ಸಚಿನ್-ಕೊಹ್ಲಿ ದಾಖಲೆ ಉಡೀಸ್ ಮಾಡ್ತಾರೆ ಸಲ್ಮಾನ್ ಖಾನ್.!

By Bharath Kumar

ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಹೇಗೆ ಸೆಂಚುರಿ ಬಾರಿಸಿ ದಾಖಲೆಗಳನ್ನ ನಿರ್ಮಿಸಿದ್ದಾರೋ, ಕೊಹ್ಲಿ ಹೇಗೆ ದಾಖಲೆ ಮಾಡುತ್ತಾ ಹೋಗ್ತಿದ್ದಾರೋ, ಅದೇ ರೀತಿ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ತಮ್ಮ ಚಿತ್ರಗಳ ಕಲೆಕ್ಷನ್ ನ್ನ ಸೆಂಚುರಿ ಕ್ಲಬ್ ಸೇರಿಸಿ ದಾಖಲೆ ಶೂರ ಎನಿಸಿಕೊಂಡಿದ್ದಾರೆ. ಬಹುಶಃ ಸಲ್ಲು ಚಿತ್ರಗಳ ಕಲೆಕ್ಷನ್ ದಾಖಲೆಗಳನ್ನ ನೋಡ್ತಿದ್ರೆ, ಸಚಿನ್ ಮತ್ತು ಕೊಹ್ಲಿ ಸೆಂಚುರಿ ದಾಖಲೆಗಳನ್ನ ಮುರಿಯಬಹುದು ಎನ್ನಿಸುತ್ತಿದೆ.

ಸಲ್ಮಾನ್ ಅಭಿನಯದ 'ರೇಸ್-3' ಸಿನಿಮಾ ರಂಜಾನ್ ಹಬ್ಬದ ಪ್ರಯುಕ್ತ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮೊದಲ ಮೂರು ದಿನಗಳಲ್ಲೇ 100 ಕೋಟಿ ಗಳಿಸುವ ಮೂಲಕ ಸಲ್ಲು ಅಭಿನಯದ 13ನೇ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ದಾಖಲೆ ಮಾಡಿದ್ದಾರೆ. ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾರೇ ಸಲ್ಮಾನ್ ಖಾನ್ 13ನೇ ಸೆಂಚುರಿ ಬಾರಿಸಿದ್ದಾರೆ.

ಸದ್ಯ, ಬಾಲಿವುಡ್ ನೂರು ಕೋಟಿ ಕ್ಲಬ್ ನಲ್ಲಿ ಶಾರೂಖ್ ಖಾನ್, ಅಮೀರ್ ಖಾನ್ ಅಂತಹ ದಿಗ್ಗಜ ನಟರನ್ನ ಹಿಂದಿಕ್ಕಿರುವ ಸಲ್ಲು ಅತಿ ಹೆಚ್ಚು 100 ಕೋಟಿ ಸಿನಿಮಾಗಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಹಾಗಿದ್ರೆ, ಸಲ್ಲು ಅಭಿನಯದ ಯಾವೆಲ್ಲ ಚಿತ್ರಗಳು ನೂರು ಕೋಟಿ ಗಡಿದಾಟಿದೆ. ಮುಂದೆ ಓದಿ....

ಮೊದಲ ನೂರು ಕೋಟಿ ಗಳಿಸಿದ 'ದಬಾಂಗ್'

ಮೊದಲ ನೂರು ಕೋಟಿ ಗಳಿಸಿದ 'ದಬಾಂಗ್'

2010ರಲ್ಲಿ ಬಿಡುಗಡೆಯಾಗಿದ್ದ 'ದಬಾಂಗ್' ಸಿನಿಮಾ ಸಲ್ಮಾನ್ ಖಾನ್ ಅಭಿನಯದಲ್ಲಿ ನೂರು ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ. ಪೊಲೀಸ್ ಪಾತ್ರದಲ್ಲಿ ಮಿಂಚಿದ್ದ ಸಲ್ಲು ಭಾಯ್ ಈ ಚಿತ್ರದಿಂದ ಬಾಲಿವುಡ್ ನಲ್ಲಿ ಹೊಸ ಕಿಂಗ್ ಆದರು.

