕೋಟಿ

    ಪ್ರಸಾರ ಹಕ್ಕುಗಳು, ಡಿಜಿಟಲ್, ಮ್ಯೂಸಿಕ್ ರೈಟ್ಸ್ ನಿಂದಲೇ 'ರೇಸ್-3' ಸಿನಿಮಾ ಸುಮಾರು 200 ಕೋಟಿ ಗಳಿಸಿತ್ತು ಅನ್ನೋದು ನಿಮಗೆ ಗೊತ್ತಾ.? ಬಿಡುಗಡೆಗೂ ಮುನ್ನವೇ ಸ್ಯಾಟೆಲೈಟ್ ರೈಟ್ಸ್ ಲೆಕ್ಕಾಚಾರದಲ್ಲಿ ದಾಖಲೆ ಮಾಡಿದ್ದ 'ರೇಸ್-3' ಇದೀಗ ಕಲೆಕ್ಷನ್ ವಿಚಾರದಲ್ಲೂ ರೆಕಾರ್ಡ್ ಬ್ರೇಕ್ ಮಾಡುತ್ತಿದೆ.

    'ರೇಸ್-3' ಬಕ್ವಾಸ್ ಸಿನಿಮಾ: ಆಡಿಕೊಂಡು ನಗುತ್ತಿದ್ದಾರೆ ಜನ.!'ರೇಸ್-3' ಬಕ್ವಾಸ್ ಸಿನಿಮಾ: ಆಡಿಕೊಂಡು ನಗುತ್ತಿದ್ದಾರೆ ಜನ.!

    ಸಲ್ಮಾನ್ ಜನಪ್ರಿಯತೆ ಕಾರಣ

    ಸಲ್ಮಾನ್ ಜನಪ್ರಿಯತೆ ಕಾರಣ

    ಕಲೆಕ್ಷನ್ ನಲ್ಲಿ 'ರೇಸ್-3' ಸಿನಿಮಾ ದಾಖಲೆ ಬರೆಯಲು ಸಲ್ಮಾನ್ ಖಾನ್ ಜನಪ್ರಿಯತೆ ಕಾರಣ ಅನ್ನೋದು ಟ್ರೇಡ್ ಎಕ್ಸ್ ಪರ್ಟ್ ಗಳ ಅಭಿಪ್ರಾಯ. 'ರೇಸ್-3' ಬಗ್ಗೆ ಒಳ್ಳೆಯ ಟಾಕ್ ಇಲ್ಲದೇ ಇದ್ದರೂ, ಸಲ್ಮಾನ್ ಪಾಪ್ಯುಲಾರಿಟಿಯಿಂದ ಸಿನಿಮಾ ಹಿಟ್ ಆಗಿದೆ.

    ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಕ್ಸಸ್ ಹಿಂದಿನ ಸೂತ್ರಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಕ್ಸಸ್ ಹಿಂದಿನ ಸೂತ್ರ

    English summary
    Bollywood Actor Salman Khan starrer Race 3 is all set to cross 300 crore mark world wide.
    Sunday, July 1, 2018, 16:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X