TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ದಬ್ಬಂಗ್-3' ಬೇಡವೇ ಬೇಡ: ಟ್ವಿಟ್ಟರ್ ನಲ್ಲಿ ಸಲ್ಮಾನ್ ಅಭಿಮಾನಿಗಳ ಆಗ್ರಹ.!
ಪ್ರತಿ ಬಾರಿಯಂತೆ ಈ ವರ್ಷದ ರಂಝಾನ್ 'ಬಾಕ್ಸ್ ಆಫೀಸ್ ಟೈಗರ್' ಸಲ್ಮಾನ್ ಖಾನ್ ಕೈಹಿಡಿಯಲಿಲ್ಲ. 'ರೇಸ್-3' ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಲಿಲ್ಲ. ಕಲೆಕ್ಷನ್ ನಲ್ಲೂ ಅಂಥ ದಾಖಲೆ ಮಾಡಲಿಲ್ಲ.
ಗಟ್ಟಿತನ ಇಲ್ಲದ ಕಥೆ, ಡುಬಾಕ್ ಆಕ್ಷನ್, ಡಮ್ಮಿ ಡೈಲಾಗ್ಸ್... ಇವೆಲ್ಲವನ್ನೂ ನೋಡಿ ಪ್ರೇಕ್ಷಕರಿಗೆ ತಲೆ ಬಿಸಿಯಾಗಿದೆ. ಪ್ರೇಕ್ಷಕರಿರಲಿ, ಸಲ್ಮಾನ್ ಅಭಿಮಾನಿಗಳಿಗೂ 'ರೇಸ್-3' ಕಿರಿಕಿರಿ ತಂದಿದೆ.
'ರೇಸ್-3' ನೋಡಿ ನಿರಾಸೆ ಪಟ್ಟಿರುವ ಸಲ್ಮಾನ್ ಖಾನ್ ಭಕ್ತರು ''ದಯವಿಟ್ಟು 'ದಬ್ಬಂಗ್-3' ಸಿನಿಮಾ ಮಾಡಲೇಬೇಡಿ'' ಅಂತ ಟ್ವಿಟ್ಟರ್ ನಲ್ಲಿ ಒತ್ತಾಯ ಮಾಡುತ್ತಿದ್ದಾರೆ. #WeDontWantDabangg3 ಹ್ಯಾಶ್ ಟ್ಯಾಗ್ ಇಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಸಲ್ಮಾನ್ ರವರ 'ರೇಸ್-3' ಚಿತ್ರ ಪ್ರೇಕ್ಷಕರಲ್ಲಿ ಯಾವ ಮಟ್ಟಕ್ಕೆ ರೇಜಿಗೆ ಹುಟ್ಟಿಸಿದೆ ಅನ್ನೋದಕ್ಕೆ ಸಾಕ್ಷಿ ಈ ಟ್ವೀಟ್ ಗಳು... ಬೇಕಾದ್ರೆ, ನೀವೇ ನೋಡಿ...
ಬರ್ಬಾದ್ ಮಾಡಬೇಡಿ.!
''ಸಲ್ಲು ಭಾಯ್ ದಯವಿಟ್ಟು 'ದಬ್ಬಂಗ್' ಸರಣಿಯನ್ನ ಬರ್ಬಾದ್ ಮಾಡಬೇಡಿ. ಒಳ್ಳೆಯ ನಿರ್ದೇಶಕರು ಹಾಗೂ ಸಹ ಕಲಾವಿದರ ಜೊತೆಗೆ ಸಿನಿಮಾ ಮಾಡಿ. 'ರೇಸ್-3' ಅಂತಹ ಮತ್ತೊಂದು ಸಿನಿಮಾ ಮಾಡಬೇಡಿ'' ಎನ್ನುವುದು ಅಭಿಮಾನಿಗಳ ಆಗ್ರಹ.
'ರೇಸ್-3' ಬಕ್ವಾಸ್ ಸಿನಿಮಾ: ಆಡಿಕೊಂಡು ನಗುತ್ತಿದ್ದಾರೆ ಜನ.!
ಸಾಲು ಸಾಲು ಟ್ವೀಟ್ ಗಳು.!
''ದಬ್ಬಂಗ್' ಮಾತ್ರ ಅಲ್ಲ. ಸಲ್ಮಾನ್ ಇನ್ಮುಂದೆ ಯಾವುದೇ ಚಿತ್ರ ಮಾಡಬಾರದು'' ಅಂತ ಟ್ವೀಟ್ ಮಾಡಿರುವವರೂ ಇದ್ದಾರೆ.
ಕಥೆ ಬಗ್ಗೆ ಗಮನ ಹರಿಸಿ
''ಚಿತ್ರದ ಕಥೆ ಬಗ್ಗೆ ಗಮನ ಹರಿಸಿ ಅನ್ನೋದೇ ಸಲ್ಮಾನ್ ಗೆ ನನ್ನ ದೊಡ್ಡ ಕೋರಿಕೆ. ನಮಗೆ 'ದಬ್ಬಂಗ್-3', 'ಕಿಕ್-2', 'ರೇಸ್-4'... ಇದ್ಯಾವುದೂ ಬೇಡ. ಎಲ್ಲಕ್ಕಿಂತ ಹೆಚ್ಚಾಗಿ ಸಲ್ಮಾನ್ ಚಿತ್ರಗಳಲ್ಲಿ ಇನ್ಮುಂದೆ ರೆಮೋ ಡಿಸೋಜಾ ಹಾಗೂ ಡೈಸಿ ಇರಬಾರದು'' ಎಂದು ಸಲ್ಮಾನ್ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಬೋರ್ ಆಗಿದೆ
ಸಲ್ಮಾನ್ ಖಾನ್ ರವರ ಸ್ಕ್ರಿಪ್ಟ್ ಚಾಯ್ಸ್ ಅಭಿಮಾನಿಗಳಿಗೆ ಬೋರ್ ತಂದಿದೆ. ಅದಕ್ಕೆ ಸಾಕ್ಷಿ ಈ ಟ್ವೀಟ್.