ಹ್ಯಾಟ್ರಿಕ್ ಬಾರಿಸಿದ ಸಲ್ಲು

ಹ್ಯಾಟ್ರಿಕ್ ಬಾರಿಸಿದ ಸಲ್ಲು

'ದಬಾಂಗ್' ನಂತರ ಸಲ್ಮಾನ್ ಖಾನ್ ಹವಾ ಹೆಚ್ಚಾಯಿತು. ಸಲ್ಲು ಮಾರ್ಕೆಟ್ ವ್ಯಾಲ್ಯೂ ಗಗನಕ್ಕೇರಿತು. ಬಾಕ್ಸ್ ಆಫೀಸ್ ನಲ್ಲಿ ಖಾನ್ ಚಿತ್ರಗಳಿಗೆ ಬೇಡಿಕೆ ಹೆಚ್ಚಿತು. ಇದರ ಪರಿಣಾಮ 'ದಬಾಂಗ್' ಚಿತ್ರದ ನಂತರ ಬಂದ 'ರೆಡಿ' ಹಾಗೂ 'ಬಾಡಿಗಾರ್ಡ್' ಸಿನಿಮಾಗಳು ನೂರು ಕೋಟಿ ಗಳಿಸುವ ಮೂಲಕ ಹ್ಯಾಟ್ರಿಕ್ ದಾಖಲೆಯಾಯಿತು.

ಅಲ್ಲಿಂದ ಟ್ರೆಂಡ್ ಆಯ್ತು

ಅಲ್ಲಿಂದ ಟ್ರೆಂಡ್ ಆಯ್ತು

ಹೀಗೆ, ಬ್ಯಾಕ್ ಟು ಬ್ಯಾಕ್ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಗೆಲ್ಲೋಕೆ ಆರಂಭವಾಯಿತು. ನೂರು ಕೋಟಿ ಎನ್ನುವುದು ಸಲ್ಲು ಚಿತ್ರಗಳಿಗೆ ಸಾಮಾನ್ಯವಾಗಿಬಿಡ್ತು. 'ಏಕ್ತಾ ಟೈಗರ್' ಮತ್ತು 'ದಬಾಂಗ್ 2' ಚಿತ್ರಗಳು ಕೂಡ ನೂರು ಕೋಟಿ ಗಳಿಸಿದವು. ಸಲ್ಮಾನ್ ಖಾನ್ ಸಿನಿಮಾ ಅಂದ್ರೆ ನೂರು ಕೋಟಿ ಪಕ್ಕಾ ಆಯಿತು.

'ಜೈ ಹೋ' ಎಂದು ಸಲ್ಲು ಎಲ್ಲರಿಗೂ 'ಕಿಕ್' ಕೊಟ್ಟರು

'ಜೈ ಹೋ' ಎಂದು ಸಲ್ಲು ಎಲ್ಲರಿಗೂ 'ಕಿಕ್' ಕೊಟ್ಟರು

ನಂತರ ತೆರೆಕಂಡ 'ಜೈ ಹೋ' ಮತ್ತು 'ಕಿಕ್' ಸಿನಿಮಾಗಳು ಕೂಡ ನೂರು ಕೋಟಿಯನ್ನ ಬಾಚಿತು. ಹೀಗೆ, ಸಲ್ಮಾನ್ ಚಿತ್ರಗಳು ಹೇಗೇ ಇದ್ದರೂ ಕಲೆಕ್ಷನ್ ಮಾತ್ರ ಪಕ್ಕಾ ಆಯಿತು. ನೂರು ಕೋಟಿ ಗಳಿಸಲು ಪರದಾಡುತ್ತಿದ್ದ ಕಾಲದಲ್ಲಿ ಸಲ್ಲು ಭಾಯ್ ಚಿತ್ರಗಳು ಮೂರ್ನಾಲ್ಕು ದಿನಗಳಲ್ಲಿ ನೂರು ಕೋಟಿ ಗಳಿಸಿತು.

