'ರೇಸ್-3' ಬಕ್ವಾಸ್ ಸಿನಿಮಾ: ಆಡಿಕೊಂಡು ನಗುತ್ತಿದ್ದಾರೆ ಜನ.!
ಮೊದಲೆರಡು ಆವೃತ್ತಿಗಳಂತೆ 'ರೇಸ್-3' ಸಿನಿಮಾಗಳಲ್ಲಿ ಮೈನವಿರೇಳಿಸುವ ಸ್ಟಂಟ್ಸ್ ಇರುತ್ತೆ, ಭರ್ಜರಿ ಮನರಂಜನೆ ಸಿಗುತ್ತೆ ಅಂತ ಥಿಯೇಟರ್ ಒಳಗೆ ಹೊಕ್ಕ ಪ್ರೇಕ್ಷಕನಿಗೆ ಆಗಿದ್ದು ದೊಡ್ಡ ಮಟ್ಟದ ನಿರಾಸೆ.!
'ರೇಸ್-3' ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಮಟ್ಟವನ್ನ ತಲುಪುವಲ್ಲಿ ವಿಫಲ ಆಗಿದೆ. ಗಟ್ಟಿತನ ಇಲ್ಲದ ಕಥೆ, ಸಾಮಾನ್ಯ ಎನಿಸುವ ಸ್ಟಂಟ್ ಗಳನ್ನು ನೋಡಿ ಪ್ರೇಕ್ಷಕ ಮಹಾಪ್ರಭುವಿಗೆ ತಲೆ ನೋವು ಬಂದಿದೆ.
ಅಭಿಮಾನಿಗಳ ಕುತೂಹಲ ಹಾಗೂ ನಿರೀಕ್ಷೆಗೆ ಬಕೆಟ್ ಗಟ್ಟಲೆ ತಣ್ಣೀರೆರಚಿದ 'ರೇಸ್-3' ಸಿನಿಮಾ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. 'ರೇಸ್-3' ಬಗ್ಗೆ ನೆಟ್ಟಿಗರು ಆಡಿಕೊಂಡು ನಗುತ್ತಿದ್ದಾರೆ. ಬೇಕಾದ್ರೆ, ನೀವೇ ನೋಡಿ...

ಪೂರಾ ಬಕ್ವಾಸ್ ಸಿನಿಮಾ
'ರೇಸ್-3' ಸಿನಿಮಾ ಬಕ್ವಾಸ್ ಆಗಿದೆ ಅಂತ ಹೇಳಲು 'ಸಂಜು' ಚಿತ್ರದ ಸೀರಿಯಸ್ ಸೀನ್ ಬಳಸಿಕೊಂಡು ಟ್ರೋಲ್ ಮಾಡಲಾಗಿದೆ.

ಅಭಿಶೇಕ್ ಬಚ್ಚನ್ ಹೆಸರಿನಲ್ಲಿ ಟ್ರೋಲ್
''ನನ್ನೆಲ್ಲಾ ಸಿನಿಮಾಗಳು ಕಲೆಕ್ಟ್ ಮಾಡಿರುವುದಕ್ಕಿಂತ ಹೆಚ್ಚು 'ರೇಸ್-3' ಸಿನಿಮಾ ಕೆಲವೇ ಕೆಲವು ದಿನಗಳಲ್ಲಿ ಕಲೆಕ್ಟ್ ಮಾಡಿದೆ. ನಾನು ಮಾತನಾಡುತ್ತಿರುವುದು ಮೊಟ್ಟೆ, ಟೊಮ್ಯಾಟೋ ಹಾಗೂ ಚಪ್ಪಲಿಗಳ ಬಗ್ಗೆ'' ಎಂದು ಅಭಿಶೇಕ್ ಬಚ್ಚನ್ ಹೆಸರಿನಲ್ಲಿ ಜನ 'ರೇಸ್-3' ಚಿತ್ರತಂಡದ ಕಾಲೆಳೆಯುತ್ತಿದ್ದಾರೆ.

'3D'ಯಲ್ಲಿ ರಿಲೀಸ್ ಆದರೆ...
'ರೇಸ್-3' ಚಿತ್ರ '3D'ಯಲ್ಲಿ ರಿಲೀಸ್ ಆದರೆ ಸಲ್ಮಾನ್ ಖಾನ್ ಹಾಗೂ ಡೈಸಿ ಶಾ ಸ್ಕ್ರೀನ್ ನಿಂದ ಹೊರಬಂದು ಫಿಸಿಕ್ಸ್ ಹಾಗೂ ಬಿಸಿನೆಸ್ ಕಾನ್ಸೆಪ್ಟ್ ಕಲಿಸುತ್ತಾರಂತೆ.

ಧೈರ್ಯ ಇದ್ಯಾ.?
''ರೇಸ್-3' ಸಿನಿಮಾ ನೋಡಿದ್ಮೇಲೂ ಜನ ಬದುಕಿದ್ದಾರೆ ಅಂದ್ರೆ, ಅವರ ಧೈರ್ಯ ಮೆಚ್ಚಲೇಬೇಕು ತಾನೆ.?''

ಥಿಯೇಟರ್ ನಲ್ಲಿ ಕಸ ಹಾಕಿದ್ದು ಯಾಕೆ.?
ಕಾರಿನಿಂದ ಪ್ಲಾಸ್ಟಿಕ್ ಬಿಸಾಕಿದವನಿಗೆ ಅನುಷ್ಕಾ ಶರ್ಮಾ ಮಂಗಳಾರತಿ ಮಾಡಿದ್ದು ನೆನಪಿದೆ ತಾನೇ.? ಅದೇ ಸನ್ನಿವೇಶ ಇಟ್ಟುಕೊಂಡು ರೆಡಿ ಆಗಿರುವ ಟ್ರೋಲ್ ಇದು. ಥಿಯೇಟರ್ ನಲ್ಲಿ 'ರೇಸ್-3' ಎಂಬ ಕಸ ಬಿಸಾಕಿದ ನಿರ್ದೇಶಕ ರೆಮೋ ಡಿಸೋಜಾಗೆ ಅನುಷ್ಕಾ ಶರ್ಮಾ ಕ್ಲಾಸ್ ತೆಗೆದುಕೊಂಡರೆ ಹೇಗೆ.?

ಸಲ್ಮಾನ್ ಖಾನ್ ಗೆ ಏನಾಗಿದೆ.?
ಸಲ್ಮಾನ್ ಖಾನ್ ಗೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ತಿಲ್ವಾ.? ರಾಹುಲ್ ಗಾಂಧಿಗೂ ಡೌಟ್ ಬಂದಿದೆ.!


Click it and Unblock the Notifications