ದಾಖಲೆ ನಿರ್ಮಿಸಿದ 'ಭಜರಂಗಿ ಭಾಯಿಜಾನ್'

ದಾಖಲೆ ನಿರ್ಮಿಸಿದ 'ಭಜರಂಗಿ ಭಾಯಿಜಾನ್'

ಬರಿ ನೂರು ಕೋಟಿಗಳಿಸುವುದು ಮಾತ್ರವಲ್ಲ, ಅತಿ ಹೆಚ್ಚು ಕೆಲಕ್ಷನ್ ನಲ್ಲೂ ಸಲ್ಮಾನ್ ಖಾನ್ ದಾಖಲೆ ನಿರ್ಮಿಸಿದರು. ಇದುವರೆಗೂ ಸಲ್ಲು ಸಿನಿಮಾಗಳಲ್ಲಿ ಅತಿ ಹೆಚ್ಚ ಹಣ ಗಳಿಸಿರುವ ಸಿನಿಮಾ 'ಭಜರಂಗಿ ಭಾಯಿಜಾನ್'. ಇದಾದ ನಂತರ ಬಂದ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರವೂ ಇದೇ ಹಾದಿಯಲ್ಲಿ ಸಾಗಿತು.

'ಸುಲ್ತಾನ್' ಹಿಟ್, 'ಟ್ಯೂಬ್ ಲೈಟ್' ಫ್ಲ್ಯಾಪ್

'ಸುಲ್ತಾನ್' ಹಿಟ್, 'ಟ್ಯೂಬ್ ಲೈಟ್' ಫ್ಲ್ಯಾಪ್

ನಂತರ ಬಿಡುಗಡೆಯಾದ 'ಸುಲ್ತಾನ್' ಸಿನಿಮಾ ಬಾಕ್ಸ ಆಫೀಸ್ ಚಿಂದಿ ಉಡಾಯಿಸಿತು. ಇನ್ನು ಇದಾದ ಬಳಿಕ ತೆರೆಕಂಡ ಟ್ಯೂಬ್ ಲೈಟ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲು ಮಕಾಡೆ ಮಲಗಿತು, ಸಿನಿಮಾ ವಿಮರ್ಶೆ ಕೂಡ ಕಳಪೆಯಾಗಿತ್ತು. ಆದ್ರೆ, ಈ ಸಿನಿಮಾನೂ ನೂರು ಕೋಟಿ ಗಳಿಸುವಲ್ಲಿ ಯಶಸ್ವಿಯಾಯಿತು.

'ಟೈಗರ್ ಜಿಂದಾ ಹೈ' ಮತ್ತು 'ರೇಸ್'

'ಟೈಗರ್ ಜಿಂದಾ ಹೈ' ಮತ್ತು 'ರೇಸ್'

ಕಳೆದ ವರ್ಷದ ಡಿಸೆಂಬರ್ ನಲ್ಲಿ ರಿಲೀಸ್ ಆಗಿದ್ದ 'ಟೈಗರ್ ಜಿಂದಾ ಹೈ' ಚಿತ್ರ ಸಲ್ಮಾನ್ ಖಾನ್ ವೃತ್ತಿ ಜೀವನದ ಮತ್ತೊಂದು ಹಿಟ್ ಸಿನಿಮಾ. ಈ ಚಿತ್ರವೂ ನೂರು ಕೋಟಿ ಕ್ಲಬ್ ಸೇರಿದೆ. ಇದೀಗ, 'ರೇಸ್-3' ಸಿನಿಮಾ ಮೂರೇ ದಿನದಲ್ಲೇ ನೂರು ಕೋಟಿ ಗಳಿಕೆ ಕಂಡಿದೆ. ಬಹುಶಃ ಇನ್ಮುಂದೆ ಸಲ್ಮಾನ್ ಖಾನ್ ಸಿನಿಮಾ ನೂರು ಕೋಟಿ ಗಳಿಸಿಲ್ಲ ಅಂದ್ರೆ ಮಾತ್ರ ಸುದ್ದಿಯಾಗಬೇಕಿದೆ.

More from Filmibeat

English summary
Race 3 is Salman Khan's 13th film to enter Rs 100 cr club. Here's a look at his other blockbusters. The film has entered the coveted Rs 100 crore club with collections going upto Rs 120.71 crore in four days of its release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X